ದಲಿತ ಸಂಘಟನೆಗಳಿಗೆ ಆಹ್ವಾನ ನೀಡದೇ ಕಾರ್ಯಕ್ರಮ ಮಾಡಿದ್ದಕ್ಕೆ ಪ್ರತಿಭಟನೆ: ಡಿಕೆ ಸುರೇಶ್

Public TV
2 Min Read

ರಾಮನಗರ: ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಂಡಿಲ್ಲ. ಪುತ್ಥಳಿ ಅನಾವರಣಕ್ಕೆ ದಲಿತ ಸಂಘಟನೆಗಳಿಗೆ ಆಹ್ವಾನ ನೀಡದೇ ಕಾರ್ಯಕ್ರಮವನ್ನು ಮಾಡುತ್ತಿದ್ದರು. ಅದರಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವರು ಸವಾಲಿಗೆ ಕರೆದಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿರುವ ಪ್ರತಿಯೊಂದು ಕಲ್ಲುಗಳು ಕೂಡ ನಮ್ಮ ಅವಧಿಯಲ್ಲಿದ್ದ ಶಾಸಕರು ಮತ್ತು ಸಚಿವರು ಮಾಡಿಸಿದ್ದಾರೆ. ಇವರು ಹೊಸದಾಗಿ ಏನನ್ನು ಸಹ ಮಾಡಿಲ್ಲ. ಆದರೆ ಜನರ ಮುಂದೆ ಎಲ್ಲವನ್ನು ನಾವೇ ಮಾಡಿದ್ದೇವೆ ಎಂದು ಆವೇಶದಿಂದ ಮಾತನಾಡುವುದು, ಸವಾಲಿಗೆ ಕರೆಯುವುದು, ಬಿಜೆಪಿ ಎನ್ನುವುದು ಎಲ್ಲ ಸರಿ ಅಲ್ಲ. ಇದು ಸರ್ಕಾರಿ ಕಾರ್ಯಕ್ರಮ ಬಿಜೆಪಿ ಕಾರ್ಯಕ್ರಮದ ವೇದಿಕೆ ಅಲ್ಲ. ಇದು ಸಾರ್ವಜನಿಕ ವೇದಿಕೆ ಎಂದು ಒತ್ತಿ ಹೇಳಿದರು.

 

ಕಾರ್ಯಕ್ರಮ 10.30ಕ್ಕೆ ನಿಗದಿಯಾಗಿತ್ತು. ಹಾಗಾಗಿ ನಾನು ಸಹ 10.30ಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಆದರೆ ಅವರಿಗೆ ಅವರೇ ಪುತ್ಥಳಿ ಅನಾವರಣ ಮಾಡಿದರೆ ಹೇಗೆ? ಪುತ್ಥಳಿ ಅನಾವರಣ ಮಾಡುವುದಕ್ಕೆ ಹಿಂದೆ ಇದ್ದ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ, ಶಾಸಕರು ಎಲ್ಲರೂ ರಾಮನಗರ ಜಿಲ್ಲಾ ಪಂಚಾಯತಿಯಿಂದ ಅನುದಾನ ಪಡೆದು ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು ಒಂದು ಸಮಿತಿಯನ್ನು ರಚನೆ ಮಾಡಿ ಜಿಲ್ಲಾ ಮಟ್ಟದಲ್ಲಿ ಒಂದು ಕಾರ್ಯಕ್ರಮವನ್ನು ರೂಪಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಸಿಎಂ ಎದುರೇ ಡಿಕೆ ಸುರೇಶ್‌, ಅಶ್ವಥ್‌ ನಾರಾಯಣ ನಡುವೆ ಜಟಾಪಟಿ

ನನಗೆ ಎರಡು ದಿನಗಳ ಹಿಂದೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ ಬಂದಿದ್ದೇನೆ. ಅವರು ಹೇಳಿದ್ದನ್ನೆಲ್ಲಾ ಕೇಳಿದ್ದೇನೆ. ಅದಕ್ಕೆ ಏನು ಉತ್ತರ ನೀಡಬೇಕೋ ಅದನ್ನು ಮುಖ್ಯಮಂತ್ರಿಗಳ ಎದುರೇ ನೀಡಿದ್ದೇನೆ ಎಂದರು. ಇದನ್ನೂ ಓದಿ: ಹಿಂದೂ ದೇವಾಲಯಗಳು ಸ್ವತಂತ್ರವಾದ್ರೆ ಒಂದಿಷ್ಟು ಅಭಿವೃದ್ಧಿಗೊಳ್ಳುತ್ತದೆ: ಕೋಟ ಶ್ರೀನಿವಾಸ ಪೂಜಾರಿ

ವೇದಿಕೆ ಮೇಲೆ ಡಿ.ಕೆ ಸುರೇಶ್ ಅವರು ಗುಂಡಾ ವರ್ತನೆ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಗುಂಡಾ ವರ್ತನೆ ಮಾಡುವ ಅವಶ್ಯಕತೆ ಇಲ್ಲ. ಇದು ಸಾರ್ವಜನಿಕರ ಕಾರ್ಯಕ್ರಮ. ಸಾರ್ವಜನಿಕರ ಭಾವನೆಗಳನ್ನು ಅರ್ಥೈಸಿಕೊಂಡು ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದು ಹೇಳಿದರು.

DK Suresh, CM Basavaraja Bommai, Congress, BJP, Ramanagara

Share This Article
Leave a Comment

Leave a Reply

Your email address will not be published. Required fields are marked *