– ಈಡೇರಿಸಲಾಗದ ಬೇಡಿಕೆಯನ್ನ ಈಡೇರಿಸಿ ಅನ್ನೋದು ಸರಿಯಲ್ಲ ಎಂದ ಡಿಸಿಎಂ
ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರು ಮುಷ್ಕರಕ್ಕೆ (Transport Employees Strike) ಇಳಿದಿದ್ದಾರೆ. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಾರಿಗೆ ನೌಕರರು ಕೇಳಿರುವ ಬೇಡಿಕೆಯಲ್ಲಿ ತಪ್ಪಿಲ್ಲ. ಸಾರಿಗೆ ನೌಕರರು ಹಠ ಮಾಡೋದು ಸರಿಯಲ್ಲ. ನೌಕರರು ಸಹಕಾರ ಕೊಡಬೇಕು. ಸಾರಿಗೆ ನೌಕರರ ಜೊತೆ ಸಿಎಂ, ಸಚಿವರು ಸಭೆ ಮಾಡಿದ್ದಾರೆ. ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಳ್ಳಬೇಕು. ನಾಗರಿಕರ ವಿಚಾರವನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಇದು ಪಾಪರ್ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್ ವಾಗ್ದಾಳಿ
ಈಡೇರಿಸಲಾಗದ ಬೇಡಿಕೆಯನ್ನ ಈಡೇರಿಸಿ ಅನ್ನೋದು ಸರಿಯಲ್ಲ. ಸಾರ್ವಜನಿಕರ ಹಿತ ಮುಖ್ಯ, ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಿ. ಹಠ ಮಾಡೋದು ಅರ್ಥ ಇಲ್ಲ. ಕೆಲವು ಸಾರಿಗೆ ನೌಕರರು ಕೆಲಸಕ್ಕೆ ಬಂದಿದ್ದಾರೆ. ಅವರಿಗೆಲ್ಲ ಅಭಿನಂದನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ
ಹಳದಿ ಮೆಟ್ರೊ ಮಾರ್ಗದ ಉದ್ಘಾಟನೆಗೆ ಮೋದಿ ಆಗಮನ:
ಹಳದಿ ಮೆಟ್ರೊ ಮಾರ್ಗದ (Yellow Metro Line) ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಆಗಸ್ಟ್ 10ರಂದು ಬರುವ ಮಾಹಿತಿ ನೀಡಿದ್ದಾರೆ. ಹಾಗಾಗಿ ಅದರ ತಯಾರಿಗೆ ಪರಿಶೀಲನೆ ಇಂದು ಮಾಡ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಧಾನಿಯವರು ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗೆ ಬರುತ್ತೇನೆ ಎಂದಿದ್ದಾರೆ. ನಾವು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗುತ್ತದೆ. ಬೇರೆ ಬೇರೆ ಕಾರ್ಯಕ್ರಮದ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಕೊಟ್ಟಿಲ್ಲ. ಕಾರ್ಯಕ್ರಮದ ಸಮಯದ ಬಗ್ಗೆ ಇನ್ನೂ ಮಾಹಿತಿ ತಿಳಿಸಿಲ್ಲ. ಬಿಜೆಪಿಯವರ ರೈಲ್ವೆ ಕಾರ್ಯಕ್ರಮ ಹಾಗೂ ಮೆಟ್ರೋ ಉದ್ಘಾಟನೆ ಕೂಡ ಇದೆ ಎಂದು ತಿಳಿಸಿದ್ದಾರೆ.