ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ಆಗಲ್ಲ, ಇದ್ಕೆ ಮೇಕೆದಾಟು ಯೋಜನೆಗೆ ಸುಪ್ರೀಂ ಕೊಟ್ಟ ತೀರ್ಪು ಉದಾಹರಣೆ: ಡಿಕೆಶಿ

Public TV
2 Min Read

ಬೆಂಗಳೂರು: ಪ್ರಯತ್ನ ವಿಫಲ ಆದರೂ ಪ್ರಾರ್ಥನೆ ವಿಫಲ ಆಗಲ್ಲ, ಇದಕ್ಕೆ ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ಉದಾಹರಣೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ `ನೀರಿನ ಹೆಜ್ಜೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು, ಸಿಎಂ ಸೇರಿಕೊಂಡು ಮೇಕೆದಾಟು ಪಾದಯಾತ್ರೆ ಮಾಡಬೇಕು ಅಂತ ತೀರ್ಮಾನ ಮಾಡಿದ್ದೆವು, ಆದರೆ ಕೋವಿಡ್ ಬಂತು. ಪಾದಯಾತ್ರೆಗೆ ನಾನು ಲೋಗೋ ಕೂಡ ಇಟ್ಟಿದ್ದೆ. ಆದರೆ ಅನೇಕರು ಪಾದಯಾತ್ರೆ ನಿಲ್ಲಿಸೋಣ ಅಂತ ಹೇಳಿದ್ದರು. ಆದರೆ ನಾನು, ಸಿದ್ದರಾಮಯ್ಯ ಅವರು ಯಾರು ಬರಲಿ ಬಿಡಲಿ ಮಾಡೋಣ ಎಂದು ತೀರ್ಮಾನ ಮಾಡಿದೆವು, ಆದರೆ ಕೊನೆಗೆ ನಮ್ಮ ಮೇಲೆ ಕೇಸ್ ಹಾಕಿದ್ದರು. ಬೆಂಗಳೂರಿನಲ್ಲಿ ಕಾವೇರಿ ಆರತಿ ಮಾಡಿದೆ. ಅದಕ್ಕೂ ವಿರೋಧ ಮಾಡಿದ್ರು. ಯಾರು ಎಷ್ಟೇ ಟೀಕೆ ಮಾಡಿದ್ರು ನಾನು ಯಾವುದನ್ನೂ ಬಿಡಲಿಲ್ಲ. ಈಗ ಮೇಕೆದಾಟು ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ. ಇದು ಹೇಗೆ ಬಂತು, ಶ್ರಮ ಎಷ್ಟು ಅಂತ ನಮಗೆ ಮಾತ್ರ ಗೊತ್ತಿದೆ. ಪ್ರಯತ್ನ ವಿಫಲ ಆದ್ರು ಪ್ರಾರ್ಥನೆ ವಿಫಲ ಆಗಲ್ಲ. ಇದಕ್ಕೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪು ಉದಾಹರಣೆ ಎಂದು ಹೇಳಿದರು.ಇದನ್ನೂ ಓದಿ: RJD ಅಭ್ಯರ್ಥಿ ವಿರುದ್ಧ 12,000 ಮತಗಳ ಅಂತರದಿಂದ ಜಯ – ಬಿಹಾರದ ಕಿರಿಯ ಶಾಸಕಿಯಾದ ಗಾಯಕಿ ಮೈಥಿಲಿ ಠಾಕೂರ್

ಈಗ ನಮ್ಮ ಸಂಸದರು ಕೇಂದ್ರದ ಇಲಾಖೆಗಳ ಬಳಿ ಅನುಮತಿ ಕೊಡಿಸಬೇಕು. ಈಗಾಗಲೇ ಮೇಕೆದಾಟು ಮಾಡಲು ಕಚೇರಿ ಮಾಡಿದ್ದೇನೆ. ಭೂಸ್ವಾಧೀನಕ್ಕೂ ಸಿದ್ಧತೆ ಮಾಡಿದ್ದೇವೆ. ಇನ್ನೂ ಇಂದು (ನ.14) ತುಂಗಭದ್ರಾ ಡ್ಯಾಂ ಬಗ್ಗೆ ಸಭೆ ಮಾಡಿದೆ. ರೈತರಿಗೆ ಡ್ಯಾಂ ಬೇಕಾ? ಬೆಳೆ ಬೇಕಾ? ಅಂತ ಕೇಳಿದಾಗ ಒಪ್ಪಿಕೊಂಡಿದ್ದಾರೆ. ಆಂಧ್ರಪ್ರದೇಶದ ಸಿಎಂಗೆ ಸಭೆ ಮಾಡೋಣ ಅಂದಿದ್ದೆ, ಆದರೆ ಬರುತ್ತಿಲ್ಲ, ಮಹದಾಯಿಗೆ ಒಪ್ಪಿಗೆ ಕೊಡ್ತಿಲ್ಲ. 5 ಬಾರಿ ಕೇಂದ್ರ ಸಚಿವರನ್ನ ಭೇಟಿಯಾಗಿದ್ದೇನೆ. ಕೃಷ್ಣ, ಕಾವೇರಿ, ಮಹಾದಾಯಿ, ತುಂಗಭದ್ರಾ ಸಮಸ್ಯೆ ಇದೆ, ನಾವು ಹೇಗೆ ರಾಜ್ಯದ ಹಿತ ಕಾಪಾಡಬೇಕು. ನಿರ್ಮಲಾ ಸೀತಾರಾಮನ್ ಅವರು ಭದ್ರಾಗೆ 5 ಸಾವಿರ ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಇನ್ನೂ ಕೊಟ್ಟಿಲ್ಲ. ಇದನ್ನು ಕೇಳಲು ಬಿಜೆಪಿ ಎಂಪಿಗಳು ಧ್ವನಿ ಎತ್ತಿಲ್ಲ. ಒಂದೇ ಒಂದು ದಿನ ಬಿಜೆಪಿ ಎಂಪಿಗಳು ಬಾಯಿ ಬಿಟ್ಟಿಲ್ಲ. ಬರೀ ಗುಂಡಿ ಅದು ಇದು ಅಂತ ಟೀಕೆ ಮಾಡ್ತಾರೆ ಎಂದು ಕಿಡಿಕಾರಿದರು.

ರಾಜಕೀಯಕ್ಕೆ ಟೀಕೆ ಮಾಡೋದು ಬೇಡ. ರಾಜ್ಯದ ಪರ ಬಿಜೆಪಿ ಎಂಪಿಗಳು ಬಾಯಿ ಬಿಡಲಿ. ನಾವು ಯಾರು ಶಾಶ್ವತ ಅಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇವೆ ಅನ್ನೋದು ಮುಖ್ಯ. ಸುಪ್ರೀಂಕೋರ್ಟ್ ತೀರ್ಪು ಕರ್ನಾಟಕಕ್ಕಿಂತ ತಮಿಳುನಾಡಿಗೆ ಜಾಸ್ತಿ ಅನುಕೂಲ. ಕಷ್ಟಕಾಲಕ್ಕೆ 66 ಟಿಎಂಸಿ ನೀರು ಮಾತ್ರ ನಮಗೆ ಸಿಗಲಿದೆ. ಉಳಿದ ಎಲ್ಲಾ ಅನುಕೂಲ ತಮಿಳುನಾಡಿಗೆ ಆಗಲಿದೆ. ಬೆಂಗಳೂರಿಗೆ ಕುಡಿಯೋ ನೀರಿಗೆ ಅವಕಾಶವೂ ಸಿಗಲಿದೆ. ನಮ್ಮ ರಾಜ್ಯದ ಹಿತ ಕಾಪಾಡೋಕೆ ತಿದ್ದುಪಡಿ ತರುವ ಪ್ಲ್ಯಾನ್ ಇದೆ ಎಂದು ತಿಳಿಸಿದರು.ಇದನ್ನೂ ಓದಿ: ವಿಕಸಿತ್ ಬಿಹಾರದ ಮೇಲೆ ನಂಬಿಕೆಯಿಟ್ಟ ಪ್ರತಿಯೊಬ್ಬ ಬಿಹಾರಿಯ ಗೆಲುವಿದು: ಅಮಿತ್ ಶಾ

 

Share This Article