`ಕಬ್ಜ’ ಚಿತ್ರವನ್ನು `ಕೆಜಿಎಫ್’ಗೆ ಹೋಲಿಸಿದವರಿಗೆ ನಟ ಉಪೇಂದ್ರ ಸ್ಪಷ್ಟನೆ

Public TV
2 Min Read

ರಿಯಲ್ ಸ್ಟಾರ್ ಉಪೇಂದ್ರ (Upendra) ಸದ್ಯ `ಕಬ್ಜ’ (Kabzaa)ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಡಿಫರೆಂಟ್ ಗೆಟಪ್ ಮತ್ತು ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಲು ಉಪ್ಪಿ ರೆಡಿಯಾಗಿದ್ದಾರೆ. ಈ ನಡುವೆ `ಕೆಜಿಎಫ್’ ಚಿತ್ರವನ್ನ `ಕಬ್ಜ’ ಚಿತ್ರಕ್ಕೆ ಹೋಲಿಸಿ ಮಾತನಾಡುವವರಿಗೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮಗನಿಗೆ ಸಾಹಸಸಿಂಹ ವಿಷ್ಣುವರ್ಧನ್ ಹೆಸರಿಟ್ಟ ವಿಷ್ಣು ಅಭಿಮಾನಿ

ಮಾ.17ಕ್ಕೆ `ಕಬ್ಜ’ ಸಿನಿಮಾ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ಭರ್ಜರಿ ಪ್ರಚಾರ ಕೂಡ ನಡೆಯುತ್ತಿದೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟಿರುವ `ಕಬ್ಜ’ ಟೀಂ ಇದೀಗ ಚಿತ್ರದ ಬಗ್ಗೆ ಹರಡಿದ್ದ ವದಂತಿಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ. ಟೀಸರ್, ಟ್ರೈಲರ್‌ ನೋಡಿದ ಬಹುತೇಕರು ʻಕೆಜಿಎಫ್ʼ (KGF) ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದರು. ಇದೀಗ ನಟ ಉಪ್ಪಿ ಈ ಬಗ್ಗೆ ಮಾತನಾಡಿದ್ದಾರೆ.

ʻಕೆಜಿಎಫ್ʼ ಚಿತ್ರದೊಂದಿಗೆ ಕಬ್ಜ ಸಿನಿಮಾವನ್ನು ಹೋಲಿಸಬೇಡಿ. ಎರಡೂ ಬೇರೆ-ಬೇರೆ ರೀತಿಯ ಸಿನಿಮಾಗಳು. ಟೀಸರ್ ನೋಡಿದ ಹಲವರು ಕೆಜಿಎಫ್ ಸಿನಿಮಾದಂತಿದೆ ಎಂದಿದ್ದರು ಆದರೆ ಟ್ರೈಲರ್ ನೋಡಿದ ಮೇಲೆ ಗೊತ್ತಾಗಿದೆ ಅದೇ ಬೇರೆ ಕತೆ ಇದೇ ಬೇರೆ ಕತೆ ಎಂಬುದು. ಸಿನಿಮಾದ ಲುಕ್, ಫೀಲ್ ಒಂದೇ ಥರ ಇದೆಯಾದರೂ ಎರಡೂ ಸಂಪೂರ್ಣ ಬೇರೆಯದ್ದೇ ಕತೆಗಳು ಎಂದಿದ್ದಾರೆ.

ಸಿನಿಮಾದ ಟೀಸರ್ ಬಿಡುಗಡೆ ಆದಾಗಲಂತೂ ಕೆಜಿಎಫ್ ಕತೆಯನ್ನೇ ಕಬ್ಜ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು, ಆಗ ಮಾತನಾಡಿದ್ದ ಉಪೇಂದ್ರ, ಕೆಜಿಎಫ್ ಥರ ಸಿನಿಮಾ ಮಾಡಿ ಅಂತಾರೆ, `ಕೆಜಿಎಫ್’ ಥರ ಮಾಡಿದರೆ ಕೆಜಿಎಫ್ ಥರಹ ಮಾಡಿದ್ದೀರಿ ಅಂತಾರೆ. ಏನು ಮಾಡಿದರೂ ಕೆಲವರು ಟೀಕೆ ಮಾಡ್ತಾರೆ ಎಂದು ತಮಾಷೆ ಮಾಡಿದ್ದರು.

ಈ ಚಿತ್ರದಲ್ಲಿ ಬ್ರಿಟೀಷ್ ಕಾಲದ ಕತೆ, ಸ್ವಾತಂತ್ರ‍್ಯ ಹೋರಾಟ ನಂತರದ ಕತೆ ಇರುವ ಸುಳಿವನ್ನು ಟ್ರೈಲರ್ ನೀಡಿದೆ. ದೇಶ ಪ್ರೇಮ, ವ್ಯವಸ್ಥೆಯ ವಿರುದ್ಧ ಹೋರಾಟ, ಪಾತಕ ಲೋಕ, ತಾಯಿ ಸೆಂಟಿಮೆಂಟ್, ಬ್ರದರ್ ಸೆಂಟಿಮೆಂಟ್ ಎಲ್ಲವನ್ನೂ ಕಬ್ಜನಲ್ಲಿ ಆರ್. ಚಂದ್ರು ಟಚ್ ಮಾಡಿದ್ದಾರೆಂಬುದು ಟ್ರೈಲರ್‌ನಿಂದ ತಿಳಿದು ಬರುತ್ತಿದೆ.

ಟ್ರೈಲರ್‌ನಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿಯೆಂದರೆ ಉಪೇಂದ್ರ ಪೊಲೀಸ್ ಧಿರಿಸಿನಲ್ಲಿ ಕಾಣಿಸಿಕೊಂಡಿರುವುದು. `ಕಬ್ಜ’ (Kabzaa) ಸಿನಿಮಾದ ಪೋಸ್ಟರ್, ಟೀಸರ್‌ಗಳಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸುದೀಪ್ (Sudeep) ಮತ್ತು ಶಿವಣ್ಣ (Shivarajkumar) ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಎಲ್ಲದಕ್ಕೂ ಅಪ್ಪು (Appu) ಹುಟ್ಟುಹಬ್ಬದ (Birthday) ದಿನ ಮಾರ್ಚ್ 17ಕ್ಕೆ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *