ಕಮಿಷನ್ ಬಲೆಯಲ್ಲಿ ಡಿಕೆಶಿ ಏಕಾಂಗಿ- ಸಿಎಂ ಬಳಿಕ ಸಚಿವರೂ ಮೌನ!

Public TV
2 Min Read

ಬೆಂಗಳೂರು: ಗುತ್ತಿಗೆದಾರರ ಕಮಿಷನ್ ಬಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಏಕಾಂಗಿಯಾದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

ಹೌದು. ಸಿಎಂ ಸಿದ್ದರಾಮಯ್ಯರ (Siddaramaiah) ಮೌನ ಆಯ್ತು, ಈಗ ಸಚಿವರ ಸರದಿ. ಡಿಕೆಶಿ ಪರ ಬ್ಯಾಟಿಂಗ್ ಮಾಡೋಕೆ ಸಚಿವರು ಹಿಂದೇಟು ಹಾಕುತ್ತಿದ್ದಾರೆ. 2-3 ಜನ ಬಿಟ್ಟು ಉಳಿದವರು ರಿಯಾಕ್ಷನ್ ಕೊಡದೇ ಫುಲ್ ಸೈಲೆಂಟ್ ಆಗಿದ್ದಾರೆ. ಇಷ್ಟು ದೊಡ್ಡ ಆರೋಪ ಮಾಡಿದರೂ ಡಿಕೆ ಪರ ಸಚಿವರು ನಿಲ್ಲುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವರ ಮೌನಕ್ಕೆ ಕಾರಣ ಏನು?: ಡಿ.ಕೆ ಶಿವಕುಮಾರ್ ಮೇಲಿನ ಆರೋಪಕ್ಕೆ ಸಿದ್ದರಾಮಯ್ಯ ಬಣದ ಸಚಿವರು ಸಹಜವಾಗಿಯೇ ಮೌನವಹಿಸಿದ್ದಾರೆ. ಸಿದ್ದರಾಮಯ್ಯರ ಮೇಲಿನ ಆರೋಪ ಬಂದಾಗ ಡಿಕೆಶಿವಕುಮಾರ್ ಸುಮ್ಮನೆ ಇದ್ದರು. ಹೀಗಾಗಿ ನಾವು ಯಾಕೆ ಡಿಕೆಶಿವಕುಮಾರ್ ಪರ ಹೋಗಬೇಕು ಅಂತ ಸಿದ್ದರಾಮಯ್ಯ ಆಪ್ತರು ಸುಮ್ಮನಾಗಿದ್ದಾರೆ. ಡಿಸಿಎಂ ಡಿಕೆಶಿವಕುಮಾರ್ ಮೇಲೆ ಆರೋಪ ಹೆಚ್ಚಾದರೆ ಸಿದ್ದರಾಮಯ್ಯ ಮತ್ತು ಅವರ ಬಣದ ಸಚಿವರಿಗೆ ರಾಜಕೀಯ ಲಾಭ ಜಾಸ್ತಿ ಅನ್ನೋ ಲೆಕ್ಕಾಚಾರವೂ ಇದೆ. ಇದನ್ನೂ ಓದಿ: ಬೀದರ್‌ ಬನ್ನಳ್ಳಿಗೆ ಹಂಪಿಯ ಪುರಾತತ್ವ ಸರ್ವೇಕ್ಷಣಾಧಿಕಾರಿ, ಶಾಸಕ ಬೆಲ್ದಾಳೆ ಭೇಟಿ

ತಮ್ಮ ಇಲಾಖೆ ಬಿಟ್ಟು ಬೇರೆಯವರ ಇಲಾಖೆಗೂ ಡಿಕೆಶಿವಕುಮಾರ್ ಕೈ ಹಾಕ್ತಾರೆ ಅನ್ನೋ ಆರೋಪ ಇದೆ. ಹೀಗಾಗಿ ಇಂತಹ ಸಚಿವರು ಡಿಕೆ ಪರ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಗುತ್ತಿಗೆದಾರರು ಕಮೀಷನ್ ಬಗ್ಗೆ ಆರೋಪ ಮಾಡ್ತಿದ್ದಾರೆ. ಈಗ ನಾವು ಡಿಕೆಶಿವಕುಮಾರ್ ಅವರನ್ನ ಸಮರ್ಥನೆ ಮಾಡಿಕೊಂಡರೆ ನಮ್ಮ ಬಗ್ಗೆ ತಪ್ಪು ಸಂದೇಶ ಹೋಗಬಹುದು ಅಂತ ಕೆಲ ಸಚಿವರಿಂದ ಮೌನವಹಿಸಿದ್ದಾರೆ.

ಬಿಜೆಪಿ (BJP) ಮೇಲೆ 40% ಆರೋಪ ನಾವೇ ಮಾಡಿದ್ವಿ. ಈಗ ನಮ್ಮ ಸರ್ಕಾರದ ಮೇಲೆ 15% ಕಮೀಷನ್ ಆರೋಪ (Commission Allegation) ಬಂದಿರೋದು ಮುಜುಗರದ ಸಂಗತಿ. ಅದನ್ನ ಡಿಫೆಂಡ್ ಮಾಡಿಕೊಳ್ಳೋದು ಎಷ್ಟು ಸರಿ ಅನ್ನೋದು ಕೆಲ ಸಚಿವರ ವಾದವಾಗಿದೆ. ಈ ಎಲ್ಲಾ ಕಾರಣಗಳಿಂದ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್