Chinnaswamy Stampede | ನಾನೇನ್ ಕ್ರೈಂ ಮಾಡಿದ್ದೀನಿ?: ಡಿ.ಕೆ ಶಿವಕುಮಾರ್‌

Public TV
1 Min Read

ಬೆಂಗಳೂರು: ನನ್ನ ರಾಜೀನಾಮೆ ಕೇಳ್ತಿದ್ದಾರೆ, ಅವರ ಆಸೆ ಈಡೇರಿಸೊಣ. ನಾನು ಹೆಣದ ಮೇಲೆ ರಾಜಕೀಯ ಮಾಡಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆದ ಕಾಲ್ತುಳಿತ ಪ್ರಕರಣಕ್ಕೆ (Bengaluru Stampede Case) ಸಂಬಂಧಿಸಿದಂತೆ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದರು. ನಾನು ಆರ್‌ಸಿಬಿ ಆಟಗಾರರನ್ನು ಕನ್ನಡ ಧ್ವಜ ಕೊಟ್ಟು ವೆಲ್ ಕಮ್ ಮಾಡಿದ್ದೇನೆ. ಇದರಲ್ಲಿ ನಾನೇನು ಕ್ರೈಂ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಖಿಲ್‌ ಸೋಸಲೆನಾ ಬಿಟ್ಬಿಡಿ – ಪೊಲೀಸ್ರಿಗೆ ಒತ್ತಡ ಹಾಕಿದ್ದಕ್ಕೆ ಗೋವಿಂದರಾಜ್‌ ತಲೆದಂಡ

ಅವರು ಹೋಗೋದಕ್ಕೂ ಕೂಡ ಜಾಗ ಇರಲಿಲ್ಲ. ಅವರನ್ನ ನಾನು ಕಾರಿನಲ್ಲಿ ಕೂರಿಸಿಕೊಂಡು ಹೋದೆ. ಇನ್ನು ದುರಂತದ ಬಗ್ಗೆ ಮಾಧ್ಯದವರು ಹೇಳಿದ ಬಳಿಕವೇ ನಮಗೆ ಗೊತ್ತಾಯ್ತು. ಸದನದಲ್ಲಿ ಎಲ್ಲವೂ ಬರಲಿದೆ. ಡಾ. ರಾಜ್ ಕುಮಾರ್ ಮೃತಪಟ್ಟಾಗ ಏನಾಯ್ತು ಅಂತ ಗೊತ್ತಿದೆ ಎಂದು ಹೆಚ್‌.ಡಿ ಕುಮಾರಸ್ವಾಮಿಯವರಿಗೆ ಕುಟುಕಿದ್ದಾರೆ.

ನಾನು ಡರ್ಟಿ ಪಾಲಿಟಿಕ್ಸ್ ಮಾತಾಡಲ್ಲ. ಯಾರೇ ಮಾಡಿದರೂ ಕೂಡ ಸರ್ಕಾರ ಜವಬ್ದಾರಿ ತೆಗೆದುಕೊಳ್ಳುತ್ತದೆ. ಇದು ನಮ್ಮ ಮನೆಯ ನೋವಾಗಿದೆ. ಒಂದು ತಾಯಿ ಹೇಳ್ತಾರೆ, ಪೋಸ್ಟ್ ಮಾರ್ಟಮ್ ಮಾಡಬೇಡಿ ಅಂತ, ಎಷ್ಟು ಹೊಟ್ಟೆ ಉರಿಯಬೇಕು ಅಲ್ವ? ರಾಜಕೀಯ ಮಾಡೋದು ಬೇಡ ಎಂದಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್‌ ಹೋರಾಟದ ವಿಚಾರವಾಗಿ, ಯಾವಾಗ ಜಂಟಿ ಬಿಟ್ಟಿದ್ದಾರೆ? ಇನ್ನೂ 10 ಜನ ಸೇರಿಸಿಕೊಂಡು ಹೋರಾಟ ಮಾಡಲಿ. ಅವರು ಹೆಣದ ಮೇಲೆ ಅವರು ರಾಜಕೀಯ ಮಾಡ್ತಾರೆ, ನಾವು ಮಾಡಲ್ಲ. ನಾವು ಕಣ್ಣೀರು ಹಾಕಿದ್ರೆ ಡ್ರಾಮಾ, ಇವರ ಕಣ್ಣೀರು ಏನೇನಾಯ್ತು? ಎಲೆಕ್ಷನ್ ಟೈಂನಲ್ಲಿ ಯಾವ ಯಾವ ಜಿಲ್ಲೆಯಲ್ಲಿ ಏನೇನ್ ನಡೆದಿದೆ ಗೊತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿ.ಕೆ ಶಿವಕುಮಾರ್ ಡಿಸಿಎಂ ಅಲ್ಲ, ರೀಲ್ಸ್ ಮಿನಿಸ್ಟರ್: ನಿಖಿಲ್ ಕುಮಾರಸ್ವಾಮಿ ಕಿಡಿ

Share This Article