ಶಿವಣ್ಣಗೆ ಎಂಪಿ ಟಿಕೆಟ್ ಆಫರ್ ಕೊಟ್ಟ ಡಿಕೆಶಿ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ (Shivaraj Kumar) ಲೋಕಸಭೆಗೆ ನಿಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಫರ್ ಕೊಟ್ಟಿದ್ದಾರೆ.

ಇಂದು ಅರಮನೆ ಮೈದಾನದಲ್ಲಿ ಈಡಿಗರ (Ediga) ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಟ ಶಿವಣ್ಣಗೆ ಈ ಆಫರ್ ನೀಡಿದ್ದಾರೆ. ಪಾರ್ಲಿಮೆಂಟಿಗೆ ರೆಡಿ ಆಗಿ ಅಂತ ನಾನು ಈಗಾಗಲೇ ಶಿವಣ್ಣಗೆ ಹೇಳಿದ್ದೇನೆ. ಆಗ ಅವರು, ಇಲ್ಲ ಒಂದು 5 ಚಿತ್ರ ಒಪ್ಪಿಕೊಂಡಿದ್ದೇನೆ ಅಂದ್ರು. ಚಿತ್ರ ಯಾವಾಗಾದ್ರೂ ಮಾಡಬಹುದು. ಆದರೆ ಪಾರ್ಲಿಮೆಂಟ್‍ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಅಂತಾ ಹೇಳಿದ್ದೇನೆ ಎಂದು ಡಿಕೆಶಿ (DK Shivakumar) ತಿಳಿಸಿದರು.

ಲೋಕಸಭೆಯಲ್ಲಿ (Loksabha) ನಮಗೆ ಆಶೀರ್ವಾದ ಮಾಡುವ ಕೆಲಸ ನೀವು ಮಾಡಬೇಕು. ಮಂಗಳೂರು, ಉಡುಪಿ, ಉತ್ತರ ಕರ್ನಾಟಕ ಎಲ್ಲೆ ಇರ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ ಎಂದರು. ಇದನ್ನೂ ಓದಿ: ಸಿಎಂ ಜೊತೆ ಹರಿಪ್ರಸಾದ್ ಜಟಾಪಟಿ – ಮಧು ಬಂಗಾರಪ್ಪ ಜೊತೆ ಮುಸುಕಿನ ಗುದ್ದಾಟ!

ನನ್ನ ರಾಜಕೀಯ ಜೀವನ ಆರಂಭವಾಗಿದ್ದು ಬಂಗಾರಪ್ಪನವರ (Bangarappa) ಜೊತೆಯಲ್ಲಿ ನಿಮ್ಮ ಉತ್ಸಾಹ ದೊಡ್ಡ ಶಕ್ತಿ ಬರುತ್ತಿದೆ. ಮಂಗಳೂರು ಹೊರತುಪಡಿಸಿ ಇಡೀ ರಾಜ್ಯದ ಈಡಿಗ ಸಮುದಾಯ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಿರಾ. ನಿಮಗೆ ಕೊಟ್ಟ ಮಾತನ್ನು ಪೂರೈಸುತ್ತೇವೆ. ಇಂದಿನ ಸಮಾವೇಶದಿಂದ ಕಾಂಗ್ರೆಸ್ ಸರ್ಕಾರ ನಿಮ್ಮ ಜೊತೆ ಇದ್ದೇವೆ ಅಂತಾ ತೋರಿಸಿದ್ದೀರಾ. ಯಾರು ನಮಗೆ ಸಹಾಯ ಮಾಡ್ತಾರೆ ಅವರಿಗೆ ಸಹಾಯ ಮಾಡೋದು ನಮ್ಮ ಸಿದ್ದಾಂತ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದರು.

ಅಭಿವೃದ್ಧಿ ನಿಗಮಕ್ಕೆ 500 ಕೋಟಿ ನೀಡೋ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಸೆಂಬ್ಲಿ ಇರೋದ್ರಿಂದ ಘೋಷಣೆ ಮಾಡೋದು ಇಲ್ಲ. ಕಾಂಗ್ರೆಸ್ (Congress) ಪಕ್ಷದ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ದೇವೆ, ಅದನ್ನು ಉಳಿಸಿಕೊಳ್ಳುತ್ತೇನೆ. ಮಧು ಬಂಗಾರಪ್ಪ ಗಾಳ ಹಾಕಿ ಕರೆತಂದಿದ್ದು , ಈಗ ಸಚಿವರಾಗಿದ್ದಾರೆ. ಲೋಕಸಭೆಗೆ ಅತೀ ಹೆಚ್ಚು ಸೀಟ್ ಗಳನ್ನು ಗೆಲ್ಲಿಸುವ ಕೆಲಸ ನೀವು ಮಾಡಬೇಕು. ಜನಾರ್ದನ ಪೂಜಾರಿಯವರನ್ನು (Janardhan Poojary) ಸೋಲಿಸಿಬಿಟ್ರಿ ಎಂದು ತಿಳಿಸಿದರು.

Share This Article