ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ – ಡಿಕೆಶಿ ವಾರ್ನಿಂಗ್‌

Public TV
2 Min Read

– ಸಿಎಂ ಬೆನ್ನಿಗೆ ನಿಂತ ಕೈ ನಾಯಕರು; ಮೈತ್ರಿಕೂಟದ ವಿರುದ್ಧ ಕೌಂಟರ್‌ ಅಟ್ಯಾಕ್‌
– ಡಿಕೆಶಿ ಭಾಷಣದ ವೇಳೆ ʻಗೃಹಲಕ್ಷ್ಮಿʼ ಬರ್ತಿಲ್ಲ, ಬರ್ತಿಲ್ಲ ಅಂತ ಘೋಷಣೆ

ಮಂಡ್ಯ: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ (BJP JDS Padayatra) ಕೌಂಟರ್‌ ಕೊಡಲು ಇಂದಿನಿಂದ (ಆ.5) ಎರಡು ದಿನಗಳ ಕಾಲ ಕಾಂಗ್ರೆಸ್‌ ಜನಾಂದೋಲನ ಆರಂಭಿಸಿದೆ. ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಜನಾಂದೋಲನ ಸಮಾವೇಶ ಮೊದಲ ದಿನ ಕಾಂಗ್ರೆಸ್‌ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್‌ ಬೀಸಿದ್ದಾರೆ. ಅಲ್ಲದೇ ಬಿಜೆಪಿ – ಜೆಡಿಎಸ್‌ ಮೈತ್ರಿಕೂಟದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಭಾಷಣ ಮಾಡುತ್ತಾ, ಸಿದ್ದರಾಮಯ್ಯ ಏನು ಮಾಡಬಾರದ ತಪ್ಪು ಮಾಡಿದ್ದಾರೆ? ಸಿದ್ದರಾಮಯ್ಯ ಕಳ್ಳತನ ಮಾಡಿದ್ದಾರ? ಸರ್ಕಾರಿ ಜಮೀನು ಒಡೆದಿದ್ದಾರ? ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಂಜಯ್‌ ಲೀಲಾ ಬನ್ಸಾಲಿ ಚಿತ್ರದಲ್ಲಿ ನನ್ನಂತಹ ನಟರ ಅಗತ್ಯವಿಲ್ಲ: ಮನೋಜ್‌ ಬಾಜಪೇಯಿ

ನಿಮ್ಮ (ಬಿಜೆಪಿ) ಸರ್ಕಾರದಲ್ಲಾದ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಿ. ಆನಂತರ ಪಾದಯಾತ್ರೆ ಮಾಡಿ. ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿಗೆ ಸಿಎಂ ಆಗಿದ್ದು ನಿಮಗೆ ಸಹಿಸಲು ಆಗ್ತಿಲ್ಲ. ಸರ್ಕಾರ ಮಾಡುವ ಅವಕಾಶ ನಮಗೆ ಸಿಗಲಿಲ್ಲ ಎಂದು ಸಾಯುತ್ತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕೋಚಿಂಗ್‌ ಸೆಂಟರ್‌ಗಳು ಡೆತ್‌ ಚೇಂಬರ್‌ಗಳಾಗಿ ಮಾರ್ಪಟ್ಟಿವೆ – ಸುಪ್ರೀಂ ಚಾಟಿ

ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ, ಬರ್ತಿಲ್ಲ:
ಮದ್ದೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಜನಾಂದೋಲನ ಸಮಾವೇಶದಲ್ಲಿ, ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಪ್ರಸ್ತಾಪಿಸಿ ಡಿಕೆಶಿ ಭಾಷಣ ಮಾಡುತ್ತಿದ್ದರು. ಈ ವೇಳೆ ಈ ವೇಳೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ಬರ್ತಿದೆಯೋ – ಇಲ್ವೋ? ಎಂದು ಪ್ರಶ್ನಿಸಿದಾಗ ಗೃಹಲಕ್ಷ್ಮಿ ಯೋಜನೆ ಹಣ ಬರ್ತಿಲ್ಲ, ಬರ್ತಿಲ್ಲ ಎಂದು ಮಹಿಳೆಯರು ಕೂಗಿದ ದೃಶ್ಯವೂ ಕಂಡುಬಂದಿತು. ತಕ್ಷಣ ಎಚ್ಚೆತ್ತ ಡಿಕೆಶಿ, ಬರುತ್ತೆ ಬರುತ್ತೆ ಎಂದು ಸಮಾಧಾನಪಡಿಸಿದರು.

ಮುಂದುವರಿದು ಮಾತನಾಡುತ್ತಾ, ಒಂದು, ಎರಡು ತಿಂಗಳದ್ದು ಬಂದಿಲ್ಲ. ಅನುದಾನ ಬಿಡುಗಡೆಯಾಗಿದೆ ಶೀಘ್ರವೇ ಬರಲಿದೆ. ವಿದ್ಯುತ್ ಬಿಲ್ ಉಚಿತ ಜೀರೋ ಬರ್ತಿಲ್ವಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ. 10 ವರ್ಷದ ಸರ್ಕಾರ ನಮ್ಮದು ಎಂದು ಹೆಚ್‌ಡಿಕೆಗೆ ಟಾಂಗ್‌ ನೀಡಿದರು. ಇದನ್ನೂ ಓದಿ: Valmiki Scam | 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ – ನಾಗೇಂದ್ರ, ದದ್ದಲ್‌ ಹೆಸರಿಲ್ಲ

Share This Article