ಎಲ್ಲರ ಕಮೆಂಟ್‍ಗಳಿಗೆ ಮುಂದೆ ಉತ್ತರಿಸುತ್ತೇನೆ: ಡಿಕೆಶಿ

Public TV
1 Min Read

ಬೆಂಗಳೂರು: ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ವೈಯಕ್ತಿಕವಾಗಿ ಮತ್ತು ಬೆಂಬಲಿಗರ ಪರವಾಗಿ ಡಿಕೆ ಶಿವಕುಮಾರ್ ಶುಭಾಶಯ ತಿಳಿಸಿದರು. ಪಕ್ಷಾತೀತವಾಗಿ ಎಲ್ಲರೂ ಬಂದು ಮಾತನಾಡಿಸಿದ್ದಾರೆ. ಇಂದು ಬೆಳಗ್ಗೆ ಪಕ್ಷದ ಮುಖಂಡರು ಭೇಟಿಯಾಗಿ ನನಗೆ ಧೈರ್ಯವನ್ನು ತುಂಬುವ ಪ್ರಯತ್ನ ಮಾಡಿದ್ದಕ್ಕೆ ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು.

ಅನರ್ಹ ಶಾಸಕರ ಅರ್ಜಿ ನ್ಯಾಯಾಲಯದಲ್ಲಿದೆ. ಹಾಗಾಗಿ ಹೆಚ್ಚು ಮಾತನಾಡಲ್ಲ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಬಳಿಕ ನೇರವಾಗಿ ಮನೆಗೆ ಆಗಮಿಸಿ ಕುಟುಂಬಸ್ಥರನ್ನು ಭೇಟಿಯಾದೆ. ಉಪ ಚುನಾವಣೆ ಬಗ್ಗೆ ಪಕ್ಷದ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ರಾಜಕೀಯವಾಗಿ ಹೆಚ್ಚು ಮಾತನಾಡಿಲ್ಲ ಎಂದು ತಿಳಿಸಿದರು.

ನಾನು ಜೈಲಿಗೆ ಹೋದ ನಂತರ ಯಾರು ಏನು ಹೇಳಿದ್ರು ಎಂಬುದರ ಬಗ್ಗೆ ಗೊತ್ತಿಲ್ಲ. ಪೇಪರ್ ಕಟ್ಟಿಂಗ್ ಸಂಗ್ರಹ ಮಾಡಿ ನೋಡುತ್ತೇನೆ. ಹಾಗೆಯೇ ಮಾಧ್ಯಮಗಳಲ್ಲಿ ಯಾವ ರೀತಿಯ ಸುದ್ದಿಗಳು ಬಿತ್ತರವಾಗಿದೆ ಎಂಬುದನ್ನು ನೋಡಬೇಕಿದೆ. ಎಲ್ಲವನ್ನು ಪರಿಶೀಲಿಸಿದ ಬಳಿಕ ಎಲ್ಲರ ಕಮೆಂಟ್ ಗಳಿಗೆ ಉತ್ತರಿಸುತ್ತೇನೆ ಎಂದರು.

ಗೌರಿ ಹಬ್ಬದ ದಿನ ನಮ್ಮ ಪೂರ್ವಕರಿಗೆ ಗೌರವ ಸಲ್ಲಿಸೋದು ನಮ್ಮ ಸಂಪ್ರದಾಯ. ಆದರೆ ಪೂಜೆ ಸಲ್ಲಿಸುವ ಭಾಗ್ಯ ನನಗೆ ಸಿಗಲಿಲ್ಲ. ನಾಳೆ (ಸೋಮವಾರ) ಅಮವಾಸ್ಯೆ ಬಂದಿದ್ದರಿಂದ ದೊಡ್ಡ ಆಲದಹಳ್ಳಿಗೆ ನಾನು ಮತ್ತು ತಮ್ಮ ತೆರಳಿ ಪೂಜೆ ಸಲ್ಲಿಸುತ್ತೇನೆ. ಸುದ್ದಿಗೋಷ್ಠಿ ಬಳಿಕ ನೊಣವಿನಕೆರೆಗೆ ತೆರಳಲಿದ್ದೇನೆ. ಬಿಪಿ ನಿಯಂತ್ರಣಕ್ಕೆ ಬಂದಿಲ್ಲ. ಸ್ಪಲ್ಪ ಬೆನ್ನು ನೋವು ಸಹ ಕಾಣುತ್ತಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *