ರಾಮನಗರದಲ್ಲಿ ಅಶಾಂತಿ ಸೃಷ್ಠಿಸೋದೆ ಹೆಚ್‌ಡಿಕೆ ಕೆಲಸ: ಡಿಕೆಶಿ

Public TV
1 Min Read

ರಾಮನಗರ: ಜಿಲ್ಲೆಯಲ್ಲಿ (Ramanagar) ವಕೀಲರ ಧರಣಿಗೆ ಕುಮಾರಸ್ವಾಮಿಯೇ ಕಾರಣ. ಅಶಾಂತಿ ಸೃಷ್ಠಿಸುತ್ತಿರುವುದೇ ಜೆಡಿಎಸ್ (JDS) ಹಾಗೂ ಬಿಜೆಪಿ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ರಾಮನಗರದಲ್ಲಿ ಡಿ.ಕೆ. ಸಹೋದರರಿಂದ ಅಶಾಂತಿ ಸೃಷ್ಟಿ ಎಂದಿದ್ದ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕನಕಪುರದಲ್ಲಿ ಪ್ರತಿಕ್ರಿಯಿಸಿದ ಅವರು, ವಕೀಲರ ವಿಷಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಬಿಜೆಪಿಯವರು ಅಶಾಂತಿ ಸೃಷ್ಟಿಸುವುದು ಮಾಮೂಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಮು ವಿಷಯದಲ್ಲಿ ಅವರು ಯಾವಾಗಲೂ ರಾಜಕೀಯ ಮಾಡುತ್ತಾರೆ. ಅವರಿಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗುವುದಿಲ್ಲ. ಸ್ಥಳೀಯ ಶಾಸಕ ಮತ್ತು ಪಿಎಸ್‌ಐ ಸಹ ಅಲ್ಪಸಂಖ್ಯಾತರಾಗಿದ್ದರಿಂದ ವಕೀಲರ ವಿಷಯದಲ್ಲಿ ರಾಜಕೀಯ ಮಾಡಿದ್ದಾರೆ. ಈ ಬಗ್ಗೆ ಅಧಿವೇಶನದಲ್ಲಿ ಸಹ ಅಲ್ಪಸಂಖ್ಯಾತ ಅಧಿಕಾರಿ ಬೇಡ ಎಂದಿದ್ದರು. ವಕೀಲರ ಹೋರಾಟಕ್ಕೆ ಸಂಬಂಧಿಸಿದಂತೆ, ಪಿಎಸ್‌ಐ ವಿರುದ್ಧ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಯಾರಿಗೂ ಅನ್ಯಾಯ ಆಗಬಾರದು ಅಂತ ಹೇಳಿದೆ ಎಂದರು. ಇದನ್ನೂ ಓದಿ: ವಿಶ್ವದ ಏಕೈಕ ಮಂದಸ್ಮಿತ ಬಾಹುಬಲಿಗೆ ಗುರುವಾರ ಮಹಾಮಸ್ತಕಾಭಿಷೇಕ

Share This Article