ಪತಿಗೆ ಡಿವೋರ್ಸ್ ಕೊಟ್ಟು ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲಿದ್ದಾಳಂತೆ ಅಂಜು!

Public TV
2 Min Read

ನವದೆಹಲಿ: ಮಕ್ಕಳನ್ನು ನೋಡಬೇಕು ಎಂದು ಹೇಳಿ ಈಗಾಗಲೇ ಪಾಕಿಸ್ತಾನದಿಂದ (Pakistan) ಭಾರತಕ್ಕೆ ಬಂದಿರುವ ಅಂಜು ಇದೀಗ ಮತ್ತೆ ಪಾಕಿಸ್ತಾನಕ್ಕೆ ಹೋಗುವ ಪ್ಲಾನ್ ಮಾಡಿಕೊಂಡಿದ್ದಾಳೆ.

ಹೌದು. ಪತಿಗೆ ಡಿವೋರ್ಸ್ ಕೊಟ್ಟು, ಮಕ್ಕಳೊಂದಿಗೆ ಮತ್ತೆ ಪಾಕಿಸ್ತಾನಕ್ಕೆ ತೆರಳಿ ಫೇಸ್‍ಬುಕ್ (Facebook) ಗೆಳೆಯನ ಜೊತೆ ಜೀವನ ಮಾಡುವ ಯೋಜನೆಯನ್ನು ಹಾಕಿಕೊಂಡಿರುವುದಾಗಿ ವರದಿಯಾಗಿದೆ.

ಭಾರತಕ್ಕೆ (India) ಹಿಂದಿರುಗಿದ ಬಳಿಕ ತನ್ನ ವಿಚಾರಣೆಯ ವೇಳೆ ಅಂಜು, ಭಾರತದಲ್ಲಿ ತನ್ನ ಯೋಜನೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದಳು. ಅಲ್ಲದೆ ತಾನು ಮತ್ತೆ ಪಾಕಿಸ್ತಾನಕ್ಕೆ ಹಿಂದಿರುಗುವುದಾಗಿ ಹೇಳಿದಳು. ಭಾರತದಲ್ಲಿರುವ ತನ್ನ ಪತಿ ಅರವಿಂದ್‍ಗೆ ವಿಚ್ಛೇದನ ನೀಡಿದ ನಂತರ ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುತ್ತೇನೆ. ತಾನು ಈ ವರ್ಷ ಜುಲೈ 27 ರಂದು ಪಾಕಿಸ್ತಾನಕ್ಕೆ ಹೋಗಿದ್ದೆ. ತಾನು ಇಸ್ಲಾಂಗೆ ಮತಾಂತರಗೊಂಡು ನುಸ್ರುಲ್ಲಾನನ್ನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.

ಇತ್ತ ಅಂಜು ಭಾರತಕ್ಕೆ ವಾಪಸ್ ಆಗಿರುವುದು ಹಾಗೂ ವಿಚ್ಛೇದನದ ಕುರಿತು ಕೇಳಿದಾಗ, ಈ ಬಗ್ಗೆ ತನಗೆ ತಿಳಿದಿಲ್ಲ. ಅವಳೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೆಳೆಯನನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದ ಅಂಜು ತವರಿಗೆ ವಾಪಸ್

ಹಿಂದಿರುಗುತ್ತಿದ್ದ ಅಂಜು ದೆಹಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಮಾತನಾಡಿಸಲು ತೆರಳಿದರು. ಈ ವೇಳೆ ಆಕೆ, ತನ್ನ ತಾಯ್ನಾಡಿಗೆ ಆಗಮನದ ಬಗ್ಗೆ ಮಾತನಾಡಲು ನಿರಾಕರಿಸಿದಳು. ನಾನು ಈಗಲೇ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾಳೆ. ಮೂಲಗಳ ಪ್ರಕಾರ, ಆಕೆಯ ಮದುವೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಆಕೆಯ ಬಳಿ ಇರಲಿಲ್ಲ. ತನ್ನ ಗೆಳೆಯ ನಸ್ರುಲ್ಲಾ ಬಗ್ಗೆ ಮಾತನಾಡುತ್ತಾ, ಅವರು ಔಷಧಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಅಂಜು ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿದ್ದು, ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು, ಪ್ರೀತಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಯನ್ನು ಭೇಟಿಯಾಗಲು ಖೈಬರ್ ಪಖ್ತುಂಕ್ವಾಗೆ ತೆರಳಿದ್ದಳು. ಕೆಲ ದಿನ ಜೈಪುರಕ್ಕೆ ಹೋಗುವುದಾಗಿ ಆಕೆ ತನ್ನ ಮೊದಲ ಪತಿ ಅರವಿಂದ್‍ಗೆ ಹೇಳಿದ್ದಳು. ಆದರೆ ಅಂಜು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿರುವುದು ಆಕೆಯ ಪತಿಗೆ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅರವಿಂದ್, ನನ್ನ ಪತ್ನಿ ವಾಟ್ಸಪ್‍ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿದ್ದಾಳೆ. ಆಕೆ ಲಾಹೋರ್‍ಗೆ ತೆರಳಿದ ದಿನ ಸಂಜೆ 4 ಗಂಟೆ ಸುಮಾರಿಗೆ ಕರೆ ಮಾಡಿದ್ದು, ತಾನು ಲಾಹೋರ್‍ನಲ್ಲಿದ್ದೇನೆ ಮತ್ತು 2-3 ದಿನಗಳಲ್ಲಿ ಮರಳುತ್ತೇನೆಂದು ಹೇಳಿದ್ದಾಗಿ ತಿಳಿಸಿದ್ದರು. ಪಾಕಿಸ್ತಾನದಲ್ಲಿ ಅಂಜು ತನ್ನ ಗೆಳೆಯನನ್ನು ಭೇಟಿಯಾಗಲು ಹೋಗಿರುವ ಬಗ್ಗೆ ಕೇಳಿದಾಗ, ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಆಕೆ ಮುಂದೊಂದು ದಿನ ನನ್ನ ಬಳಿಗೆ ಬರುತ್ತಾಳೆ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಇದೀಗ ಆಕೆ ಭಾರತಕ್ಕೆ ಬಂದಿದ್ದು, ಮತ್ತೆ ವಾಪಸ್ ಹೋಗುವುದಾಗಿ ಹೇಳುತ್ತಿದ್ದಾಳೆ.

Share This Article