ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕ್ಲಿಲ್ಲ; ಬಿಜೆಪಿ ವಿರುದ್ಧ ನಾವು ಅಭಿಯಾನ ಮಾಡ್ಬೇಕಾಗುತ್ತೆ – ಡಿಕೆಶಿ

Public TV
1 Min Read

ಬೆಂಗಳೂರು: ಕಪ್ಪು ಹಣ ತಂದು ನಮ್ಮ ಅಕೌಂಟ್‌ಗೆ ಹಾಕಲೇ ಇಲ್ಲ. ಈಗ ನಾವು ಅವರ ಮೇಲೆ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಕಿಡಿಕಾರಿದರು.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ‘ಶಕ್ತಿ’ಗೆ ವಿಧಾನಸೌಧದಲ್ಲಿ ಇಂದು ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬಸವಣ್ಣನ ನಾಡಿನಲ್ಲಿದ್ದೇವೆ. ನುಡಿದಂತೆ ನಡೆಯೋದು ಕಾಂಗ್ರೆಸ್ ಶಕ್ತಿ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಟೀಕೆ ಮಾಡೋದ್ರಿಂದ ವಿರೋಧ ಪಕ್ಷಗಳನ್ನು ತಿದ್ದೋ ಕೆಲಸ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ನಮ್ಗೆ ಫ್ರೀ ಟಿಕೆಟ್ ಬೇಡ್ವೇಬೇಡ, ದಯವಿಟ್ಟು ಎಣ್ಣೆ ರೇಟು ಇಳಿಸಿ: ಯುವಕ ಮನವಿ

ಬಿಜೆಪಿಯವರು ಕಪ್ಪು ಹಣ ತಂದು ಅಕೌಂಟ್‌ಗೆ ಹಾಕಲಿಲ್ಲ. ಆದಾಯ ಡಬಲ್‌ ಮಾಡಲಿಲ್ಲ. ಯುವಕರಿಗೆ ಉದ್ಯೋಗಗಳನ್ನು ಕೊಡಲಿಲ್ಲ. ನಾವು ಬಿಜೆಪಿ ವಿರುದ್ದ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಇವತ್ತು ಪವಿತ್ರವಾದ ದಿನ. ಜನರನ್ನು ಸಂತೋಷ ಪಡಿಸುವುದೇ ನಿಜವಾದ ಈಶ್ವರನ ಪೂಜೆ. ನಾನು ಈಗ ಈಶ್ವರನ ಪೂಜೆ ಮಾಡಿ ಬಂದಿದ್ದೇನೆ. ಜನರಲ್ಲಿ ಈಶ್ವರನನ್ನ ನೋಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ‘ಶಕ್ತಿ’ ಯೋಜನೆಯ ಮಹಿಳೆಯರ ಉಚಿತ ಟಿಕೆಟ್‌ ಹೇಗಿರುತ್ತೆ ಗೊತ್ತಾ?

ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯನ್ನು ಉದ್ಘಾಟಿಸಿದರು. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. 18,609 ಬಸ್‌ಗಳು ಉಚಿತ ಪ್ರಯಾಣಕ್ಕೆ ಲಭ್ಯ ಇವೆ. 41.80 ಲಕ್ಷ ಮಹಿಳೆಯರು ಈ ಸೌಲಭ್ಯದ ಫಲಾನುಭವಿಗಳು ಎಂದು ಅಂದಾಜಿಸಲಾಗಿದೆ.

Share This Article