ರಾಮನಗರ: ಸ್ವಗ್ರಾಮ ಕನಕಪುರ (Kanakapura) ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ರೇಷ್ಮೆ (Sericulture) ಬೆಳೆಗಾರರ ರೈತ ಸೇವಾ ಸಹಕಾರ ಬ್ಯಾಂಕ್ ಚುನಾವಣೆಗೆ ಡಿಸಿಎಂ ಡಿಕೆಶಿ (DK Shivakumar) ಮತ ಚಲಾವಣೆ ಮಾಡಿದ್ದಾರೆ.
ರೇಷ್ಮೆ ಬೆಳೆಗಾರರ ಸಾಲಗಾರರಲ್ಲದ ಕ್ಷೇತ್ರಕ್ಕೆ ಸರತಿ ಸಾಲಿನಲ್ಲಿ ನಿಂತು ಡಿ.ಕೆ.ಶಿವಕುಮಾರ್ ಹಾಗೂ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಮತ ಚಲಾಯಿಸಿದ್ದಾರೆ. ಇದನ್ನೂ ಓದಿ: WPL ನಿಂದ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕ ಹೊರಕ್ಕೆ?
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮೂರಲ್ಲಿ 40 ವರ್ಷಗಳ ಬಳಿಕ ರೇಷ್ಮೆ ಸಹಕಾರ ಸಂಘದ ಚುನಾವಣೆ ನಡೆಯುತ್ತಿದೆ. ಕಾರ್ಯಕರ್ತರು ನಮಗೋಸ್ಕರ ದುಡಿದಿದ್ದಾರೆ. ಇವರೆಲ್ಲ ನಮಗೆ ಚುನಾವಣೆ ಮಾಡಿದ್ದರು. ಈಗ ನಾವು ಅವರಿಗೆ ಚುನಾವಣೆ ಮಾಡೋಕೆ ಬಂದಿದ್ದೇವೆ. ನಮ್ಮೂರಿಗೆ ಬಂದು ಮತ ಚಲಾವಣೆ ಮಾಡಿದ್ದೇನೆ. ಸಹಕಾರ ಸಂಘಗಳು ಬೆಳೆಯಬೇಕು, ಎಲ್ಲರಿಗೂ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೂವರು ಆಪ್ ಕೌನ್ಸಿಲರ್‌ಗಳು ಬಿಜೆಪಿ ಸೇರ್ಪಡೆ – ದೆಹಲಿಯಲ್ಲಿ ಟ್ರಿಪಲ್ ಎಂಜಿನ್ ಸರ್ಕಾರ ಬರುತ್ತಾ?

 
			 
		 
		 
                                
                              
		