ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್

Public TV
1 Min Read

ಬಾಲಿವುಡ್ ಬ್ಯೂಟಿ ದಿಶಾ ಪಟಾನಿ ಸದ್ಯ `ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರದಿಂದ ಸಿನಿ ಕೆರಿಯರ್ ಶುರುಮಾಡಿದ್ದ ನಟಿ ದಿಶಾ ಈಗ ಬಾಲಿವುಡ್‌ನಲ್ಲಿ ಮಿರ ಮಿರ ಅಂತಾ ಮಿಂಚ್ತಿದ್ದಾರೆ. `ಏಕ್ ವಿಲನ್ ರಿಟರ್ನ್ಸ್’ ಪ್ರಚಾರದ ವೇಳೆಯಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು, ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.

ಬಿಟೌನ್ ಕ್ವೀನ್ ದಿಶಾ ಈಗ `ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದಾರೆ. ಅರ್ಜುನ್ ಕಪೂರ್, ಜಾನ್ ಅಬ್ರಹಾಂ, ತಾರಾ ಜತೆ ಪ್ರಮುಖ ಪಾತ್ರದಲ್ಲಿ ದಿಶಾ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಮತ್ತು ಪೋಸ್ಟರ್ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದು, ಇದೇ ಜುಲೈ 29ಕ್ಕೆ ತೆರೆಗೆ ಅಬ್ಬರಿಸಲಿದೆ. ಹಾಗಾಗಿ ಪ್ರಚಾರ ಕಾರ್ಯದಲ್ಲಿ ಭಾಗಿದ್ದ ವೇಳೆ ದಿಶಾ ಹಾಟ್ ಲುಕ್ ಗಂಡ್ ಹೈಕ್ಳ ಟೆಂಪ್ರೇಚರ್ ಹೆಚ್ಚಿಸಿದೆ. ಇದನ್ನೂ ಓದಿ:ರಿಲೀಸ್‌ಗೂ ಮುನ್ನವೇ ವಿವಾದಕ್ಕೆ ಸಿಲುಕಿದ ಕಂಗನಾ ನಟನೆಯ `ಎಮರ್ಜೆನ್ಸಿ’ ಚಿತ್ರ

ಬ್ಲ್ಯಾಕ್ ಕಲರ್ ಕ್ರಾಪ್ ಟಾಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ದಿಶಾ ಲುಕ್ ಈಗ ನೋಡುಗರ ಗಮನ ಸೆಳೆಯುತ್ತಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *