ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ

Public TV
1 Min Read

ಬೆಂಗಳೂರು: ಕೆ.ಆರ್ ಪುರದಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ವಿಸ್ತರಿತ ಮೇಲ್ಸೆತುವೆಯನ್ನು (Hebbal Flyover) ಸೋಮವಾರ (ಇಂದು) ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಉದ್ಘಾಟಿಸಿದರು.

700 ಮೀ. ಉದ್ದದ ಕೆ.ಆರ್ ಪುರನಿಂದ ಮೇಖ್ರಿ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಆರಂಭ ಸ್ಥಳದಲ್ಲಿ ಡಿಕೆಶಿ ಉದ್ಘಾಟಸಿದರು. ಫ್ಲೈಓವರ್ ಅಂತ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿಸದ್ದಾರೆ. ಬಳಿಕ ಹೊಸ ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ರೈಡ್ ಮಾಡಿ ಖುಷಿಪಟ್ಟರು. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

ಇತ್ತೀಚೆಗೆ ಡಿಸಿಎಂ ಬೈಕ್ ಓಡಿಸಿ ಫ್ಲೈಓವರ್ ವೀಕ್ಷಣೆ ಮಾಡಿದ್ದರು, ಈ ವೇಳೆ ದಂಡ ಬಾಕಿಯಿರುವ ಬೈಕ್ ಓಡಿಸಿರೋದಾಗಿ ಬಿಜೆಪಿ ಕಾಲೆಳೆದಿತ್ತು. ಹಾಗಾಗಿ ಕಳೆದ ಬಾರಿಯ ಎಡವಟ್ಟು ಮರು ಕಳಿಸದಂತೆ ಎಚ್ಚರವಹಿಸಿ, ತನ್ನ ಪ್ರೀತಿಯ Yezdi ಬೈಕ್ ತರಿಸಿಕೊಂಡು, ಹೊಸ ಹೆಲ್ಮಟ್ ಖರೀದಿ ಮಾಡಿ ಬೈಕ್ ಓಡಿಸಿದರು. ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

ನಂತರ ಮಾತನಾಡಿ, ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಈ ಫ್ಲೈಓವರ್ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ಪ್ಲಾನ್ ಆಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ನಾನು ಬಂದ ಮೇಲೆ ಹಣ ಕೊಟ್ಟು, ಅನುಮತಿ ನೀಡಿದೆ. 80 ಕೋಟಿ ರೂ. ವೆಚ್ಚದಲ್ಲಿ ಈ ಫ್ಲೈಓವರ್ ಮಾಡಲಾಗಿದೆ. ಇನ್ನೊಂದು ಜಂಕ್ಷನ್ ರೋಡ್ ಮಾಡಲಾಗುತ್ತದೆ. 6 ಲೇನ್ ನವೆಂಬರ್ ಒಳಗೆ ಆಗುತ್ತದೆ. 3 ತಿಂಗಳಲ್ಲಿ ಇನ್ನೊಂದು ಲೂಪ್ ಬರಲಿದೆ. ಎಸ್ಟಿಮ್ ಮಾಲ್‌ನಿಂದ ಒಂದೂವರೆ ಕಿ.ಮೀ ತನಕ ಟನಲ್ ಮಾಡಲಾಗುತ್ತದೆ. ಎಮೆರ್ಜೆನ್ಸಿಗೆ ಇದರ ಬಳಕೆಯಾಗುತ್ತದೆ. ಏರ್ಪೋರ್ಟ್ನಿಂದ ಬರುವವರಿಗೆ ಅನುಕೂಲವಾಗಲಿದೆ. ಟನಲ್ ಯೋಜನೆಗೆ ಹೊಸ ಟೆಂಡರ್ ಸದ್ಯದಲ್ಲಿಯೇ ಶುರುವಾಗುತ್ತದೆ ಹೇಳಿದ್ದಾರೆ.

ಉದ್ಘಾಟನೆ ವೇಳೆ ಸಚಿವ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಬಿ.ಡಿ.ಎ ಅಧ್ಯಕ್ಷ, ಶಾಸಕ ಎನ್ ಎ ಹ್ಯಾರಿಸ್, ಮಾಜಿ ಸಂಸದೆ, ನಟಿ ರಮ್ಯಾ, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಬಿ.ಡಿ.ಎ. ಕಮಿಷನರ್ ಮಣಿವಣ್ಣನ್, ಬಿಬಿಎಂಪಿ ಮುಖ್ಯ ಆಯುಕ್ತ ಡಾ ಮಹೇಶ್ವರರಾವ್, ಡಿಸಿಎಂ ಕಾರ್ಯದರ್ಶಿ ರಾಜೇಂದ್ರ ಚೋಳನ್ ಮತ್ತಿತರರು ಉಪಸ್ಥಿತರಿದ್ದರು.

Share This Article