ಇವಿಎಂ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ಜಿಬಿಎ ಚುನಾವಣೆ – ಡಿಕೆ ಸುರೇಶ್ ಅಪಸ್ವರ

1 Min Read

ಬೆಂಗಳೂರು: ಮತಕಳವು ತಪ್ಪಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (GBA) ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ (EVM) ಬದಲಿಗೆ ಬ್ಯಾಲೆಟ್ ಪೇಪರ್(Ballot Paper) ಬಳಕೆಗೆ ಚುನಾವಣಾ ಆಯೋಗ ಮುಂದಾಗಿದ್ದಕ್ಕೆ ರಾಜಕೀಯ ನಾಯಕರು ಅಪಸ್ವರ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ಸಹೋದರ ಡಿಕೆ ಸುರೇಶ್ (DK Suresh) ಪ್ರತಿಕ್ರಿಯಿಸಿ ಬ್ಯಾಲೆಟ್‌ ತರುವುದು ಅವಶ್ಯಕತೆ ಇಲ್ಲ ಅನ್ನಿಸುತ್ತದೆ.  ಈಗಲೇ ನಾವು  ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಎಲ್ಲವೂ ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲೇ ಇರುತ್ತದೆ. ಅದನ್ನು ತಿರುಚಲು ಯಾರಿಂದಲೂ ಆಗುವುದಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.


ಉಪಚುನಾವಣೆಗೆ ಮತಪತ್ರ ಬಳಕೆ ಬಗ್ಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ಸಚಿವ ಹೆಚ್‌ಕೆ ಪಾಟೀಲ್ (HK Patil) ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬ್ಯಾಲೆಟ್ ಪೇಪರ್‌ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ – ಚುನಾವಣಾ ಆಯುಕ್ತ ಸಂಗ್ರೇಶ್‌

ಬ್ಯಾಲೆಟ್ ಪೇಪರ್ ಬಳಕೆಗೆ ಬಿಜೆಪಿಗರು ಕಿಡಿಕಾರಿದ್ದಾರೆ. ಏನೂ ಸಮಸ್ಯೆ ಇಲ್ಲ ಅಂತ ಆಯೋಗವು ಹೇಳಿದ್ದರೂ ತಾಂತ್ರಿಕ ಯುಗದಲ್ಲಿದ್ದರೂ ಮತ್ತೆ ಶಿಲಾಯುಗಕ್ಕೆ ಹೋಗುತ್ತಿದ್ದಾರೆ. ದಶಕಗಳ ಪ್ರಗತಿಯನ್ನು ಹಳ್ಳ ಹಿಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.

Share This Article