ಲಾಲ್‌ಬಾಗ್‌ನಲ್ಲಿ ಡಿಕೆಶಿಯಿಂದ `ಬೆಂಗಳೂರ ನಡಿಗೆ’ – ಬೆಂಗಳೂರಿಗರ ಸಮಸ್ಯೆ ಆಲಿಸಿದ ಡಿಸಿಎಂ

Public TV
3 Min Read

– ಲಾಲ್‌ಬಾಗ್ ಅಭಿವೃದ್ಧಿಗಾಗಿ 10 ಕೋಟಿ ರೂ. ಘೋಷಣೆ

ಬೆಂಗಳೂರು: ಇಂದಿನಿಂದ ಡಿಸಿಎಂ ʼಬೆಂಗಳೂರ ನಡಿಗೆʼ (Bengalura Nadige) ಆರಂಭಿಸಿದ್ದಾರೆ. ಮುಂದಿನ 6 ದಿನಗಳವರೆಗೆ 6 ಪಾರ್ಕ್‌ಗಳಲ್ಲಿ ನಡಿಗೆ ಮುಂದುವರಿಸಿ ಜನಾಭಿಪ್ರಾಯವನ್ನು ಆಲಿಸಲಿದ್ದಾರೆ. ಇಂದು ಲಾಲ್‌ಬಾಗ್‌ನಲ್ಲಿ ಸುಮಾರು 3 ಗಂಟೆ ಜನರ ಪ್ರಶ್ನೆ ಹಾಗೂ ಸಲಹೆಗಳಿಗೆ ಡಿಸಿಎಂ ಡಿಕೆಶಿ (DK Shivakumar) ಉತ್ತರಿಸಿದರು.

ಬೆಂಗಳೂರಿನಲ್ಲಿ (Bengaluru) ತಡರಾತ್ರಿ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಈ ಮಧ್ಯೆ ಲಾಲ್‌ಬಾಗ್‌ನಲ್ಲಿ (Lalbagh) ಬೆಂಗಳೂರು ನಾಗರಿಕರ ಸಮಸ್ಯೆ ಆಲಿಸಲು, ಸ್ಪಂದಿಸಲು ಡಿಸಿಎಂ ಡಿಕೆಶಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲಾಲ್‌ಬಾಗ್ ಪಾರ್ಕ್‌ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮ ಆರಂಭಿಸಿದ ಡಿಕೆಶಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಜಿಬಿಎ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಜಿಬಿಎ ಕೇಂದ್ರ ಪಾಲಿಕೆ ಆಯುಕ್ತ ಚೋಳನ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು. ಇದನ್ನೂ ಓದಿ: ಮಂಗಳೂರು| ನಿಷೇಧಿತ PFI ಸಂಘಟನೆ ಆಕ್ಟೀವ್ ಮಾಡಿದ್ದ ಧರ್ಮಗುರು ಅರೆಸ್ಟ್

ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆಶಿಗೆ ಜನರು ಹಲವು ಪ್ರಶ್ನೆಗಳನ್ನು ಕೇಳಿದರು. ಜಿಬಿಎ ಬಳಿಕ ಜನರೊಂದಿಗೆ ಬೆರೆಯಲು, ಜನರ ಸಮಸ್ಯೆಗಳನ್ನು ಆಲಿಸಲು ಡಿಕೆಶಿ ಮುಂದಾಗಿದ್ದಾರೆ. ಇದನ್ನೂ ಓದಿ: ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

ಇನ್ನು ಲಾಲ್‌ಬಾಗ್‌ನಲ್ಲಿ ಟನಲ್ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇದರ ಬಗ್ಗೆ ಜನರು ಸಹ ಡಿಕೆಶಿಗೆ ಪ್ರಶ್ನೆ ಕೇಳಿದ್ದಾರೆ. ಸ್ಥಳೀಯ ವೆಂಕಟೇಶ್ ಎಂಬುವರು ಲಾಲ್‌ಬಾಗ್ ಬಳಿ ಟನಲ್ ಬರುತ್ತಿದೆಯಲ್ಲವೇ ನಿಜವೇ ಉತ್ತರಿಸಿ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಡಿಕೆಶಿ ಬೆಂಗಳೂರಿಗೆ ಟನಲ್ ರಸ್ತೆ ಬೇಕಾಗಿದೆ. ಟನಲ್‌ನ ಒಂದು ಭಾಗ ಲಾಲ್‌ಬಾಗ್‌ನಲ್ಲಿ ಹಾದು ಹೋಗಲಿದೆ. ಲಾಲ್‌ಬಾಗ್‌ನಲ್ಲಿ ಒಂದೇ ಒಂದು ಮರ ಕಡಿಯಲು ನನಗೆ ಇಷ್ಟವಿಲ್ಲ. ಆದರೆ ಇಲ್ಲಿ 50 ಮೀಟರ್ ಟನಲ್ ಹಾದು ಹೋಗಲಿದೆ. ಆದರೆ ಲಾಲ್‌ಬಾಗ್‌ಗೆ ಇದರಿಂದ ಯಾವುದೇ ಹಾನಿ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ‘ಕಾಂತಾರ’ಕ್ಕೆ ವಿಶೇಷ ಸ್ಥಾನ: ಸುಮಲತಾ ಬಣ್ಣನೆ

ಇನ್ನು ಬೆಂಗಳೂರು ಸಂಚಾರ ದಟ್ಟಣೆ ಬಗ್ಗೆ ಡಿಕೆಶಿಗೆ ಜನರು ಪ್ರಶ್ನೆ ಕೇಳಿದ್ದಾರೆ. ಆದಷ್ಟು ಟ್ರಾಫಿಕ್ ಜಾಮ್ ಸಮಸ್ಯೆ ಕಡಿಮೆ ಮಾಡಲು ಮನವಿ ಮಾಡಿದ್ದಾರೆ. ಟ್ರಾಫಿಕ್ ಪರಿಹಾರಕ್ಕೆ ಏರ್‌ಟ್ಯಾಕ್ಸಿ ತರುವ ಆಲೋಚನೆ ಇದ್ಯಾ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಡಿಕೆಶಿ ಬೆಂಗಳೂರಿನಲ್ಲಿ ಹೊಸದಾಗಿ ಡಬಲ್ ಡೆಕ್ಕರ್ ರಸ್ತೆ ನಿರ್ಮಾಣ ಮಾಡುತ್ತೇವೆ, 430 ಹೊಸರಸ್ತೆಗಳ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ – ಕುಟುಂಬಸ್ಥರನ್ನ ರಕ್ಷಿಸಿದ ʻಪಬ್ಲಿಕ್ ಟಿವಿʼ ತಂಡ

ಇನ್ನುಳಿದಂತೆ ಲಾಲ್‌ಬಾಗ್‌ನ ಹಲವು ಭಾಗಗಳಲ್ಲಿ ರಸ್ತೆ ಹಾಳಾಗಿದೆ. ಲಾಲ್ ಬಾಗ್ ಕೆರೆಯಲ್ಲಿ ಸಾಕಷ್ಟು ಸೂಸೈಡ್‌ಗಳಾಗಿದೆ. ಸೇಫ್ಟಿ ಗ್ರಿಲ್ ಅಳವಡಿಸುವಂತೆ ಮನವಿ ಸಲ್ಲಿಸಿದರು. ಲಾಲ್‌ಬಾಗ್‌ನಲ್ಲಿ 14 ವರ್ಷಗಳಿಂದ ಡಾಂಬರು ರಸ್ತೆ ಹಾಕಿಲ್ಲ. 40 ಎಕರೆ ಜಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ಲಾಲ್ ಬಾಗ್ ಆವರಣದಲ್ಲಿ ಅಂಬುಲೆನ್ಸ್ ವೈದ್ಯರ ನಿಯೋಜನೆಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಜನರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಲಾಲ್‌ಬಾಗ್‌ನಲ್ಲಿ ಇನ್ಮುಂದೆ ಒಂದು ಅಂಬುಲೆನ್ಸ್, ಡಾಕ್ಟರ್, ನರ್ಸ್ ನಿಯೋಜನೆಗೆ ಸೂಚಿಸಿದರು. ಜೊತೆಗೆ ಬೀದಿ ದೀಪ ಹಾಗೂ ಸೇಫ್ಟಿಗಾಗಿ ಕ್ಯಾಮೆರಾ ಅಳವಡಿಕೆ, ಲಾಲ್‌ಬಾಗ್ ಅಭಿವೃದ್ಧಿಗಾಗಿ 10 ಕೋಟಿ ರೂ. ಘೋಷಣೆ ಮಾಡಿದರು. ಇದನ್ನೂ ಓದಿ: ಡಿವೋರ್ಸ್ ಪಡೆದು ದೀರ್ಘಕಾಲದ ಬಳಿಕ ಫ್ಯಾಷನ್‌ ಬ್ಯೂಟಿಯೊಂದಿಗೆ ಪಾಂಡ್ಯ ಲವ್ವಿ ಡವ್ವಿ – ಯಾರು ಈ ಸುಂದ್ರಿ?

ಇದೇ ವೇಳೆ ಸಿಎಂ ಕುರ್ಚಿ ಕದನ ಬಗ್ಗೆ ಮಾತಾಡಿದ ಡಿಕೆಶಿ, ಮುಖ್ಯಮಂತ್ರಿ ಆಗೋಕೆ ನನಗೆ ಆತುರ ಇಲ್ಲ ಎಂದಿದ್ದಾರೆ. ಒಟ್ಟಾರೆ ಮೊದಲ ಡಿಕೆಶಿ ಬೆಂಗಳೂರು ನಡಿಗೆಗೆ ಸಾರ್ವಜನಿಕರಿಂದ ಉತ್ತಮ ರೆಸ್ಪಾನ್ಸ್ ಬಂದಿದೆ. ಇನ್ನು ನಾಳೆ ಯಶವಂತಪುರದ ಜೆಪಿ ಪಾರ್ಕಿನಲ್ಲಿ ಬೆಂಗಳೂರು ನಡಿಗೆ ನಡೆಯಲಿದೆ. ಇದನ್ನೂ ಓದಿ: ದಾವಣಗೆರೆ | ದೇಶಾದ್ಯಂತ ಹಲವರ ಖಾತೆಗಳಿಂದ 150 ಕೋಟಿ ಎಗರಿಸಿದ್ದ ಸೈಬರ್‌ ವಂಚಕ ಅರೆಸ್ಟ್‌

Share This Article