‘ಅನ್ನಪೂರ್ಣಿ’ ಡಿಲೀಟ್ ಮಾಡಿದ್ದಕ್ಕೆ ನಿರ್ದೇಶಕ ವೆಟ್ರಿಮಾರನ್ ಬೇಸರ

Public TV
1 Min Read

ಕ್ಷಿಣದ ಹೆಸರಾಂತ ನಿರ್ದೇಶಕ ವೆಟ್ರಿಮಾರನ್ (Vetrimaran) ಅನ್ನಪೂರ್ಣಿ ಸಿನಿಮಾದ ಪರವಾಗಿ ಮಾತನಾಡಿದ್ದಾರೆ. ನಯನತಾರಾ (Nayantara) ನಟನೆಯ ಅನ್ನಪೂರ್ಣಿ ಸಿನಿಮಾದ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಓಟಿಟಿಯಿಂದ ತೆಗೆದು ಹಾಕಲಾಗಿತ್ತು. ಈ ಕ್ರಮವನ್ನು ಅವರು ವಿರೋಧಿಸಿದ್ದಾರೆ. ಸೆನ್ಸಾರ್ ಆದ ಮೇಲೂ ಈ ರೀತಿ ಒತ್ತಡ ಹಾಕುವುದು ಸರಿಯಾದದ್ದು ಅಲ್ಲವೆಂದು ಅವರು ಹೇಳಿದ್ದಾರೆ.

ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮನಿಗೆ ಹಾಗೂ ಹಿಂದೂ ಧರ್ಮಕ್ಕೆ ಧಕ್ಕೆ ಆಗುವಂತಹ ಸನ್ನಿವೇಶಗಳ ಇವೆ ಎನ್ನುವ ಕಾರಣಕ್ಕಾಗಿ ಹಲವಾರು ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಒಟಿಟಿಯಿಂದ ಚಿತ್ರವನ್ನು ಡಿಲಿಟ್ ಮಾಡಲಾಗಿತ್ತು. ನಂತರ ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿವಾದ (Controversy) ಭುಗಿಲೇಳುತ್ತಿದ್ದಂತೆಯೇಅನ್ನಪೂರ್ಣಿ‘ (Annapoorani)  ಸಿನಿಮಾವನ್ನು ಕೊನೆಗೂ ನೆಟ್ ಫಿಕ್ಸ್ ತೆಗೆದು ಹಾಕಿದೆ. ಸಿನಿಮಾ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಅಲ್ಲದೇ, ಸಿನಿಮಾ ಬಗ್ಗೆ ದೂರು ಕೂಡ ದಾಖಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎನ್ನುವ ಕಾರಣಕ್ಕಾಗಿ ಚಿತ್ರದ ವಿರುದ್ಧ ಪ್ರತಿಭಟನೆ ಕೂಡ ಮಾಡಲಾಗಿತ್ತು.

ನಾನಾ ಕಡೆಗಳಲ್ಲಿ ಅನ್ನಪೂರ್ಣಿ ಸಿನಿಮಾ ಬಗ್ಗೆ ದೂರುಗಳು ದಾಖಲಾಗುತ್ತಿದ್ದಂತೆಯೇ ಒಟಿಟಿಯಿಂದಲೇ ಚಿತ್ರವನ್ನು ತೆಗೆದು ಹಾಕಲಾಗಿದೆ. ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಸಿಗಲಾರದು.

 

ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಇದು 75ನೇ ಸಿನಿಮಾ. ಸಿನಿಮಾದಲ್ಲಿ ನಯನತಾರಾ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಕಂಡು ಅಭಿಮಾನಿಗಳು ಸಂಭ್ರಮಿಸಿದ್ದರು. ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

Share This Article