ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು: ಡಿಕೆ ಸುರೇಶ್‌ ಪಂಚ್

2 Min Read

ಬೆಂಗಳೂರು: ಕಟ್ಟಾ ಕಾಂಗ್ರೆಸಿಗರು (Congressmen) ಯಾರೂ ಬೀದಿ ನಾಯಿಗಳಲ್ಲ, ಯಾವತ್ತಿದ್ರೂ ನಿಯತ್ತಿನ ನಾಯಿಗಳು ಎಂದು ಹೇಳುವ ಮೂಲಕ ಮಾಜಿ ಸಂಸದ ಡಿಕೆ ಸುರೇಶ್‌ (DK Suresh), ಸೈಲೆಂಟಾಗೆ ಸಚಿವ ಹೆಚ್‌.ಸಿ ಮಹದೇವಪ್ಪಗೆ ಟಾಂಗ್‌ ಕೊಟ್ಟರು.

ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಯಕತ್ವ ಚರ್ಚೆಯನ್ನ ನಾಯಿಗೆ ಹೋಲಿಸಿದ ಹೆಚ್‌.ಸಿ ಮಹದೇವಪ್ಪ (HC Mahadevappa) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಬಾಲವೇ ನಾಯಿಯನ್ನು ಅಲ್ಲಾಡಿಸಿದ್ರೆ? – ನಾಯಕತ್ವ ಚರ್ಚೆಯನ್ನು ನಾಯಿಗೆ ಹೋಲಿಸಿದ ಮಹದೇವಪ್ಪ

ಮಹದೇವಪ್ಪ ಅವರು ಯಾವುದೇ ನಾಯಿಗೆ ಹೋಲಿಕೆ ಮಾಡಿ ಮಾತನಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ಕಟ್ಟಾ ಕಾಂಗ್ರೆಸಿಗರು ಯಾರು ಬೀದಿ ನಾಯಿಗಳಲ್ಲ. ಬೀದಿ ನಾಯಿಗೆ ಊಟ ಹಾಕೋದು ಯಾತಕ್ಕೆ? ಅವು ನಮ್ಮನ್ನ ಕಾಯುತ್ತವೆ ಅಂತಾ ತಾನೇ. ನಾಯಿಗಿರೋ ನಿಯತ್ತು ಮನುಷ್ಯರಿಗಿಲ್ಲ ಅಂತಾರೆ. ಹಲವಾರು ಸನ್ನಿವೇಶದಲ್ಲಿ ಆ ನಾಣ್ಣುಡಿ ಕೇಳಿದ್ದೇವೆ. ಕಟ್ಟಾ ಕಾಂಗ್ರೆಸಿಗರು ಯಾವತ್ತಿದ್ರೂ ನಿಯತ್ತಿನ ನಾಯಿಗಳು (loyal Dogs). ಋಣ ತೀರಿಸೋ ವ್ಯಕ್ತಿತ್ವದ ನಾಯಿಗಳು, ಯಜಮಾನನ ಋಣ ತೀರಿಸೋ ನಾಯಿಗಳು ಎಂದು ಹೇಳಿದ್ರು. ಇದನ್ನೂ ಓದಿ: ಈಗ ನುಡಿದಂತೆ ನಡೆಯುವವರು ಯಾರ್‌ ಇರ್ತಾರೆ ಹೇಳಿ – ಶಿವಗಂಗಾ ಬಸವರಾಜ್

ʻಕಾಂಗ್ರೆಸ್ ಪಕ್ಷದಲ್ಲಿ ಹೊರಗಿನವರಿಗೆ ನಿಯತ್ತು ಇರಲ್ವಾ?ʼ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದರು, ನಾನು ಆ ರೀತಿ ಏನು ಹೇಳಿಲ್ಲ, ನಾನು ಹೇಳಿದ್ದು ಇಷ್ಟೇ. ನಾಯಿಗಳನ್ನ ಯಾರಿಗೆ ಹೋಲಿಸಿದ್ದಾರೆ ಗೊತ್ತಿಲ್ಲ. ಆದ್ರೆ ಕಟ್ಟಾ ಕಾಂಗ್ರೆಸಿಗರು ನಿಯತ್ತಿನ ನಾಯಿಗಳು. ನಾಯಿಗಳು ಯಜಮಾನನ ಋಣ ತೀರಿಸುತ್ವೆ. ಬೇರೆ ಏನು ಮಾಡಲ್ಲ.. ಅದರ ಸ್ವಭಾವವೇ ಹಾಗೇ. ಬೀದಿ ನಾಯಿಯನ್ನೂ ಸಾಕ್ತಾರೆ, ಮನೆಯಲೂ ಸಾಕ್ತಾರೆ. ಎಲ್ಲರೂ ಕೂಡ ಸಾಕ್ತಾರೆ, ಏತಕ್ಕೆ ಸಾಕ್ತಾರೆ.. ನಿಯತ್ತಿಗೆ ಸಾಕ್ತಾರೆ. ಬೇರೆಯವರ ಋಣ ತೀರಿಸ್ತಾರೆ ಅಂತಲ್ಲ, ಆ ವಿಶ್ವಾಸ ಕಾಪಾಡುತ್ತೆ ಅಂತಾ ಅಷ್ಟೇ. ಬೀದಿ ನಾಯಿಗೂ ಹೋಗಿ ಊಟ ಹಾಕ್ತಾರೆ, ಯಾಕೆ ಅಂದ್ರೆ ಅದು ನಮ್ಮನ್ನ ಕಾಪಾಡುತ್ತೆ ಅಂತ ಎಂದು ವಿವರಿಸಿದ್ರು.

ಇನ್ನೂ ಶಾಸಕರ ಫಾರಿನ್ ಟೂರ್ ಬಗ್ಗೆ ಮಾತನಾಡಿ, ಅವರು ಶಾಸಕರು ಆಗಿದ್ದಾರೆ, ಹೋಗ್ತಿದ್ದಾರೆ. ವಿಶ್ವಾಸಕ್ಕೆ ಹೋಗ್ತಾರೆ, ದೇಶ ನೋಡಕ್ಕೆ ಹೋಗ್ತಾರೆ. ಅವರವರ ಇಷ್ಟಕ್ಕೆ ಹೋಗ್ತಾರೆ ಅಷ್ಟೇ. ಅದರಲ್ಲಿ ಬಹಳ ವಿಶೇಷ ಏನಿಲ್ಲ. ವಿದೇಶ ಪ್ರವಾಸ ಎಲ್ಲರಿಗೂ ಖುಷಿ ನೀಡುತ್ತೆ. ಗೊಂದಲ ಇರುತ್ತೆ, ಅದರ ನಡುವೆ ಟೂರ್ ಹೋಗ್ತಾರೆ. ಫ್ಯಾಮಿಲಿ ಜೊತೆ ಖುಷಿಯಲ್ಲಿ ಹೋಗ್ತಾರೆ ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕೋಮುವಾದದಿಂದ ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮೋಹನ್ ದಾಸ್ ಪೈ ಟಾಂಗ್

Share This Article