ಕೇರಳದ ಪ್ರಖ್ಯಾತ ವಿತರಣಾ ಸಂಸ್ಥೆಯ ತೆಕ್ಕೆಗೆ ‘ಬನಾರಸ್’ ವಿತರಣಾ ಹಕ್ಕು

Public TV
2 Min Read

ಝೈದ್ ಖಾನ್ (Zaid Khan) ನಾಯಕನಾಗಿ ನಟಿಸಿರುವ ಬನಾರಸ್ (Banaras) ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಅತ್ತ ಝೈದ್ ಖಾನ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವಾಗಲೇ, ಇತ್ತ ಬಿಡುಗಡೆಗೆ ಬೇಕಿರುವಂಥಾ ತಯಾರಿಯೂ ತೀವ್ರವಾಗಿಯೇ ಶುರುವಾಗಿದೆ. ಇಂಥಾ ವಾತಾವರಣದಲ್ಲಿ ಬನಾರಸ್ ಚಿತ್ರತಂಡದ ಕಡೆಯಿಂದ ಖುಷಿಯ ಸಂಗತಿಯೊಂದು ಹೊರಬಿದ್ದಿದೆ. ಕೇರಳದಲ್ಲಿ (Kerala) ಪ್ರಖ್ಯಾತ ವಿತರಣಾ ಸಂಸ್ಥೆಯಾಗಿರುವ ಮಲಕುಪ್ಪಡಮ್, ಬನಾರಸ್‌ನ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಈಗಾಗಲೇ ಕೇರಳದಲ್ಲಿ ದೊಡ್ಡ ಹೆಸರು ಮಾಡಿರುವ ಸದರುಇ ಸಂಸ್ಥೆ ಹಲವಾರು ಹಿಟ್ ಸಿನಿಮಾಗಳನ್ನು ಕೇರಳದಲ್ಲಿ ಬಿಡುಗಡೆಗೊಳಿಸಿದೆ. ಆದ್ದರಿಂದಲೇ ಕೇರಳದ ತುಂಬೆಲ್ಲ ಬನಾರಸ್ ಬಗೆಗೀಗ ಬೇರೆಯದ್ದೇ ದಿಕ್ಕಿನಲ್ಲಿ ನಿರೀಕ್ಷೆ ಮೂಡಿಕೊಂಡಿದೆ.

ಈ ವಿಚಾರವನ್ನು ಖುದ್ದು ಆ ಸಂಸ್ಥೆಯೇ ಅಧಿಕೃತವಾಗಿ ಘೋಶಿಸಿಕೊಂಡಿದೆ. ದೇಶಾದ್ಯಂತ ಉದ್ಯಮಿಯಾಗಿ ದೊಡ್ಡ ಹೆಸರು ಮಾಡಿರುವ ಥಾಮಸ್ ಆಂಟೋನಿ, ತೋಮಿಚನ್ ಮುಪಕುಪ್ಪದಮ್ ಎಂದೇ ಹೆಸರುವಾಸಿಯಾಗಿರುವವರು. ಅವರು ಉದ್ಯಮಿಯಾಗಿದ್ದುಕೊಂಡೇ ಮಲಕುಪ್ಪಡಮ್ ಫಿಲಂಸ್ ಮೂಲಕ ಹಲವಾರು ಚಿತ್ರಗಳನ್ನು ನಿಮರ್ಠಾಣ ಮಾಡಿದ್ದಾರೆ. ಅದರೊಂದಿಗೇ ಮಲಕುಪ್ಪಡಮ್ ರಿಲೀಸ್ ಸಂಸ್ಥೆಯ ಮೂಲಕ ಹಲವಾರು ಸಿನಿಮಾಗಳ ವಿತರಕರಾಗಿಯೂ ಯಶಸ್ವಿಯಾಗಿದ್ದಾರೆ. ಎಲ್ಲ ರೀತಿಯಲ್ಲಿಯೂ ಗುಣಮಟ್ಟ ಹೊಂದಿರುವ ಚಿತ್ರಗಳ ವಿತರಣಾ ಹಕ್ಕುಗಳನ್ನು ಖರೀದಿಸೋದು ಈ ಸಂಸ್ಥೆಯ ಹೆಚ್ಚುಗಾರಿಕೆ. ಆದ್ದರಿಂದಲೇ, ಈ ಸಂಸ್ಥೆ ಒಂದು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿತೆಂದರೆ, ಆ ಚಿತ್ರದ ಬಗ್ಗೆ ತಾನೇ ತಾನಾಗಿ ನಿರೀಕ್ಷೆ ಮೂಡಿಕೊಳ್ಳುತ್ತದೆ. ಇದನ್ನೂ ಓದಿ:ರೂಪೇಶ್‌ಗೆ ಕೊನೆಯುಸಿರು ಇರುವವರೆಗೂ ಪ್ರೀತಿ ಮಾಡುತ್ತೀನಿ ಎಂದ ಸಾನ್ಯ

ಈವತ್ತಿಗೂ ಆಯ್ಕೆಯಲ್ಲಿ ಗುಣಮಟ್ಟ ಕಾಯ್ದುಕೊಂಡಿರುವ ಈ ಸಂಸ್ಥೆ, ಆ ಮಾನದಂಡಗಳ ಆಧಾರದಲ್ಲಿಯೇ ಬನಾರಸ್ ಅನ್ನು ಆರಿಸಿಕೊಂಡಿದೆ. ವಿಶೇಷವೆಂದರೆ, ಈ ಸಂಸ್ಥೆಯ ಮುಖ್ಯಸ್ಥರು ಬನಾರಸ್ ಮೂಡಿ ಬಂದಿರುವ ರೀತಿ ಕಂಡು ಥ್ರಿಲ್ ಆಗಿದ್ದಾರೆ. ಆ ಮೆಚ್ಚುಗೆಯಿಂದಲೇ ದೊಡ್ಡ ಮೊತ್ತಕ್ಕೆ ಬನಾರಸ್ ವಿತರಣಾ ಹಕ್ಕುಗಳನ್ನು ಖರೀದಿಸಿದ್ದಾರೆ. ಇದೇ ನವೆಂಬರ್ ನಾಲಕ್ಕರಂದು ವಿಶಾಲ ಕೇರಳಕ್ಕೆ ಅತ್ಯಂತ ವ್ಯವಸ್ಥಿತವಾಗಿ ಬನಾರಸ್ ಹಬ್ಬಿಕೊಳ್ಳಲಿದೆ. ಈ ವಿದ್ಯಮಾನ ಒಂದಿಡೀ ಬನಾರಸ್ ಚಿತ್ರತಂಡವನ್ನು ಥ್ರಿಲ್ ಆಗಿಸಿದೆ. ಹೊಸಾ ಹೀರೋನ ಚಿತ್ರವೊಂದು ಇಷ್ಟು ದೊಡ್ಡ ಮೊತ್ತದ ವ್ಯವಹಾರ ನಡೆಸಿರೋದೊಂದು ದಾಖಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದಾಗಿ ನವನಾಯಕ ಝೈದ್ ಖಾನ್ ಪಾಲಿಗೂ ಹೊಸಾ ಭರವಸೆ, ಹುರುಪು ಮೂಡಿಕೊಂಡಂತಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *