ಜಗ್ಗೇಶ್ 18 ವರ್ಷವರಾಗಿದ್ದಾಗ ಸಿನಿಮಾಕ್ಕಾಗಿ ಚಾನ್ಸ್ ಕೇಳ್ತಿದ್ದಿದ್ದು ಹೇಗೆ ಗೊತ್ತಾ?

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಅವರು ತಾವು 18 ವರ್ಷದವರಾಗಿದ್ದಾಗ ಸಿನಿಮಾಕ್ಕಾಗಿ ಹೇಗೆ ಅವಕಾಶ ಕೇಳುತ್ತಿದ್ದರು ಎಂಬ ಕುರಿತ ಪುಟ್ಟ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸುವ ನಟ ಜಗ್ಗೇಶ್. ದಶಕಗಳಿಂದ ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಆದ ಫ್ಯಾನ್ ಬೇಸ್ ಹೊಂದಿರುವ ಜಗ್ಗೇಶ್ ಅವರು ಯಾವುದೇ ಪಾತ್ರಕೊಟ್ಟರು ಲೀಲಾಜಾಲವಾಗಿ ಅಭಿನಯಿಸುತ್ತಾರೆ. 1982ರಲ್ಲಿ ಇಬ್ಬನಿ ಕರಗಿತು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ತರ್ಲೆ ನನ್ ಮಗ ಸಿನಿಮಾದ ಮೂಲಕ ನಾಯಕನಟನಾಗಿ ಬಣ್ಣ ಹಚ್ಚಿದರು. ಮೊದಲಿಗೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಜಗ್ಗೇಶ್ ಇದೀಗ ಚಂದನವನದಲ್ಲಿ ನಾಯಕ ನಟನಾಗಿ, ನಿರ್ದೇಶಕರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಅಭಿನಯಿಸಲು ಅವಕಾಶ ಸಿಗದೇ ಪರಾದಾಡುತ್ತಿದ್ದ ಜಗ್ಗೇಶ್ ಆಗ ಸಿನಿಮಾಗಳ ಅವಕಾಶಕ್ಕಾಗಿ ತಾವು ಹೇಗೆ ಎಲ್ಲರಲ್ಲೂ ಮನವಿಮಾಡಿಕೊಳ್ಳುತ್ತಿದ್ದರು ಎಂಬುವುದನ್ನು ಹಾಸ್ಯಮಯವಾಗಿ ನಟಿಸಿ ತೋರಿಸಿದ್ದಾರೆ. ಇನ್ನೂ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆ ನಂತರ ತೂಕ ಇಳಿಸಿಕೊಳ್ಳೋದು ಸುಲಭ ಅಲ್ಲ: ಯುವರತ್ನ ನಟಿ

ವೀಡಿಯೋದಲ್ಲಿ ಜಗ್ಗೇಶ್ ಅವರು, ನನಗೂ ಸಿನಿಮಾದಲ್ಲಿ ಅಭಿನಯಿಸಬೇಕು ಎಂಬ ಆಸೆ ಇದೆ. ನಾನು ಅಭಿನಯಕ್ಕೆ ಎಲ್ಲ ರೀತಿಯ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದೇನೆ ಮತ್ತು ಸ್ವಿಮಿಂಗ್, ಹಾರ್ಸ್ ರೈಡಿಂಗ್ ಎಲ್ಲವನ್ನು ಮಾಡುತ್ತೇನೆ. ನನಗೆ ಆ್ಯಕ್ಟಿಂಗ್ ಮಾಡಬೇಕು ಎಂದು ತುಂಬಾ ಇಷ್ಟ ಒಂದೇ ಒಂದು ಚಾನ್ಸ್ ಕೊಡಿ ಸರ್.. ಪ್ಲೀಸ್ ಸರ್ ಎಂದು ಹಾಸ್ಯಮಯವಾಗಿ ಹೇಳುತ್ತಾ ನಟಿಸಿರುವುದನ್ನು ಕಾಣಬಹುದಾಗಿದೆ.

ಈ ವೀಡಿಯೋ ಜೊತೆಗೆ. ನಾನು 18ವರ್ಷ ಇದ್ದಾಗ ಹೀಗೆ ಸಿನಿಮದಲ್ಲಿ ಅವಕಾಶ ಕೇಳುತ್ತಿದ್ದದ್ದು, ಆಧುನಿಕ ಅವಿಷ್ಕಾರದಲ್ಲಿ ನಿಮ್ಮ ನಗಿಸಲು ಈ ಯತ್ನ.. ಜಸ್ಟ್ ಫಾರ್ ಫನ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನಾಡು, ನುಡಿ ವಿಚಾರಕ್ಕೆ ಬಂದ್ರೆ ನಾನು ಜೊತೆಯಾಗಿರುತ್ತೇನೆ: ನಿಖಿಲ್ ಕುಮಾರಸ್ವಾಮಿ

Raghavendra Stores Jaggesh Hombale Films Santhosh Ananddram

ಸದ್ಯ ಜಗ್ಗೇಶ್ ಅವರು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ರಾಘವೇಂದ್ರ ಸ್ಟೋರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಸಿನಿಮಾಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಬಂಡವಾಳ ಹೂಡುತ್ತಿದ್ದಾರೆ. ಇನ್ನೂ ಈ ಸಿನಿಮಾ ಹೊಂಬಾಳೆ ಫಿಲ್ಮ್ಸ್ ನಡಿ ನಿರ್ಮಾಣವಾಗುತ್ತಿರು 12ನೇ ಸಿನಿಮಾವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *