ಡಿಕೆಶಿ ಸಿಎಂ ಆಗಲೆಂದು ಕೋಲಾರಮ್ಮನಿಗೆ ಈಡುಗಾಯಿ ಸೇವೆ

Public TV
1 Min Read

-101 ತೆಂಗಿನಕಾಯಿ ಹೊಡೆದು ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರಾರ್ಥನೆ

ಕೋಲಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರನ್ನ ಸಿಎಂ ಮಾಡುವಂತೆ ಒತ್ತಾಯಿಸಿ ಕೋಲಾರದಲ್ಲಿ ಡಿಕೆಶಿ ಅಭಿಮಾನಿಗಳು (DK Shivakumar Fans) ವಿಶೇಷ ಪೂಜೆ ಸಲ್ಲಿಸಿದರು.

ಕೋಲಾರದ ಶಕ್ತಿ ದೇವತೆ ಎಂದು ಭಾವಿಸಿರುವ ಕೋಲಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಹೊಡೆದರು. ಡಿ.ಕೆ ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವಂತಾಗಲಿ ಎಂದು ತೆಂಗಿನಕಾಯಿ ಸೇವೆ ಮಾಡಿದರು. ಅನೇಕ ಕಷ್ಟಗಳನ್ನು ಅನುಭವಿಸಿ ರಾಜ್ಯದಲ್ಲಿ ಕಾಂಗ್ರೆಸ್ (Congress) ಪಕ್ಷವನ್ನು ಡಿಕೆಶಿ ಅಧಿಕಾರಕ್ಕೆ ತಂದಿರುವುದರಿಂದ ಈ ಬಾರಿ ಡಿಕೆಶಿ ಅವರಿಗೇ ಸಿಎಂ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಗೂಂಡಾ ರಾಜ್ಯ ಆಗಿ ಬದಲಾವಣೆ: ಕಟೀಲ್ ಕಿಡಿ

ಸಿದ್ದರಾಮಯ್ಯನವರು ಸಹ ಸಾಕಷ್ಟು ಶ್ರಮ ವಹಿಸಿದ್ದಾರೆ. ಆದ್ರೆ ಈ ಹಿಂದೆ ಸಿಎಂ ಆಗಿದ್ದವರು ಅವರು ಡಿಕೆಶಿ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಮನವಿ ಮಡಿದರು. ಇದೆ ವೇಳೆ ಕಾಂಗ್ರೆಸ್‌ ಮುಖಂಡರೂ ಭಾಗಿಯಾಗಿ ಈಡುಗಾಯಿ ಸೇವೆ ಮಾಡಿದರು. ದೇವನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ಕಾಂಗ್ರೆಸ್‌ ನಾಯಕ ಕೆ.ಎಚ್ ಮುನಿಯಪ್ಪಗೆ ಡಿಸಿಎಂ ನೀಡುವಂತೆಯೂ ಮನವಿ ಮಾಡಿದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ನೀಡಿ – 108 ಮಠಗಳ ಒಕ್ಕೂಟದಿಂದ ಖರ್ಗೆಗೆ ಪತ್ರ

Share This Article