ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ – ಡಿಕೆಶಿ ಸ್ಪಷ್ಟನೆ

By
1 Min Read

– ಇನ್ನೂ ಎಂಟೂವರೆ ವರ್ಷ ನಮ್ಮದೇ ಸರ್ಕಾರ ಎಂದ ಡಿಸಿಎಂ

ಬೆಂಗಳೂರು: ಕಳೆದ ಒಂದು ದಿನದ ಹಿಂದೆಯಷ್ಟೇ ಶಕ್ತಿ ಯೋಜನೆ (Shakti Scheme) ಪರಿಷ್ಕರಣೆ ಮಾಡುವ ಸುಳಿವು ಕೊಟ್ಟಿದ್ದ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಮರುದಿನವೇ ಯುಟರ್ನ್‌ ಹೊಡೆದಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು (Guarantee Scheme) ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಶಕ್ತಿ ಯೋಜನೆಯಲ್ಲೂ ಯಾವುದೇ ಪರಿಷ್ಕರಣೆ ಇಲ್ಲ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಯಂದು ‘ಪುಷ್ಪ 2’ ಅಪ್‌ಡೇಟ್- ಪುಷ್ಪರಾಜ್, ಶ್ರೀವಲ್ಲಿ ರೊಮ್ಯಾಂಟಿಕ್ ಪೋಸ್ಟರ್ ಔಟ್

ಮುಂದುವರಿದು, ನಮ್ಮ ಸರ್ಕಾರವನ್ನ ಷಡ್ಯಂತ್ರದಿಂದ ಕೆಡವಲು ಯಾರ ಹಣೆಯಲ್ಲೂ ಬರೆದಿಲ್ಲ. ಇನ್ನೂ ಎಂಟೂವರೆ ವರ್ಷ ನಮ್ಮದೇ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಡಿಕೆಶಿ ಹೇಳಿದ್ದೇನು?
ಅನೇಕ ಜನರು ನನಗೆ ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡೋಕೆ ಸಿದ್ಧವಾಗಿದ್ದೇವೆ‌. ನಮಗೆ ಉಚಿತ ಪ್ರಯಾಣ ಬೇಡ ಅಂತ ಅನೇಕರು ನನಗೆ ಮೆಸೇಜ್ ಹಾಕಿದ್ದಾರೆ ಎಂದಿದ್ದರು. ಇದನ್ನೂ ಓದಿ: 1 ವರ್ಷದಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದೇನೆ- ಶ್ರೀದೇವಿ ಭೈರಪ್ಪ

ನಾವು ಟಿಕೆಟ್‌ಗೆ ದುಡ್ಡು ಕೊಡೋಕೆ ರೆಡಿ ಇದ್ದೇವೆ. ಆದರೆ ಬಸ್ ನಲ್ಲಿ ಹಣ ತೆಗೆದುಕೊಳ್ಳುತ್ತಿಲ್ಲ ಅಂತ ನನಗೆ ಹೇಳ್ತಿದ್ದಾರೆ. ಈ ಬಗ್ಗೆ ನಾವು ಕೂತು ಚರ್ಚೆ ಮಾಡ್ತೀವಿ. ಅನೇಕರು ನಾವು ಟಿಕೆಟ್ ಹಣ ಕೊಡೋಕೆ ಸಿದ್ಧ ಅಂತ ಪ್ರಾಮಾಣಿಕವಾಗಿ ಅಭಿಪ್ರಾಯ ಹೇಳ್ತಿದ್ದಾರೆ. ‌ಹೀಗಾಗಿ ನಾವು, ರಾಮಲಿಂಗಾರೆಡ್ಡಿ ಎಲ್ಲಾ ಕೂತು ಈ ಬಗ್ಗೆ ತೀರ್ಮಾನ‌ ಮಾಡ್ತೀವಿ ಅಂತ ತಿಳಿಸಿದ್ದರು.

Share This Article