ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ..?- ಬಿ.ಸಿ.ನಾಗೇಶ್ ಗರಂ

Public TV
1 Min Read

ಬೆಂಗಳೂರು: ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳ್ಬೇಕಿತ್ತಾ? ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಶ್ನಿಸಿದ್ದಾರೆ.

TEXTBOOK

ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಮಕ್ಕಳಿಗೆ ಸಾವಿನ ಬಗ್ಗೆ ಓದಿಸೋ ಅವಶ್ಯಕತೆ ಇತ್ತಾ? ಸೆಕ್ಸ್ ಬಗ್ಗೆ ಚಿಕ್ಕ ಮಕ್ಕಳಿಗೆ ಹೇಳಬೇಕಿತ್ತಾ? ಇದೆಲ್ಲವನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿತ್ತು. ಒಡೆಯರ್ ಬಗ್ಗೆ ಯಾಕೆ ಪಠ್ಯ ಬಿಟ್ಟಿದ್ದರು? ಬೆಂಗಳೂರಿನಲ್ಲಿ ದೇವಸ್ಥಾನ ಇರಲಿಲ್ಲವಾ? ಯಾಕೆ ದೇವಾಲಯದ ಫೋಟೋ ಹಾಕಿಲ್ಲ? ಈಗ ಇದನ್ನ ಸರಿ ಮಾಡುವ ಕೆಲಸ ಮಾಡುತ್ತಿದ್ದೇವೆ. ಅದನ್ನೂ ವಿವಾದಕ್ಕೆ ಎಳೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ವಜಾ? – ಸಚಿವರ ವರದಿ ಆಧರಿಸಿ ಕ್ರಮ ಕೈಗೊಳ್ತೇನೆಂದ ಸಿಎಂ

Text book

ಗೊಂದಲವಿದ್ದರೆ ನಾನೇ ಪರಿಹಾರ ಮಾಡ್ತೇನೆ: ಮೊದಲು ಟಿಪ್ಪು ಅಂದ್ರು, ಅಮೇಲೆ ಭಗತ್ ಸಿಂಗ್ ಬಗ್ಗೆ ವಿವಾದ ಮಾಡಿದ್ರು, ನಂತರ ಕುವೆಂಪು ಅಂದವರೇ ಈಗ ಬಸವಣ್ಣ ಎನ್ನುತ್ತಿದ್ದಾರೆ. ಸತ್ಯ ಹೊರಗಡೆ ಬಂದಹಾಗೇ ಅವರ ನಿಲುವು ಬದಲಾವಣೆ ಮಾಡ್ತಿದ್ದಾರೆ. ಬೇಕು ಅಂತ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಪಠ್ಯಪುಸ್ತಕದ ಬಗ್ಗೆ ಯಾರಿಗೇ ಗೊಂದಲ ಇರಲಿ. ಸ್ವಾಮೀಜಿಗಳಿಗೆ ಗೊಂದಲ ಇದ್ದರೂ ನಾನೇ ಭೇಟಿ ಮಾಡಿ ಪರಿಹಾರ ಮಾಡ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್‍ನಲ್ಲಿ ಬಹಳ ಜನ ಸ್ನೇಹಿತರಿದ್ದಾರೆ- ರಾಜಕೀಯ ದಾಳ ಉರುಳಿಸಿದ ಸಿಎಂ

bc nagesh

ಪರಿಷ್ಕರಣೆ ಕೆಲಸ ಈಗ ಮುಕ್ತಾಯ ಆಗಿದೆ. ಪದೇ ಪದೇ ಪರಿಷ್ಕರಣೆ ಮಾಡಲು ಆಗೋದಿಲ್ಲ. ಈಗಾಗಲೇ ಶೇ.75 ಪಠ್ಯಪುಸ್ತಕ ಮುದ್ರಣದ ಕಾರ್ಯ ಮುಗಿದಿದೆ. ಶೇ.66 ರಷ್ಟು BEO ಕಚೇರಿಗಳಿಗೆ ತಲುಪಿದೆ. ಕಲಿಕಾ ಚೇತರಿಕೆ ಮುಗಿಯೋ ಒಳಗೆ ಪಠ್ಯ ಪುಸ್ತಕ ತಲುಪಿಸುವ ಪ್ರಯತ್ನ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಳೆಯೂ ಮಂಗಳೂರು ಕೋರ್ಟ್‌ನಲ್ಲಿ ಮಳಲಿ ವಿಚಾರಣೆ

ಇದರಲ್ಲಿ ಬಸವಣ್ಣನವರ ಪಠ್ಯ ತೆಗೆದಿಲ್ಲ. ಆದರೆ ಬರಗೂರು ಸಮಿತಿಯಲ್ಲಿ ಏನಿತ್ತು? ಈಗ ಏನು ಸೇರ್ಪಡೆಯಾಗಿದೆ ಎಂಬುದನ್ನು ಚೆಕ್ ಮಾಡ್ತೀವಿ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *