ಮದುವೆಗೆ ಬಂದ ಅತಿಥಿಗಳ ಮೇಲೆ ಬಿತ್ತು ಮುಸುರೆ ತಟ್ಟೆ – ವೈಟರ್‌ನನ್ನೇ ಹೊಡೆದು ಕೊಂದ್ರು

Public TV
1 Min Read

– ಶವವನ್ನು ಕಾಡಿನಲ್ಲಿ ಬಚ್ಚಿಟ್ರು

ಲಕ್ನೋ: ಸಂಭ್ರಮದಿಂದ ಕೂಡಿರಬೇಕಾಗಿದ್ದ ಮದುವೆ ಮನೆಯಲ್ಲಿ ರಕ್ತ ಹರಿದಿರುವ ಘಟನೆಯೊಂದು ನಡೆದಿದೆ. ಮದುವೆಗೆ ಬಂದ ಅಥಿತಿಗಳ ಮೇಲೆ ಮುಸುರೆ ತಟ್ಟೆಗಳು ಬಿತ್ತು ಎಂದು ವೈಟರ್‌ನನ್ನೇ (Waiter) ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ.

ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಪಂಕಜ್ ಹತ್ಯೆಯಾದ ವ್ಯಕ್ತಿ. ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮುಸುರೆ ತಟ್ಟೆಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು.

ಮುಸುರೆ ತಟ್ಟೆಗಳು ತಮ್ಮ ಮೇಲೆ ಬಿದ್ದ ಪರಿಣಾಮ ರಿಷಬ್ ಸಿಟ್ಟಾಗಿ ವೈಟರ್ ಪಂಕಜ್‌ನೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದಿದ್ದು, ಈ ವೇಳೆ ಪಂಕಜ್‌ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಂದಿದ್ದಾನೆ. ಇದನ್ನೂ ಓದಿ: ಗಣ್ಯರ ಮಾಹಿತಿ ಮೊದಲೇ ಗೊತ್ತಿತ್ತು – ಸಿಎಂ ಭದ್ರತಾ ವಿಚಾರದಲ್ಲಿ ಎಡವಿದ್ರಾ ಧಾರವಾಡ ಪೊಲೀಸರು?

ಕೊಲೆ ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್‌ನ ಶವವನ್ನು ಹತ್ತಿರದ ಕಾಡಿಗೆ ಕೊಂಡುಹೋಗಿ ಅಲ್ಲಿ ಬಚ್ಚಿಟ್ಟಿದಾರೆ. ಘಟನೆ ನಡೆದ ಒಂದು ದಿನದ ಬಳಿಕ ಪೊಲೀಸರು ಪಂಕಜ್‌ನ ಶವವನ್ನು ಕಾಡಿನಿಂದ ವಶಪಡಿಸಿಕೊಂಡಿದ್ದಾರೆ.

ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಚಿನ್ನ, ಜಮೀನು, ಬಿಎಂಡಬ್ಲ್ಯು ಕಾರಿಗೆ ಬೇಡಿಕೆ- ವೈದ್ಯೆ ಆತ್ಮಹತ್ಯೆಗೆ ಶರಣು

Share This Article