ಕಿಚ್ಚನ ಜೊತೆ ಕುಳಿತು ಕೆಸಿಸಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಡಿಕೆ ಶಿವಕುಮಾರ್

Public TV
1 Min Read

ಸ್ಯಾಂಡಲ್‌ವುಡ್ ನಟ ಸುದೀಪ್ (Sudeep) ಅವರು ಸದ್ಯ ಕೆಸಿಸಿ ಕ್ರಿಕೆಟ್ (Kcc Cricket) ಪಂದ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂರು ದಿನಗಳ ಟೂರ್ನಿಯಲ್ಲಿ ಕಡೆ ದಿನ ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಕೂಡ ಭಾಗಿಯಾಗಿ ಸುದೀಪ್‌ಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಕ್ರಿಸ್ಮಸ್ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರು

ಸ್ಟಾರ್ ಕಲಾವಿದರ ಕೆಸಿಸಿ ಪಂದ್ಯ ಡಿಸೆಂಬರ್ 23ರಿಂದ ನಡೆಯುತ್ತಿದೆ. ಈ ಪಂದ್ಯ 3 ದಿನಗಳ ಕಾಲ ಸ್ಟಾರ್ ಟೀಮ್‌ಗಳ ಮಧ್ಯೆ ಹಣಾಹಣಿ ನಡೆಯಿತು. ಡಿಸೆಂಬರ್ 25ರಂದು ಕಡೆಯ ದಿನದ ರೋಚಕ ಪಂದ್ಯ ವೀಕ್ಷಿಸಲು ಡಿ.ಕೆ ಶಿವಕುಮಾರ್ ಭಾಗಿಯಾಗಿ ಕಿಚ್ಚ ಸುದೀಪ್ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ. ಕ್ರಿಕೆಟ್ ಪಂದ್ಯ ನೋಡುತ್ತಾ ಎಂಜಾಯ್ ಮಾಡಿದ್ದಾರೆ.

ಇನ್ನೂ ಕೆಸಿಸಿ ಪಂದ್ಯಕ್ಕಾಗಿಯೇ ಈ ವಾರ ಕಿಚ್ಚನ ಪಂಚಾಯಿತಿಗೆ ಸುದೀಪ್ ಗೈರಾಗಿದ್ದರು. ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರ ಬಿಗ್ ಬಾಸ್ (Bigg Boss) ಶೋ ಮಾಡಲಾಯಿತು.

Share This Article