ಅಭಿಮಾನಿಗಳಿಗೆ ಸೂಪರ್ ಚಾಲೆಂಜ್ ಕೊಟ್ರು ದಿವ್ಯಾ ಉರುಡುಗ- ಅರವಿಂದ್ ಜೋಡಿ

Public TV
1 Min Read

ಬಿಗ್ ಬಾಸ್ ಮನೆಯಲ್ಲಿ (Bigg Boss House) ಪ್ರೇಮ ಪಕ್ಷಿಗಳಾಗಿ (Love Birds) ದಿವ್ಯಾ ಉರುಡುಗ, ಅರವಿಂದ್ ಹೈಲೈಟ್ ಆಗಿದ್ದರು. ಇದೀಗ `ಅರ್ದಂ ಬರ್ಧ ಪ್ರೇಮ ಕಥೆ’ (Ardhamardhapremakathe) ಸಿನಿಮಾದ ಮೂಲಕ ಜೋಡಿಯಾಗಿ ಬರುತ್ತಿದ್ದಾರೆ. ಇದೀಗ ಈ ಚಿತ್ರದ `ಜಿಂಗಲಕಾ ಲಕಾ ಲಕಾ’ ಹಾಡು ಜನಪ್ರಿಯತೆ ಪಡೆದುಕೊಂಡಿದೆ. ಹಾಗಾಗಿ ಈ ಸಾಂಗನ್ನ ರೀಲ್ಸ್ ಮಾಡುವ ಚಾಲೆಂಜ್ ಅನ್ನ ದಿವ್ಯಾ, ಅರವಿಂದ್ ಜೋಡಿ ಅಭಿಮಾನಿಗಳಿಗೆ ನೀಡಿದ್ದಾರೆ.

ದಿವ್ಯಾ (Divya Uruduga) ಮತ್ತು ಅರವಿಂದ್ ಕೆ.ಪಿ (Aravind Kp) ಮೊದಲು ಭೇಟಿಯಾಗಿದ್ದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ, ಈ ಪರಿಚಯವೇ ಪ್ರೀತಿಗೆ ತಿರುಗಿದೆ. `ಅರ್ದಂ ಬರ್ಧ ಪ್ರೇಮ ಕಥೆ’ ಚಿತ್ರದ ಮೂಲಕ ಚೆಂದದ ಲವ್ ಸ್ಟೋರಿಯನ್ನ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಇಬ್ಬರೂ ಜೋಡಿಯಾಗಿ ತೆರೆಯ ಮೇಲೆ ರಂಜಿಸಲು ಬರುತ್ತಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ರು ವಿಜಯ್ ದೇವರಕೊಂಡ

ಇದೀಗ `ಜಿಂಗಲಕಾ ಜಿಂಗಲಕಾ’ ಸಾಂಗ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಹಾಗಾಗಿ ದಿವ್ಯಾ ಮತ್ತು ಅರವಿಂದ್ ಜೋಡಿ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಬಳಿಕ ಫ್ಯಾನ್ಸ್‌ಗೆ ಕೂಡ ಈ ಹಾಡನ್ನ ರೀಲ್ಸ್‌ ಮಾಡಿ, ಟ್ಯಾಗ್ ಮಾಡಿ ಎಂದು ಚಾಲೆಂಜ್ ಮಾಡಿದ್ದಾರೆ. ಈಗಾಗಲೇ ಅವರು ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.

 

View this post on Instagram

 

A post shared by DU✨ (@divya_uruduga)

ಇನ್ನೂ ದಿವ್ಯಾ ಮತ್ತು ಅರವಿಂದ್ ಅವರ ಪ್ರೇಮಕಥೆ ಸೀಕ್ರೆಟ್ ಆಗಿ ಉಳಿದಿಲ್ಲ. ಸಿನಿಮಾ ರಿಲೀಸ್ ಬಳಿಕ ಈ ವರ್ಷವೇ ಈ ಜೋಡಿ ಹಸೆಮಣೆ ಏರಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *