ವಿಚ್ಛೇದನ ಜೀವನಾಂಶ ಹಣ ಹೊಂದಿಸಲಾಗಿಲ್ಲ ಅಂತ ಪತಿ ಆತ್ಮಹತ್ಯೆ

Public TV
1 Min Read

ಚಿಕ್ಕಬಳ್ಳಾಪುರ: ವಿಚ್ಛೇದನದ ನಂತರ ಪತ್ನಿಗೆ ಜೀವನಾಂಶದ ಹಣ ನೀಡಲಾಗದೇ ಜೈಲಿಗೆ ಹೋಗುವ ಭಯದಿಂದ ಪತಿಯೊರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.  ಇದನ್ನೂ ಓದಿ: ಸೊಸೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಲವಂತವಾಗಿ ಕೋಳಿ ರಕ್ತ ಕುಡಿಸಿದ ಮಾವ!

ದೊಡ್ಡಬಳ್ಳಾಪುರ ನಗರದ ಪ್ರಿಯದರ್ಶಿನಿ ಬಡವಾಣೆಯ ಅಮೀರ್(30) ಮೃತ ವ್ಯಕ್ತಿ. ಮೃತ ಅಮೀರ್ ಶಿಡ್ಲಘಟ್ಟ ಮೂಲದ ನೂರ್ ಜಾನ್ ಜೊತೆ ವಿವಾಹವಾಗಿದ್ದು, ಕೌಟುಂಬಿಕ ಕಲಹದ ಹಿನ್ನಲೆ ನ್ಯಾಯಾಲಯದ ಮೆಟ್ಟಿಲೇರಿ ವಿಚ್ಛೇದನ ಪಡೆದಿದ್ದರು. ಪತ್ನಿಗೆ 1 ಲಕ್ಷ ಜೀವನಾಂಶ ಹಣ ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿದೆ. ಆದರೆ ಅಮೀರ್  ಗೆ 1 ಲಕ್ಷ ಹಣ ಹೊಂದಿಸಲಾಗಲಿಲ್ಲ.

ಇದರಿಂದ ಜೀವನಾಂಶದ ಹಣ ಕೊಡದಿದ್ದರೆ ಜೈಲಿಗೆ ಹೋಗುವ ಭೀತಿ ಕಾಡಿದ್ದು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಮೀರ್‌‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅಮೀರ್ ಸಾವನ್ನಪ್ಪಿದ್ದಾನೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಪೆಗಾಸಸ್ ಮೂಲಕ ಗೂಢಚರ್ಯೆ ಪ್ರಕರಣ – ತನಿಖೆಗೆ ತಜ್ಞರ ಸಮಿತಿ ರಚಿಸಲಿರುವ ಸುಪ್ರೀಂ

Share This Article
Leave a Comment

Leave a Reply

Your email address will not be published. Required fields are marked *