ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದ ಕಾರ್ಯಕರ್ತನ ಕೈಗೆ ಡಿಕೆಶಿ ಏಟು – ಮೊಬೈಲ್ ಕೆಳಕ್ಕೆ

Public TV
2 Min Read

ಬಳ್ಳಾರಿ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೊಸಪೇಟೆಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದ ಕಾರ್ಯಕರ್ತರ ಕೈಗೆ ಹೊಡೆದಿದ್ದಾರೆ.

ಭಾನುವಾರ ಬಳ್ಳಾರಿಯ ಹೊಸಪೇಟೆಯಲ್ಲಿ ಫೆಬ್ರವರಿ 10ರಂದು ನಡೆಯಲಿರುವ ರಾಹುಲ್ ಗಾಂಧಿ ಸಮಾವೇಶದ ಸಿದ್ಧತೆ ವೀಕ್ಷಿಸಲು ಡಿಕೆ ಶಿವಕುಮರ್ ಆಗಮಿಸಿದ್ದರು.

ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ನೋಡಲು ಮುಗಿಬಿದ್ದರು. ಈ ಗುಂಪಿನಲ್ಲಿದ್ದ ಒಬ್ಬರು ಮೊಬೈಲ್ ತೆಗೆದು ಸೆಲ್ಫಿ ತೆಗೆಯಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಡಿಕೆಶಿವಕುಮಾರ್ ಮೊಬೈಲ್ ಇಟ್ಕೊಂಡವರ ಕೈಗೆ ಬಾರಿಸಿದ್ದಾರೆ. ಮೊಬೈಲ್ ಕೆಳಗಡೆ ಬಿದ್ದಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯನಗರ ಸಾಮ್ರಾಜ್ಯದಿಂದಲೇ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾರೆ. ಫೆಬ್ರವರಿ 10 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುವ ಕಾಂಗ್ರೆಸ್ ಸಮಾವೇಶದ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ರಾಹುಲ್ ಗಾಂಧಿ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಪ್ರಚಾರ ಮಾಡಲಿದ್ದು, ಹೊಸಪೇಟೆ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿಯಲ್ಲಿ ಪ್ರವಾಸ ಮಾಡಲಿದ್ದಾರೆಂದು ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರವಾಸಕ್ಕೆ ಮುನ್ನವೇ ರಾಜ್ಯ ಕಾಂಗ್ರೆಸ್‍ನಲ್ಲಿ ಅಸಮಾಧಾನ ಸ್ಫೋಟ

ಯಾವುದೇ ಷರತ್ತು ಒಪ್ಪಂದ ಒತ್ತಡವಿಲ್ಲದೇ ಆನಂದಸಿಂಗ್ ಮತ್ತು ನಾಗೇಂದ್ರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಾವೂ ಸಹ ಸದ್ಯಕ್ಕೆ ಟಿಕೆಟ್ ನೀಡುವ ಆಶ್ವಾಸನೆ ನೀಡಿಲ್ಲ ಮತ್ತು ಜೊತೆಗೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಯಾರ ಮೇಲೆಯೂ ಗಂಭಿರ ಆರೋಪಗಳಿಲ್ಲ. ರಸ್ತೆಯಲ್ಲಿ ಬರೋ ದೇವಾಲಯಗಳಿಗೆ, ಗುಡಿಗಳಿಗೆ ಭೇಟಿ ನೀಡೋದು ನಮ್ಮ ಸಂಸ್ಕೃತಿ, ಹಾಗಾಗಿ ರಾಹುಲ್ ಗಾಂಧಿ ಸಂಚರಿಸುವ ಮಾರ್ಗದಲ್ಲಿ ಬರುವ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಅಂತಾ ತಿಳಿಸಿದರು. ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವಿದ್ಯಾರ್ಥಿಯ ಕೈಗೆ ಏಟು ಕೊಟ್ಟ ಸಚಿವ ಡಿಕೆಶಿ

ಡಿಕೆ ಶಿವಕುಮರ್ ಸೆಲ್ಫಿ ಕ್ಲಿಕ್ಕಿಸಲು ಬಂದವರ ಮೇಲೆ ಹೊಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ನವೆಂಬರ್ ನಲ್ಲಿ ಬೆಳಗಾವಿಯ ಶೇಖ್ ಹೋಮಿಯೋಪತಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ದಿನಾಚರಣೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಡಿಕೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಹಿಂದಿನಿಂದ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದ. ಇದನ್ನು ನೋಡಿದ ಡಿಕೆ ಶಿವಕುಮಾರ್ ಸಿಟ್ಟಾಗಿ ಆತನ ಕೈಗೆ ಹೊಡೆದಿದ್ದರು. ಕೂಡಲೇ ವಿದ್ಯಾರ್ಥಿ ಆ ಸ್ಥಳದಿಂದ ಓಡಿ ಹೋಗಿದ್ದ. ಇದನ್ನೂ ಓದಿ: ‘ಕೈ’ ಹಿಡಿದ ಆನಂದ್ ಸಿಂಗ್ ಮತ್ತು ಟೀಂ- ಮತ್ತಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ಸಿಗಂತೆ!

https://www.youtube.com/watch?v=8S9cLKIhKYg

https://youtu.be/uJyAgNhH1MQ

Share This Article
Leave a Comment

Leave a Reply

Your email address will not be published. Required fields are marked *