ಪ್ಲ್ಯಾನ್ ಮಂಜೂರಾತಿ ಇಲ್ಲದೆ ಮನೆ ಕಟ್ಟಿ ಕರೆಂಟ್ ಸಂಪರ್ಕ ಇಲ್ಲದವರಿಗೆ ಡಿಕೆಶಿ ಗುಡ್‌ನ್ಯೂಸ್

Public TV
1 Min Read

ಬೆಂಗಳೂರು: ಪ್ಲ್ಯಾನ್ ಮಂಜೂರಾತಿ ಇಲ್ಲದೆ ಮನೆ ಕಟ್ಟಿ ಕರೆಂಟ್ (Electricity) ಸಂಪರ್ಕ ಇಲ್ಲದೆ ಪರದಾಡುತ್ತಿರುವರಿಗೆ ರಾಜ್ಯ ಸರ್ಕಾರ ಪರ್ಯಾಯ ಮಾರ್ಗಕ್ಕೆ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಎರಡ್ಮೂರು ಆಪ್ಶನ್‌ಗಳ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಡಿಕೆಶಿ, ಪ್ಲ್ಯಾನ್ ಅನುಮತಿ ಇಲ್ಲದೆ ಕರೆಂಟ್, ನೀರು ಕೊಡಬಾರದು ಎಂಬ ಸುಪ್ರೀಂ ಆದೇಶ ಇದೆ. ಇದರಿಂದ ರಾಜ್ಯದಲ್ಲಿ ಎರಡೂವರೆ ಲಕ್ಷ ಜನಕ್ಕೆ ಕರೆಂಟ್ ಇಲ್ಲದೆ ಸಂಪರ್ಕ ಪೆಂಡಿಂಗ್ ಇದೆ. ಶೀಘ್ರ ಪರಿಹಾರ ಮಾರ್ಗ ಪ್ರಕಟಿಸುವುದಾಗಿ ಹೇಳಿದರು. ಇದನ್ನೂ ಓದಿ: ʻಕೈʼ ಸುಡುತ್ತಾ ಸ್ಕ್ಯಾಮ್ ಬೆಂಕಿ – ಸ್ಲಂ ಬೋರ್ಡ್‌ನಲ್ಲಿ ಕಾಸು ಕೊಟ್ಟವರಿಗೆ ಸೈಟ್; ಸಿಎಂಗೆ ಪಂಚಾಯಿತಿ ಅಧ್ಯಕ್ಷೆ ಪತ್ರ

ರಾಜ್ಯದ ಜನರಿಗೆ ಪ್ಲ್ಯಾನ್ ಅನುಮತಿ ಇಲ್ಲದೆ ಮನೆ ಕಟ್ಟಲು ಹೋಗಬಾರದು, ಮನವಿ ಮಾಡುತ್ತೇನೆ. ಎ ಖಾತೆ, ಬಿ ಖಾತೆ ಸಮಸ್ಯೆ ಎಲ್ಲ ಸರಿ ಮಾಡೋಣ. ಈಗಾಗಲೇ ಮೂರ್ನಾಲ್ಕು ಮೀಟಿಂಗ್ ಮಾಡಿದ್ದೀನಿ. ಮೂರ್ನಾಲ್ಕು ಆಪ್ಶನ್ ಇದೆ, ವರ್ಕೌಟ್ ಮಾಡುತ್ತಿದ್ದೇವೆ. ಕಾನೂನು ತಜ್ಞರ ಜೊತೆ ಸಭೆ ಬಳಿಕ ಸರ್ಕಾರ ನಿರ್ಧಾರ ಪ್ರಕಟ ಮಾಡಲಿದೆ ಎಂದರು. ಇದನ್ನೂ ಓದಿ: ನಿಮ್ಮ ಹೊಟ್ಟೆನೋವಿನ ಬಗ್ಗೆ ಪಕ್ಷದ ವೇದಿಕೆಯಲ್ಲಿ ಕಕ್ಕೋದು ಒಳ್ಳೆಯದು – ರವಿ ಗಣಿಗ

ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಸುಪ್ರೀಂ ಆದೇಶ ಜಾರಿ ಆಗಿಲ್ಲ. ಆದರೆ ನಮ್ಮಲ್ಲಿ ಅಧಿಕಾರಿಗಳು ಮೈಗೆ ಎಣ್ಣೆ ಹಾಕಿಕೊಂಡು ಇರುತ್ತಾರೆ, ಜಾರಿ ಮಾಡಿದ್ದಾರೆ ಏನು ಮಾಡೋಣ? ನಿಮ್ ಹತ್ತಿರ ಪರಿಹಾರ ಇದ್ದರೆ ಹೇಳಿ ಎಂದು ತಿಳಿಸಿದರು. ಇದನ್ನೂ ಓದಿ: ಬಹಿರಂಗ ಹೇಳಿಕೆ ನೀಡುವ ಶಾಸಕರೇ ಹುಷಾರ್! ಕಾಂಗ್ರೆಸ್ ಹೈಕಮಾಂಡ್ ವಾರ್ನಿಂಗ್ ಕಾಲ್?

Share This Article