ಮಹಾದಾಸೋಹಿ ಶರಣಬಸಪ್ಪ ಅಪ್ಪ ಅಂತಿಮ ದರ್ಶನ ಪಡೆದ ಡಿಕೆಶಿ

Public TV
1 Min Read

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಕ್ರಾಂತಿಯ ಹರಿಕಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಲಿಂಗೈಕ್ಯರಾಗಿದ್ದಾರೆ. ಈ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕಲಬುರಗಿಗೆ ಆಗಮಿಸಿ ಶರಣಬಸಪ್ಪ ಅಪ್ಪ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಸರ್ಕಾರದ ಪ್ರತಿನಿಧಿಯಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಕಲಬುರಗಿ ನಗರದ ಶರಣಬಸವೇಶ್ವರ ಸಂಸ್ಥಾನಕ್ಕೆ ಆಗಮಿಸಿದ್ದಾರೆ. ಶಿವಾನುಭವ ಮಂಟಪದಲ್ಲಿರುವ ಅಪ್ಪ ಅವರ ಪಾರ್ಥೀವ ಶರೀರಕ್ಕೆ ನಮಸ್ಕರಿಸಿ, ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಅಜಯ್ ಸಿಂಗ್ ಅವರು ಡಿಕೆಶಿಗೆ ಸಾಥ್ ನೀಡಿದ್ದಾರೆ.ಇದನ್ನೂ ಓದಿ: ಶರಣಬಸಪ್ಪ ಅಪ್ಪ ಲಿಂಗೈಕ್ಯ – ಅಂತ್ಯಕ್ರಿಯೆಗೆ 1 ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಸಿದ್ಧತೆ

ಈ ವೇಳೆ ಮಾತನಾಡಿದ ಅವರು, ಅಪ್ಪ ಅವರ ಶರೀರ ಇದೀಗ ದೇವರ ಪಾದಕ್ಕೆ ಸೇರಿದೆ. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಸೇವೆ ಮಾಡಿದ್ದಾರೆ. ಆ ಪೈಕಿ ಶಿಕ್ಷಣದಲ್ಲಿ ಅಪ್ಪ ಅವರು ತುಂಬಾ ಪ್ರಸಿದ್ಧರಾಗಿದ್ದರು. ಎಲ್ಲಾ ಧರ್ಮದವರು ಸಹ ಅಪ್ಪ ಅವರಿಗೆ ಗೌರವ ಕೊಡುವುದು ನಾವು ಕಾಣುತ್ತಿದ್ದೇವೆ. ಅವರು ಮಾಡಿದ್ದ ಸಾಧನೆಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅಪ್ಪ ಅವರ ಅಗಲಿಕೆಯಿಂದಾಗಿ ಅವರ ಕುಟುಂಬ, ಭಕ್ತರು ಹಾಗೂ ಸರ್ಕಾರ ನೋವಿನಲ್ಲಿದೆ ಎಂದು ಸಂತಾಪ ಸೂಚಿಸಿದ್ದಾರೆ.

ಇದೇ ವೇಳೆ ಪೊಲೀಸ್ ಇಲಾಖೆಯ ಮೂಲಕ ಮೂರು ಸುತ್ತು ಗುಂಡು ಹಾರಿಸಿ ಮಹಾದಾಸೋಹಿ ಶರಣಬಸಪ್ಪ ಅಪ್ಪ ಅವರಿಗೆ ಗೌರವ ಸಲ್ಲಿಸಿದರು.ಇದನ್ನೂ ಓದಿ: ಲಿಂಗೈಕ್ಯರಾದ ಶರಣಬಸಪ್ಪ ಅಪ್ಪ ಅಂತಿಮ ದರ್ಶನಕ್ಕೆ ಹರಿದು ಬಂದ ಭಕ್ತ ಸಾಗರ

Share This Article