ಪಿಎಸ್‍ಐ ಹಗರಣದಲ್ಲಿ ಕೇವಲ 18-20 ಹುಡುಗರನ್ನ ಅರೆಸ್ಟ್ ಮಾಡಿದ್ರೆ ಸಾಲೋದಿಲ್ಲ: ಡಿಕೆಶಿ

Public TV
2 Min Read

ರಾಮನಗರ: ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಕೇವಲ 18 – 20 ಜನ ಹುಡುಗರನ್ನ ಅರೆಸ್ಟ್ ಮಾಡಿದರೆ ಸಾಲುವುದಿಲ್ಲ, ನಮಗೂ ಎಲ್ಲಾ ವಿಚಾರ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಮಾಗಡಿಯ ದರ್ಶನ್ ಗೌಡ ಇಂದು ಅರೆಸ್ಟ್ ಆಗಿರುವ ವಿಚಾರವಾಗಿ ಕನಕಪುರದ ಯಡಮಾರನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನನಗೆ ಏನು ಸತ್ಯ ಗೊತ್ತಿತ್ತು ಅದರ ಆಧಾರದ ಮೇಲೆ ಹೇಳಿದ್ದೆ. ಅವತ್ತು ಸಿಐಡಿಯವರು ಕರೆದುಕೊಂಡು ಹೋಗಿದ್ದರು, ಮತ್ತೆ ಕಳುಹಿಸಿದ್ದರು. ವಿಚಾರಣೆ ಮಾಡದೇ ಹೇಗೆ ಹೇಳಲು ಸಾಧ್ಯ? ಫೋನ್ ಯಾರು ಮಾಡಿದ್ದರು? ಯಾಕೆ ಮಾಡಿದ್ದರು ಎಂಬುದು ಹೇಳಿರಲಿಲ್ಲ. ಬಹಳ ಅಬ್ಬರದಿಂದ ಸರ್ಕಾರದವರು, ಮಂತ್ರಿಗಳು ಮಾತನಾಡುತ್ತಿದ್ದರು. ಈಗ ಕರೆದುಕೊಂಡು ಹೋಗಿದ್ದಾರೆ. ನಮಗೆ ಎಲ್ಲಾ ಗೊತ್ತಿತ್ತು. ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಪಾಸಾಗಿದ್ದಾರೆ ಎನ್ನುವುದನ್ನು ಮುಚ್ಚಿ ಹಾಕುವುದಕ್ಕೆ ಏನೇನು ಪ್ರಯತ್ನ ಮಾಡಿದ್ದರು. ಈಗ ಕರೆದುಕೊಂಡು ಹೋಗಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್

ಪಾಪ ಆ ಹುಡುಗರು ಬಾಳೆಹಣ್ಣು ತಿನ್ನುವುದಕ್ಕೆ ಬಂದವರು, ಅಂಗಡಿ ಓಪನ್ ಇದ್ದರೆ ವ್ಯಾಪಾರಕ್ಕೆ ಬರುತ್ತಾರೆ. ಇದರಲ್ಲಿ ಯಾವ ರಾಜಕಾರಣಿ, ಆಫೀಸರ್ ಇದ್ದರೂ ಹೊರ ತರಬೇಕು. ಬರೀ 18 – 20 ಜನ ಹುಡುಗರನ್ನ ಅರೆಸ್ಟ್ ಮಾಡಿದರೆ ಸಾಲುವುದಿಲ್ಲ. ನಮಗೂ ಎಲ್ಲಾ ವಿಚಾರ ಗೊತ್ತಿದೆ. ಒಬ್ಬನಿಗೆ ಪ್ರತ್ಯೇಕವಾಗಿ ಇನ್ ಸರ್ವೀಸ್ ಆರ್ಡರ್ ಮಾಡಿದ್ದಾರೆ ಎಂಬುದು ಗೊತ್ತಿದೆ. ಬಹಳ ದೊಡ್ಡ ಭ್ರಷ್ಟಾಚಾರದ ಕೂಪ ಕರ್ನಾಟಕದಲ್ಲಿದೆ. ಇದರ ವಿರುದ್ಧ ಅಲ್ಲ. ಎಲ್ಲಾ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಮ್ಮ ಹೋರಾಟ ನಡೆಯಲಿದೆ. ನನ್ನ ಹೋರಾಟ ಇದೊಂದೇ ಅಲ್ಲ, ಎಲ್ಲಾ ನಿರುದ್ಯೋಗ ಯುವಕರ ಹಿತದೃಷ್ಟಿಯಿಂದ ನಾನು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ದೇಶಕ್ಕೆ RSS-BJP ಕೊಡುಗೆ ಏನು, ತಾಕತ್ತಿದ್ರೆ ಚರ್ಚೆಗೆ ಬನ್ನಿ: ಉಗ್ರಪ್ಪ ಸವಾಲ್

ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬ್ರಾಂಡ್ ಎಂಬ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಮಾಡಿರುವವರ ಬಗ್ಗೆ ತನಿಖೆ ಮಾಡಲು ಹೇಳಿ. ನೇಮಕಾತಿ ಅಥವಾ ಅರ್ಕಾವತಿ ವಿಷಯದಲ್ಲಿ ಹಗರಣ ಮಾಡಿದರೆ ತನಿಖೆ ಮಾಡಲಿ. ಅವರ ಬಳಿ ಇನ್ನೂ ಅಧಿಕಾರ ಇದೆ. ತನಿಖೆ ಮಾಡಲು ಇಲ್ಲಿ ಯಾರೂ ಬೇಡ ಎನ್ನುವುದಿಲ್ಲ. ಇಲ್ಲಿ ಜನ ಯಾರ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಎಲ್ಲಾ ಸಾಕ್ಷಿ ಕಣ್ಣಲ್ಲೇ ಸಿಗುತ್ತದೆ ಎಂದು ಟಾಂಗ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *