ಕನ್ನಡದ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ (Rakshit Shetty) ಮತ್ತು ರಾಜ್ ಬಿ ಶೆಟ್ಟಿ ಮೂವರೂ ಒಂದೇ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿ ಎನ್ನುವ ಆಸೆ ಎಲ್ಲರದ್ದು. ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ರಿಷಬ್ ಸಿನಿಮಾದಲ್ಲಿ ರಕ್ಷಿತ್ ಹಾಗೂ ರಿಷಬ್ (Rishabh Shetty) ಮತ್ತು ರಕ್ಷಿತ್ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಒಟ್ಟಾಗಿ ಕೆಲಸ ಮಾಡಿದ್ದು ಇದೆ. ಆದರೆ, ಈ ಮೂವರು ಇನ್ನೂ ಒಟ್ಟಾಗಿಲ್ಲ.
ಮೂವರು ಸಿಕ್ಕಾಗೊಮ್ಮೆ ಎಲ್ಲರೂ ಈ ಪ್ರಶ್ನೆಯನ್ನು ಕೇಳಿದ್ದಾರೆ. ಮೂವರು ಒಟ್ಟಾಗಿ ಸಿನಿಮಾ ಮಾಡುವುದು ಯಾವಾಗ ಎಂದು ಒತ್ತಾಯಿಸಿದ್ದಾರೆ. ಈ ಪ್ರಶ್ನೆಗೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಉತ್ತರ ನೀಡಿದ್ದಾರೆ. ಮಿಡ್ ನೈಟ್ ಆಫ್ ಮೋಕ್ಷಾ (Midnight of Moksha) ಹೆಸರಿನ ಸಿನಿಮಾ ಬರಲಿದ್ದು, ಅದರಲ್ಲಿ ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ (Raj B Shetty) ಮತ್ತು ರಕ್ಷಿತ್ ಶೆಟ್ಟಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಮಿಂಚಿದ ಮೇಘಾ ಶೆಟ್ಟಿ
ಇಂಥದ್ದೊಂದು ಸುದ್ದಿಯನ್ನು ಸ್ವತಃ ರಕ್ಷಿತ್ ಕೊಟ್ಟಿದ್ದರೂ, ಸವಿವರವನ್ನು ಅವರು ನೀಡಲಿಲ್ಲ. ಈ ಸಿನಿಮಾ ಬರುವುದು ಯಾವಾಗ?, ಯಾರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ನಿರ್ದೇಶಕರು, ಕಲಾವಿದರು ಹೀಗೆ ಯಾವುದನ್ನೂ ರಕ್ಷಿತ್ ಹೇಳಿಲ್ಲ. ಕೇವಲ ಸಿನಿಮಾ ಟೈಟಲ್ ಮತ್ತು ಒಟ್ಟಾಗಿ ಕಾಣಿಸಿಕೊಳ್ಳುವುದರ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸದ್ಯ ರಕ್ಷಿತ್ ತಮಿಳು ನಾಡಿನಲ್ಲಿ ರಿಲೀಸ್ ಆಗಿರುವ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇತ್ತ ರಾಜ್ ಬಿ ಶೆಟ್ಟಿ ಮಲಯಾಳಂನಲ್ಲಿ ಬೀಡು ಬಿಟ್ಟಿದ್ದಾರೆ. ರಿಷನ್ ಕಾಂತಾರ 2 ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
Web Stories