ಡಿಕೆ ಶಿವಕುಮಾರ್‌ ನೀವು ಇಲ್ಲಿ ಹುಟ್ಟೋದು ಬೇಡ, ಅಭಿವೃದ್ಧಿ ಮಾಡಿದ್ರೆ ಸಾಕು: ಮಲ್ಲಿಕಾರ್ಜುನ ಖರ್ಗೆ

2 Min Read

– ಬಡವರು, ರೈತರ ಮಕ್ಕಳಿಗೆ ತೊಂದ್ರೆ ಆಗ್ತಿದೆ, ಮೊದಲು ಶಿಕ್ಷಕರನ್ನ ಕೊಡಿ
– ಮಧುಬಂಗಾರಪ್ಪಗೆ ಎಐಸಿಸಿ ಅಧ್ಯಕ್ಷ ಮನವಿ

ಕಲಬುರಗಿ: ಡಿಕೆ ಶಿವಕುಮಾರ್‌… (DK Shivakumar) ನೀವು ಇಲ್ಲಿ ಹುಟ್ಟೋದು ಬೇಡ, ನಾವಿಲ್ಲಿ ಚೆನ್ನಾಗಿದ್ದೇವೆ. ಮೈಸೂರು ಮತ್ತು ನಿಮ್ಮ ಕ್ಷೇತ್ರ ಹೇಗಿದೆಯೋ ಅದೇ ರೀತಿ ಇಲ್ಲೂ ಅಭಿವೃದ್ಧಿ ಮಾಡಿಕೊಡಿ ಸಾಕು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮನವಿ ಮಾಡಿದ್ದಾರೆ.

ಮೊದಲು ಶಿಕ್ಷಕರನ್ನ ಕೊಡಿ
ಕಲಬುರಗಿಯ (Kalaburagi) ಸೇಡಂನಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಅನೇಕ ಕಡೆ ಶಾಲೆಯಿದ್ರೂ ಶಿಕ್ಷಕರಿಲ್ಲ ಹಾಗಾಗಿ ಶಿಕ್ಷಣದಲ್ಲಿ ನಾವು ಹಿಂದಿದ್ದೇವೆ. ವಿಜ್ಞಾನ, ಗಣಿತ, ಇಂಗ್ಲಿಷ್ ಸೇರಿ ಹಲವು ವಿಷಯಗಳ ಶಿಕ್ಷಕರಿಲ್ಲ. ನಮ್ಮ ನಿಮ್ಮ ಮಕ್ಕಳು ಹೇಗೋ ಓದುತ್ತಾರೆ, ಉದ್ಯೋಗ ಸಿಗುತ್ತೆ. ಆದ್ರೆ ರೈತರು, ಬಡವರು, ಕಾರ್ಮಿಕರ ಮಕ್ಕಳು ಓದುವುದಾದ್ರೂ ಹೇಗೆ? ಹಾಗಾಗಿ ಶಾಲೆಗಳನ್ನ ಕೊಡೋದಕ್ಕಿಂತ ಮುಂಚೆ ಶಿಕ್ಷಕರನ್ನ ಕೊಡುವಂತೆ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡ್ತೇನೆ ಎಂದರು. ಇದನ್ನೂ ಓದಿ: G Ram G ಕಾಯ್ದೆ | ಕಾಂಗ್ರೆಸ್ ಹೋರಾಟ ನಿಲ್ಲಲ್ಲ, ಇಲ್ಲಿಗೆ ಬಿಡಲ್ಲ – ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಇನ್ನೂ ನಮ್ಮ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಹೇಳ್ತಾರೆ ಈ ಭಾಗದಲ್ಲಿ ಹುಟ್ಟಬೇಕಿತ್ತು ಅಂತ. ನೀವು ಈ ಭಾಗದಲ್ಲಿ ಹುಟ್ಟೋದು ಬೇಡ, ನಾವು ಆ ಭಾಗದಲ್ಲಿ ಹುಟ್ಟೋದು ಬೇಡ. ನಮಗೆ ಹಳೇ ಮೈಸೂರಿನಂತೆ ಸೌಲಭ್ಯ ಕೊಡಿ ಅಂತ ವೇದಿಕೆಯಲ್ಲೇ ಮನವಿ ಮಾಡಿದ್ರು. ಇದನ್ನೂ ಓದಿ: 1947ರ ಬಳಿಕ ಫಸ್ಟ್‌ ಟೈಮ್‌ – ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಹೊಸ ಕಚೇರಿಗೆ ಶಿಫ್ಟ್‌

ನಾವು ನಮ್ಮ ಭಾಗವನ್ನ ಸಿಂಗಾಪುರ್ ಮಾಡೋದು ಬೇಡ ಮೈಸೂರು ಭಾಗದ ತರಹ ಮಾಡಿಕೊಡಿ. ನೀವು ಏನೇ ಕಾರ್ಯಕ್ರಮ ಮಾಡಿದ್ರು ಮೊದಲು ಇಲ್ಲಿಗೆ ಕೊಡಿ. ಬಫೆ ಸಿಸ್ಟಮ್ ತರಹ ಕೊಡೋದು ಬಿಟ್ಟು, ಪಂತಿಯಲ್ಲಿ ಇರೋರನ್ನೂ ಗಮನಿಸಿ ಈ ಭಾಗದ ಅಭಿವೃದ್ಧಿಗೆ ಗಮನಕೊಡಿ. ನೀವು ಇಲ್ಲಿ ಹುಟ್ಟೋದು ಬೇಡ. ನಮ್ಮ ಕಡೆ ನಾವು ಇಲ್ಲಿ ಚೆನ್ನಾಗಿದ್ದೇವೆ. ಮೈಸೂರಿನಲ್ಲಿ ಆದ 100% ಕೆಲಸದಲ್ಲಿ ನಮಗೆ 75% ಕೆಲಸ ಮಾಡಿಕೊಡಿ ಅಂತ ಕೋರಿದ್ದಾರೆ. ಇದನ್ನೂ ಓದಿ: ಬಂಗಾಳದಲ್ಲಿ 2 ಶಂಕಿತ ನಿಫಾ ವೈರಸ್‌ ಪ್ರಕರಣ ಪತ್ತೆ – ಕೇಂದ್ರದಿಂದ ವಿಶೇಷ ತಂಡ ರವಾನೆ

Share This Article