ದಿಢೀರ್‌ ಬೆಳವಣಿಗೆ – ಪರಪ್ಪನ ಅಗ್ರಹಾರಕ್ಕೆ ತೆರಳಿದ ಡಿಕೆಶಿ

1 Min Read

ಬೆಂಗಳೂರು: ದಿಢೀರ್‌ ಬೆಳವಣಿಗೆಯೊಂದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪರಪ್ಪನ ಅಗ್ರಹಾರದತ್ತ ಹೊರಟಿದ್ದಾರೆ.

ಧಾರವಾಡದ ಶಾಸಕ ವಿನಯ್‌ ಕುಲಕರ್ಣಿ (Vinay Kulkarni) ಮತ್ತು ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ (Veerendra Pappi) ಅವರನ್ನು ಭೇಟಿ ಮಾಡಲು ಡಿಕೆಶಿ ದಿಢೀರ್‌ ಹೊರಟ್ಟಿದ್ದಾರೆ. ಇದನ್ನೂ ಓದಿ: ನನ್ನ ರಕ್ತದಲ್ಲೇ ಗುಂಪುಗಾರಿಕೆ ಇಲ್ಲ, ಶಾಸಕರು ದೆಹಲಿಗೆ ಹೋದರೆ ತಪ್ಪೇನು? : ಡಿಕೆಶಿ

ಇಬ್ಬರು ಕಾಂಗ್ರೆಸ್‌ ಶಾಸಕರು ಜೈಲಿನಲ್ಲಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್‌ ಕುಲಕರ್ಣಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವೀರೇಂದ್ರ ಪಪ್ಪಿ ಜೈಲು ಸೇರಿದ್ದಾರೆ.

ಈಗಾಗಲೇ ಡಿಕೆಶಿ ಬಣದ ಕೆಲ ಶಾಸಕರು ದೆಹಲಿಗೆ ತೆರಳಿದ್ದಾರೆ. ಸಿದ್ದರಾಮಯ್ಯ ಬಣದ ಶಾಸಕರು ಬೆಂಗಳೂರಿನಲ್ಲಿ ಡಿನ್ನರ್‌ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ, ಇನ್ನೂ 2 ಬಜೆಟ್ ಮಂಡಿಸ್ತೀನಿ: ಸಿದ್ದರಾಮಯ್ಯ ಖಡಕ್‌ ನುಡಿ

ಈ ಹಿಂದೆಯೇ ನವೆಂಬರ್‌ ಕ್ರಾಂತಿ ಆಗಲಿದೆ ಎಂಬ ಸುದ್ದಿ ಬಂದಿತ್ತು. ಆದರೆ ಈಗ ನವೆಂಬರ್‌ ಕ್ರಾಂತಿ ಆರಂಭವಾಗಿದ್ದು ನಂಬರ್‌ ಕ್ರಾಂತಿ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಒಂದು ವೇಳೆ ಅಧಿಕಾರ ಹಂಚಿಕೆ ವಿಚಾರ ಬಂದರೆ ಎರಡು ಬಣದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಈ ವಿಚಾರದ ಬಗ್ಗೆ ಮಾತನಾಡಲು ಡಿಕೆಶಿ ಇಬ್ಬರು ಶಾಸಕರ ಜೊತೆ ಮಾತನಾಡಲು ತೆರಳಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

Share This Article