ಮಂಡ್ಯ ಜನರ ಎದುರು ಮತ್ತೆ ಸಿಎಂ ಆಗುವ ಮಹಾದಾಸೆ ವ್ಯಕ್ತಪಡಿಸಿದ ಡಿಕೆಶಿ

Public TV
1 Min Read

ಮಂಡ್ಯ : ನಿಮ್ಮ ಮನೆಯ ಮಗನಿಗೆ ಶಕ್ತಿ ಕೊಡಿ ಎನ್ನುವ ಮೂಲಕ ತಾವು ಸಿಎಂ ಆಗಬೇಕೆಂಬ ಆಸೆಯನ್ನು ಬಿಚ್ಚಿಟ್ಟು ಒಕ್ಕಲಿಗ ಪ್ಲೇ ಕಾರ್ಡ್ ಬಳಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ತಮ್ಮ ಮಹಾದಾಸೆಯನ್ನು ವ್ಯಕ್ತಪಡಿಸಿದರು.

ಮಂಡ್ಯ (Mandya) ಜಿಲ್ಲೆಗೆ ಬಂದಾಗಲೆಲ್ಲಾ ಪದೇ ಪದೇ ಡಿಕೆಶಿ ತಮ್ಮ ಮಹಾದಾಸೆ ಬಿಚ್ಚಿಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಪ್ರಜಾಧ್ವನಿ ಯಾತ್ರೆಗಳ ವೇಳೆ‌ ಹಾಗೂ ಇತರೆ ಪಕ್ಷದ ಕಾರ್ಯಕ್ರಮದಲ್ಲಿ ತಮ್ಮ ಇಂಗಿತವನ್ನು ಹೊರಹಾಕಿದ್ದಾರೆ. ದೇವೇಗೌಡರನ್ನು ಪ್ರಧಾನಿ ಮಾಡಿ ಆಯ್ತು, ಕುಮಾರಸ್ವಾಮಿ ಅವರನ್ನ ಎರಡು ಬಾರಿ ಸಿಎಂ ಮಾಡಿಯೂ ಆಗಿದೆ. ನಾನು ನಿಮ್ಮ ಮನೆ ಮಗ, ನಾನು ಈ ಮಣ್ಣಿನ ಮಗನಿದ್ದೇನೆ, ನಿಮ್ಮ ಸಮಾಜದ ಮಗನಾಗಿದ್ದೇನೆ. ನನಗೆ ಒಂದು ಅವಕಾಶ ಮಾಡಿಕೊಡಿ, ನಿಮ್ಮ ಮನೆ ಮಗನ ಕೈ ಬಲಪಡಿಸಿ ಎನ್ನುವ ಮೂಲಕ ಡಿಕೆಶಿ ತಮ್ಮ ಸಿಎಂ ಮಹಾದಾಸೆಯನ್ನು ಮಂಡ್ಯ ಜನರ ಮುಂದೆ ಹೇಳಿದರು. ಇದನ್ನೂ ಓದಿ: ಮೊಬೈಲ್‌ನಲ್ಲಿ ಮಾತಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು

ಒಕ್ಕಲಿಗರ‌ ಕೋಟೆ ಹಾಗೂ ಜೆಡಿಎಸ್ (JDS) ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಸಿಎಂ ಮಹಾದಾಸೆಯನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಒಕ್ಕಲಿಗ ಸಮುದಾಯವನ್ನು ಸೆಳೆದು ಸಿಎಂ ಆಗುವ ತವಕದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪದೇ ಪದೇ ಒಕ್ಕಲಿಗರ ಓಲೈಕೆ ಹಿಂದೆ ಡಿಕೆಶಿಗೆ ಸಿಎಂ ಪಟ್ಟಕ್ಕೇರುವಾಸೆ ಇದೆ ಎನ್ನುವುದು ದಟ್ಟವಾಗುತ್ತಿದೆ. ಇದನ್ನೂ ಓದಿ: ಮಂಡ್ಯ ಬಿಜೆಪಿಗೆ ಸುಮಲತಾ ಬೂಸ್ಟರ್- ಹಾಡಿಹೊಗಳಿದ ಬಿ.ಎಲ್ ಸಂತೋಷ್

Share This Article
Leave a Comment

Leave a Reply

Your email address will not be published. Required fields are marked *