ವಿಚ್ಛೇದಿತೆಗೆ ಬಾಳು ಕೊಡುವ ನೆಪದಲ್ಲಿ ಮಗು ಕೊಟ್ಟ – 36 ಲಕ್ಷ ಪಡೆದು ಎಸ್ಕೇಪ್‌ ಆದ ಮೋಹನ!

2 Min Read

– ಮೋಹನನ ಮೋಸದ ಜಾಲದಲ್ಲಿ ಕಂಗಾಲಾದ ಮಹಿಳೆ

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನ (Divorced woman) ಬಣ್ಣದ ಮಾತುಗಳಿಂದ ಯಾಮಾರಿಸಿ ಬಾಳು ಕೋಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ (Banashankari Police Station) ಎಫ್‌ಐಆರ್‌ ದಾಖಲಾಗಿದೆ.

ಹೌದು.. ಮೋಹನ್‌ ರಾಜ್‌ (Mohan Raj) ಎಂಬಾತ ಮಹಿಳೆಗೆ ಬಾಳು ಕೊಡೋದಾಗಿ ಮದ್ವೆ ಆಗಿದ್ದ. ಮಗು ಕೂಡ ಆಗಿತ್ತು. ಆ ಬಳಿಕ ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ ಅಂತಿದ್ದ ಮೋಹನ ಮಹಿಳೆಯಿಂದ ಹಣ ಪೀಕಿದ್ದ. ಚಿನ್ನಾಭರಣ ಸೇರಿ 36 ಲಕ್ಷ ಹಣ ಪಡೆದು ಎಸ್ಕೇಪ್‌ ಆಗಿದ್ದಾನೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ. ಇದನ್ನೂ ಓದಿ: 200 ರೂ. ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ; ಪತ್ನಿ ಆತ್ಮಹತ್ಯೆ

ಏನಿದು ಕೇಸ್‌?
ಮೋಹನ್ ರಾಜ್​ ಹಾಗೂ ಮಹಿಳೆ ಒಂದೇ ಏರಿಯಾದವರು. ಬನಶಂಕರಿಯಲ್ಲಿ ನೆಲೆಸಿದ್ದ ಮೋಹನ್​ಗೆ ಮಹಿಳೆ ಡಿವೋರ್ಸ್ ಕಥೆ ಗೊತ್ತಾಗಿದೆ. ಆಕೆಗೆ ಹಲವು ವರ್ಷಗಳಿಂದ ಪರಿಚಿತನಾಗಿದ್ದ ಈತ, ಇಬ್ಬರು ಮದುವೆಯಾಗೋಣ ಹೊಸ ಜೀವನ ನಡೆಸೋಣ ಅಂತ ಮಾತು ಕೊಟ್ಟು ತಾಳಿಕಟ್ಟಿದ್ದಾನೆ. ಬಳಿಕ ತನ್ನ ವರಸೆಯನ್ನೇ ಬದಲಿಸಿದ್ದಾನೆ. ಹೀಗಾಗಿ ಮಹಿಳೆ ಕಂಗಾಲಾಗಿದ್ದಾಳೆ.

ಮೋಹನ್‌ ರಾಜ್‌ ಮತ್ತು ಮಹಿಳೆ 10 ವರ್ಷಗಳಿಂದ ಪರಿಚಿತರು. 2022 ರಲ್ಲಿ ಮಹಿಳೆ ಜೊತೆಗೆ ಮೋಹನ್ ರಾಜ್ ವಿವಾಹ ನಡೆದಿದ್ದು. 2023 ರಲ್ಲಿ ದಂಪತಿಗೆ ಒಂದು ಹೆಣ್ಣು ಮಗು ಕೂಡ ಆಗಿತ್ತು. ಬಳಿಕ 2025 ರಲ್ಲಿ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದಾನೆ. ಈ ಪ್ರಕರಣ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನ್ಯಾಯಕ್ಕಾಗಿ ಅಲೆದಾಡಿದರರೂ ಪೊಲೀಸರಿಂದ ನಿರ್ಲಕ್ಷ್ಯ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ದರ್ಶನ್‌ ಪತ್ನಿ ವಿರುದ್ಧ ಅಶ್ಲೀಲ ಕಾಮೆಂಟ್‌ ಕೇಸ್‌ – 6 ಮಂದಿ ವಿರುದ್ಧ ಚಾರ್ಜ್‌ಶೀಟ್‌

ಮನೆ ಕಟ್ಟೋಣ ಅಂತ ಹಣ ಕಿತ್ಕೊಂಡು ಮನೆ ಬಿಟ್ಟೋದ
ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ ಅಂದಿದ್ದ ಮೋಹನ, ಆಕೆಯಿಂದ ಚಿನ್ನಾಭರಣ ಸೇರಿ 36 ಲಕ್ಷದಷ್ಟು ಹಣ ಪಡೆದಿದ್ದಾನೆ. 2025ರಿಂದ ನಾಪತ್ತೆಯಾಗಿದ್ದಾನೆ. ಬೇರೆ ಬೇರೆ ಯುವತಿಯರ ಜೊತೆಗೂ ಸಂಬಂಧ ಹೊಂದಿದ್ದ ಮೋಹನ್‌ ರಾಜ್‌ ಯುವತಿಯರಿಗೆ ಅಸಭ್ಯ ಸಂದೇಶ ಕಳಿಸುತ್ತಿದ್ದ ಅಂತಲೂ ಮಹಿಳೆ ಆರೋಪ ಮಾಡಿದ್ದಾರೆ.

ಈ ಬಗ್ಗೆ ನಾಲ್ಕು ಬಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ರೂ ನ್ಯಾಯ ಸಿಕ್ಕಿಲ್ಲ. ಒತ್ತಾಯ ಮಾಡಿದ್ರೆ ನಿನ್ನನ್ನೇ ಒಳಗೆ ಹಾಕ್ತೀವಿ ಅಂತ ಪೊಲೀಸ್‌ನವರು ಹೆದರಿಸ್ತಿದ್ದಾರೆ ಅಂತ ಮಹಿಳೆ ಅಲವತ್ತುಕೊಂಡಿದ್ದಾರೆ.

Share This Article