ಚೈತ್ರಾ ಕುಂದಾಪುರ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್!

Public TV
2 Min Read

ಕೊಪ್ಪಳ: ಹಿಂದೂ ಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ಒಂದೇ ಭಾಷಣಕ್ಕೆ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಬೆಚ್ಚಿಬಿದ್ದಿದ್ದಾರೆ ಎಂದು ಹೇಳಲಾಗಿದ್ದು, ಆದ್ರೆ ಅವರನ್ನು ನ್ಯಾಯ ಸಮ್ಮತವಾಗಿ ಎದುರಿಸಲಾಗದ ಅನ್ಸಾರಿ ಬೆಂಬಲಿಗರು ಚೈತ್ರಾ ತೇಜೋವಧೆಗೆ ವಾಮಮಾರ್ಗ ಅನುಸರಿಸಿದ್ದಾರೆ.

ಕೆಲವು ದಿನಗಳಿಂದ ಕೊಪ್ಪಳ ಜಿಲ್ಲೆಯಾದ್ಯಂತ ಚೈತ್ರಾ ಕುಂದಾಪುರ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದಿದ್ದಾರಂತೆ ಹೇಳುವ ಎಡಿಟೆಡ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಎರಡು ದಿನಗಳ ಹಿಂದೆ ಗಂಗಾವತಿಗೆ ಆಗಮಿಸಿದ್ದಾಗ ಚೈತ್ರಾ ಅವರು ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಈ  ಮೊದಲು ಸಹ ಚೈತ್ರಾ ಕುಂದಾಪುರಕ್ಕೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ರು, ಫೆಬ್ರವರಿ 20ಕ್ಕೆ ಮತ್ತೊಮ್ಮೆ ಕೊಪ್ಪಳಕ್ಕೆ ಚೈತ್ರಾ ಕುಂದಾಪುರ ಆಗಮಿಸುತ್ತಿದ್ದಾರೆ ಅಂತಾ ಹಿಂದೂ ಸಂಘಟನಾ ಕಾರ್ಯಕರ್ತರು ಫೇಸ್ ಬುಕ್ ನಲ್ಲಿ  ಬರೆದುಕೊಂಡಿದ್ರು. ಈ ಮೊದಲು ಸಹ ಚೈತ್ರಾ ನೇರವಾಗಿ ಶಾಸಕ ಅನ್ಸಾರಿ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ರು. ಈ ಹಿನ್ನೆಲೆಯಲ್ಲಿ ಅನ್ಸಾರಿ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ.

ಚೈತ್ರಾ ಕುಂದಾಪುರ ಹೇಳೋದು ಹೀಗೆ:
ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಕೆಲವೊಂದು ಗೊಂದಲ ಸೃಷ್ಟಿಸೋ ಪೋಸ್ಟ್ ಗಳು ಹರಿದಾಡುತ್ತಿದೆ. ಆದರೆ ನನಗೆ ಅಂತಹ ಯಾವುದೇ ದಾರಿದ್ರ್ಯ ಬಂದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ. ಈ ರೀತಿ ಪೋಸ್ಟ್ ಹಾಕಿದವರಿಗೆ ಒಂದು ಸಂದೇಶ ನೀಡಲು ಇಷ್ಟಪಡುತ್ತೇನೆ. ಈಗಾಗಲೇ ಇಲಿಯಾಸ್ ಎಂಬ ವ್ಯಕ್ತಿಯ ಮೇಲೆ ಕೇಸ್ ದಾಖಲಿಸಿದ್ದೇನೆ. ಈ ಸುದ್ದಿಯ ಮೂಲ ಗಂಗಾವತಿ ಎಂದು ಹೇಳಲಾಗುತ್ತಿದೆ. ಆದರೆ ಮಂಗಳೂರು-ಉಡುಪಿ ಭಾಗದ ಮುಸ್ಲಿಮರ ಮೂಲಕ ಕಾಂಗ್ರೆಸ್ ಐಟಿ ಸೆಲ್ ಸಹಾಯದ ಮೂಲಕ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. 2015ರಲ್ಲಿ ಉಡುಪಿಯಲ್ಲಿ ನಡೆದ ಒಂದು ಘಟನೆಯ ಫೋಟೋಗಳಿಗೆ ನನ್ನ ಫೋಟೋ ಸೇರಿಸಿ ಈ ರೀತಿ ಮಾಡಲಾಗುತ್ತಿದೆ.

ಈ ರೀತಿಯ ಫೋಟೋಗಳನ್ನು ಶೇರ್ ಮಾಡುವವರನ್ನು ಬಂಧಿಸಲು ಪೊಲೀಸರಿಗೆ 2 ದಿನಗಳ ಕಾಲ ಸಮಯ ನೀಡಿದ್ದೇನೆ. ಅಲ್ಲದೇ ನಾಳೆ ಇನ್ನಷ್ಟು ಮಂದಿಗೆ ಹಾಗೂ ಕಾಂಗ್ರೆಸ್ ಸೆಲ್ ಐಟಿ ಅಧಿಕಾರಿಗಳಾದ ದಿನೇಶ್ ನಾಯಕ್, ಅನಿಲ್ ರೆಡ್ಡಿ ಹಾಗೂ ಇಕ್ಬಾಲ್ ಅನ್ಸಾರಿ ಅವರ ಬೆಂಬಲಿಗರ ಮೇಲೆ ಕೇಸನ್ನು ದಾಖಲಿಸುತ್ತೇನೆ.

ಈ ರೀತಿ ಪೋಸ್ಟ್ ಗಳಿಂದ ನನ್ನನ್ನು ಹಿಂದೂ ಸಮಾಜದ ಪರ ಕೆಲಸಗಳಿಂದ ವಿಮುಕ್ತಗೊಳಿಸಬಹುದು ಎಂದುಕೊಂಡಿದ್ದೀರಿ. ಈ ರೀತಿಯ ಸುದ್ದಿಗಳು ಈ ಹಿಂದೆ ಕೂಡ ಆಗಿತ್ತು. ಆದರೆ ಈ ಬಾರಿ ನಾನು ಗಂಭೀರವಾಗಿ ಪರಿಗಣಿಸಿದ್ದೀನಿ. ಈಗ ಈ ಪೋಸ್ಟ್ ಶೇರ್ ಮಾಡುತ್ತಿರುವ ಪ್ರತಿಯೊಬ್ಬರ ಫೋನ್ ನಂಬರ್ ಪಡೆದು ಪೊಲೀಸರಿಗೆ ಕೊಟ್ಟಿದ್ದೇನೆ. ಹಾಗಾಗಿ ಪೊಲೀಸರು 2 ದಿನಗಳಲ್ಲಿ ಅವರನ್ನು ಬಂಧಿಸಬೇಕು ಇಲ್ಲದಿದ್ದರೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುವ ಎಲ್ಲ ತಯಾರಿ ನಡೆಸಿಕೊಂಡಿದ್ದೇವೆ.

ಪೋಸ್ಟ್ ವೈರಲ್ ಆಗುವ ಮೊದಲೇ ಅನ್ಸಾರಿ ಬೆಂಬಲಿಗ ಪರಮೇಶ್ ಬಡಿಗಿ ಎಂಬಾತ ಈ ಸುಳ್ಳು ಪೋಸ್ಟ್ ಗಳ ಬಗ್ಗೆ ವರದಿ ಮಾಡುವಂತೆ ಸ್ಥಳೀಯ ಯೂಟ್ಯೂಬ್ ಚಾನಲ್ ವರದಿಗಾರನಿಗೆ ಮಾಹಿತಿ ನೀಡಿದ್ದಾನೆ. ವರದಿ ಮಾಡಲು ನಿರಾಕರಿಸಿದ ಯೂಟ್ಯೂಬ್ ಚಾನೆಲ್ ನ ಗೋವಿಂದಗೆ ಅನ್ಸಾರಿ ಬೆಂಬಲಿಗ ಪರಮೇಶ ಅವಾಜ್ ಹಾಕಿದ್ದಾನೆ. ಅನ್ಸಾರಿ ಬೆಂಬಲಿಗ ಪರಮೇಶ್ ವರದಿ ಬಿತ್ತರಿಸುವಂತೆ ವರದಿಗಾರನಿಗೆ ತಾಕೀತು ಮಾಡಿದ ಆಡಿಯೋ ವೈರಲ್ ಆಗಿವೆ.

ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಚೈತ್ರಾ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *