ನವದೆಹಲಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿಬಿಡಿ ಎಂದು ಹೇಳಿರುವ ಆರೋಗ್ಯ ಶ್ರೀರಾಮುಲು ಅವರಿಗೆ ಬಳ್ಳಾರಿ ಕಾಂಗ್ರೆಸ್ ನಾಯಕರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಡಿಕೆಶಿ ಬೆಂಬಲಿಗ ಬಳ್ಳಾರಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು, ಶ್ರೀರಾಮುಲು ಅವರೇ ಬಾಯಿ ಭದ್ರ ಇಟ್ಟುಕೊಂಡು ಮಾತನಾಡಿ. ಎಲ್ಲ ಮಾತನಾಡಿ ಈಗ ಕ್ಷಮೆ ಕೇಳಿದ್ರೆ ಒಪ್ಪಲ್ಲ. ಡಿಕೆ ಶಿವಕುಮಾರ್ ಸುಮ್ಮನಿರಬಹುದು ನಾವು ಸುಮ್ಮನಿರಲ್ಲ ಎಂದು ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ಈಗ ನಮ್ಮ ಬಾಯಿ ಬಂದ್ ಮಾಡಿ ಕೂರಿಸಿದ್ದಾರೆ. ಕಾಲಚಕ್ರ ಹಿಂಗೆ ಇರಲ್ಲ. ನೀವೂ ಮಾಡಿದ್ದನ್ನು ನಾವೂ ಮಾಡಿ ತೋರಿಸುತ್ತೇವೆ. ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನ ದೊಡ್ಡ ನಾಯಕ ಎಂದು ಬಿಜೆಪಿ ಹೈಕಮಾಂಡ್‍ಗೆ ಗೊತ್ತಾಗಿದೆ. ಮುಂಬರುವ ಬೈ ಎಲೆಕ್ಷನ್ ನಿಂದ ಬಿಜೆಪಿ ನಾಯಕರು ಹೆದರಿಕೊಂಡಿದ್ದಾರೆ ಎಂದು ರಾಮುಲುಗೆ ಆಂಜನೇಯಲು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನಿಂದ ನೋವಾಗಿದ್ದರೆ ಕ್ಷಮಿಸಿ- ಡಿಕೆಶಿ ಕಣ್ಣೀರಿಗೆ ಮರುಗಿದ ಶ್ರೀರಾಮುಲು
ಅಲ್ಲದೆ ಹಿಂದೆ ಬಳ್ಳಾರಿ ಬೈ ಎಲೆಕ್ಷನ್ ಡಿಕೆಶಿ ನಾಯಕತ್ವದಲ್ಲಿ ಗೆದ್ದಿದ್ದಾರೆ. ಅದರ ಭಯ ಈಗ ಶ್ರೀರಾಮುಲುಗೆ ಕಾಡುತ್ತಿದೆ. ಅಕ್ರಮ ಗಣಿಗಾರಿಕೆ ಉಪ್ಪು ತಿಂದಿದ್ದೀರಿ ಶ್ರೀರಾಮುಲು ಅವರೇ ನಿಮಗೆ ನೀರೂ ಸಿಗಲ್ಲ ಎಂದು ಎಚ್ಚರಿಸಿದ್ದಾರೆ.