ಧೋನಿ ಅಲ್ಲ: ಟೀಂ ಇಂಡಿಯಾದ ಚೊಚ್ಚಲ ಟಿ20 ನಾಯಕ ಯಾರು, ನಿಮಗೆ ಗೊತ್ತಾ?

Public TV
2 Min Read

ಮುಂಬೈ: ಮಹೇಂದ್ರ ಸಿಂಗ್ ಧೋನಿ ಟಿ20, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಪ್ರಮುಖ ದಾಖಲೆಯನ್ನು ಹೊಂದಿದ್ದಾರೆ. 2007-08ರಲ್ಲಿ ನಾಯಕತ್ವ ವಹಿಸಿಕೊಂಡ ಧೋನಿ, 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಗೆದ್ದಿದ್ದರು. ಅದಾದ ನಾಲ್ಕು ವರ್ಷಗಳ ನಂತರ ಅಂದ್ರೆ ಧೋನಿ ನಾಯತ್ವದಲ್ಲಿ ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. 2013ರಲ್ಲಿ ಧೋನಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಇತಿಹಾಸದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಂ.ಎಸ್.ಧೋನಿ ಭಾರತದ ಮೊಟ್ಟಮೊದಲ ಪೂರ್ಣ ಸಮಯದ ಅಂತರರಾಷ್ಟ್ರೀಯ ಟಿ20 ನಾಯಕನಾಗಿದ್ದರು. ಹೀಗಾಗಿ ಅವರೇ ಭಾರತದ ಮೊಟ್ಟಮೊದಲ ಅಂತರರಾಷ್ಟ್ರೀಯ ಟಿ20 ನಾಯಕ ಕೂಡ ಎಂದು ಅನೇಕರು ಭಾವಿಸುತ್ತಾರೆ. ಆದರೆ ಧೋನಿ ಭಾರತದ ಚೊಚ್ಚಲ ಟಿ20 ಪಂದ್ಯದ ನಾಯಕ ಅಲ್ಲ.

2006ರಲ್ಲಿ ಟೀಂ ಇಂಡಿಯಾ ಐದು ಏಕದಿನ, ಒಂದು ಟಿ20 ಮತ್ತು ಮೂರು ಟೆಸ್ಟ್ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾದಲ್ಲಿ ಪ್ರವಾಸ ಕೈಗೊಂಡಿತ್ತು. ಅಂದಿನ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಏಕದಿನ ಮತ್ತು ಟೆಸ್ಟ್ ಸರಣಿ ಮುನ್ನಡೆಸಿದರು. ಆದರೆ ಟಿ20 ಸರಣಿಯಿಂದ ಹೊರಗುಳಿಸಿದ್ದರು. ಹೀಗಾಗಿ ಹಿರಿಯ ಆಟಗಾರರಲ್ಲಿ ಒಬ್ಬರಾದ ವಿರೇಂದ್ರ ಸೆಹ್ವಾಗ್ ತಮ್ಮ ಹಾಗೂ ಭಾರತದ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಮೊದಲ ಮತ್ತು ಕೊನೆಯ ಬಾರಿಗೆ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ದಿನೇಶ್ ಮೊಂಗಿಯಾ ಟಿ20 ಆಡಿದ್ದರು.

ಭಾರತೀಯ ತಂಡವು ಮೊದಲ ಬೌಲಿಂಗ್ ಮಾಡಿ ದಕ್ಷಿಣ ಆಫ್ರಿಕಾವನ್ನು 126 ರನ್‍ಗೆ ಕಟ್ಟಿ ಹಾಕಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ ತಂಡವು ಅಂತಿಮ ಎಸೆತದಲ್ಲಿ ಗುರಿಯನ್ನು ಬೆನ್ನಟ್ಟಿತ್ತು. ಈ ಮೂಲಕ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಜಯ ದಾಖಲಿಸಿತ್ತು.

ಆನಂತರ ಏನಾಯಿತು?
ಅನೇಕ ಹಿರಿಯ ಆಟಗಾರರು 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಮುಂದಾಗಿದ್ದರು. ಹೀಗಾಗಿ ಆಯ್ಕೆ ಸಮಿತಿಯು ಯುವ ಆಟಗಾರರನ್ನು ಆಯ್ಕೆ ಮಾಡಿ ಧೋನಿಗೆ ನಾಯಕತ್ವ ವಹಿಸಿತ್ತು. ಅನುಭವಿ ಆಟಗಾರ ಧೋನಿ ಅವರು 2007 ರಿಂದ ವಿರಾಟ್ ಕೊಹ್ಲಿ ಅವರಿಗೆ ಉತ್ತಮ ಸ್ಥಾನ ಕಲ್ಪಿಸಿಕೊಟ್ಟು ತಂಡದ ನಾಯಕತ್ವವನ್ನು ಬಿಟ್ಟುಕೊಟ್ಟರು.

ಕುತೂಹಲವೆಂದರೆ ವಿರೇಂದ್ರ ಸೆಹ್ವಾಗ್ 2006ರ ನಂತರ ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿದ್ದರು. ಆದರೆ ಟಿ20 ತಂಡದ ನಾಯಕತ್ವ ವಹಿಸುವ ಅವಕಾಶ ಅವರಿಗೆ ಮತ್ತೆ ಸಿಗಲೇ ಇಲ್ಲ. ಮತ್ತೊಂದೆಡೆ ಧೋನಿ ತಮ್ಮ ಟಿ20 ನಾಯಕತ್ವ ವೃತ್ತಿಜೀವನದಲ್ಲಿ 72 ಪಂದ್ಯಗಳಲ್ಲಿ 41 ಗೆದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *