ಅನುಮತಿ ಇಲ್ಲದೇ ಅರಣ್ಯ ಭೂಮಿಯಲ್ಲಿ ಶೂಟಿಂಗ್ ಮಾಡಿದ್ರಾ?: ತರುಣ್ ಸುಧೀರ್ ಸ್ಪಷ್ಟನೆ

Public TV
1 Min Read

ತುಮಕೂರಿನ ನಾಮದ ಚಿಲುಮೆಯಲ್ಲಿ ಅನುಮತಿ ಇಲ್ಲದೇ ಅರಣ್ಯ ಭೂಮಿಯಲ್ಲಿ (Forest) ಶೂಟಿಂಗ್ ಮಾಡಿದ್ದಾರೆ ಎನ್ನಲಾದ ಆರೋಪಕ್ಕೆ ತರುಣ್ ಸುಧೀರ್ (Tharun Sudhir) ಸ್ಪಷ್ಟನೆ ನೀಡಿದ್ದಾರೆ. ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿಲ್ಲ ಅಂತ ಶೂಟಿಂಗ್ ಮಾಡಿಲ್ಲ ಎಂದು ತರುಣ್ ಸುಧೀರ್ ‘ಪಬ್ಲಿಕ್ ಟಿವಿ’ಗೆ ಕ್ಲ್ಯಾರಿಟಿ ಕೊಟ್ಟಿದ್ದಾರೆ.

ನಾಮದ ಚಿಲುಮೆಯಲ್ಲಿ ನಾವು ಚಿತ್ರೀಕರಣ ಮಾಡಿಲ್ಲ ತರುಣ್ ಸುಧೀರ್ ಸ್ಪಷ್ಟಪಡಿಸಿದ್ದಾರೆ. ಸ್ಥಳದ ಹತ್ತಿರದಲ್ಲೇ ಡಾಬಾ ಇದ್ದಿದ್ರಿಂದ ಪ್ರೊಡಕ್ಷನ್ ಯುನಿಟ್ ನಿಲ್ಲಿಸಿದ್ವಿ ಅಷ್ಟೇ. ಅದನ್ನು ನೋಡಿದ ದಾರಿಹೋಕರು ಶೂಟಿಂಗ್ ಮಾಡುತ್ತಿದ್ದೇವೆ ಎಂದುಕೊಂಡು ದೂರು ಕೊಟ್ಟಿರಬಹುದು. ಆ ವೇಳೆ, ಸ್ಥಳಕ್ಕೆ ಅಧಿಕಾರಿಗಳು ಬಂದು ದಂಡ ಹಾಕಿದ್ದರು, ನಾವು ಕಟ್ಟಿದ್ದೇವೆ ಎಂದಿದ್ದಾರೆ. ತಿಂಗಳ ಹಿಂದೆಯೇ ನಾವು ಶೂಟಿಂಗ್‌ಗೆ ಅನುಮತಿ ಅರ್ಜಿ ಹಾಕಿದ್ದು ನಿಜ. ಆದರೆ ಅಧಿಕಾರಿಗಳು ಅನುಮತಿ ಕೊಟ್ಟಿಲ್ಲ ಅಂತ ಚಿತ್ರೀಕರಣ ಮಾಡಿಲ್ಲ. ಸ್ಥಳದಲ್ಲಿ ನಾವ್ಯಾರೂ ಇರಲಿಲ್ಲ, ಯುನಿಟ್ ಹುಡುಗರಿದ್ದರು ಎಂದಿದ್ದಾರೆ.

ಅಂದಹಾಗೆ, ತುಮಕೂರಿನ ನಾಮದ ಚಿಲುಮೆಯಲ್ಲಿ ತರುಣ್ ಸುಧೀರ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದ ಶೂಟಿಂಗ್ ಅರಣ್ಯ ಭೂಮಿಯಲ್ಲಿ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇನ್ನೂ ಈ ಸಿನಿಮಾವು ರಕ್ಷಿತಾ (Rakshitha Prem) ಸಹೋದರ ರಾಣಾ (Raana) ಮತ್ತು ‘ಮಹಾನಟಿ’ ಖ್ಯಾತಿಯ ಪ್ರಿಯಾಂಕ ನಟನೆಯ ಸಿನಿಮಾ ಆಗಿದೆ. ತರುಣ್‌ ಸುಧೀರ್‌ ಈ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.

Share This Article