Bigg Boss: ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

Public TV
1 Min Read

ತ್ಯಂ, ಧನ 51, ರಾಜುಭಾಯ್ ಸಿನಿಮಾ ಸೇರಿದಂತೆ ಅನೇಕ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಸೂರ್ಯ ಕಿರಣ್ (Surya Kiran) 48ನೇ ವಯಸ್ಸಿಗೆ ನಿಧನರಾಗಿದ್ದಾರೆ. ಮಾರ್ಚ್ 11ರಂದು ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಸೂರ್ಯ ಕಿರಣ್ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸುತ್ತೇನೆ: ನಟ ಸಾಧು ಕೋಕಿಲಾ

ಕೆಲದಿನಗಳಿಂದ ಅನಾರೋಗ್ಯದಿಂದ ಡೈರೆಕ್ಟರ್ ಸೂರ್ಯ ಕಿರಣ್ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಅವರ ನಿಧನ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ಸೂರ್ಯ ಕಿರಣ್ ನಿಧನಕ್ಕೆ ಆಪ್ತರು, ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಮಾಸ್ಟರ್ ಸುರೇಶ್ ಎಂಬ ಹೆಸರಿನಲ್ಲಿ 200ಕ್ಕೂ ಹೆಚ್ಚು ಸಿನಿಮಾದಲ್ಲಿ ಬಾಲನಟನಾಗಿ ಸೂರ್ಯ ಕಿರಣ್ ನಟಿಸಿದ್ದಾರೆ. ‘ಸತ್ಯಂ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಾಗ ಸೂರ್ಯ ಕಿರಣ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡರು. ತೆಲುಗಿನ ಬಿಗ್ ಬಾಸ್ ಸೀಸನ್ 4ರಲ್ಲಿ (Bigg Boss Telugu 4) ಸೂರ್ಯ ಸ್ಪರ್ಧಿಯಾಗಿದ್ದರು. ಮೊದಲ ಎಲಿಮಿನೇಟ್ ಆಗಿ ಹೊರಬಂದಿದ್ದರು.

ಕನ್ನಡದ ರವಿಚಂದ್ರನ್, ಜಗ್ಗೇಶ್ ನಟನೆಯ ‘ರಾಮಕೃಷ್ಟ’ (Ramakrishna) ಚಿತ್ರದ ನಾಯಕಿ ಕಲ್ಯಾಣಿ ಅಲಿಯಾಸ್ ಕಾವೇರಿ ಅವರನ್ನು ಸೂರ್ಯ ಕಿರಣ್ ಪ್ರೀತಿಸಿ ಮದುವೆಯಾದರು. ದಾಂಪತ್ಯದಲ್ಲಿ ಮನಸ್ತಾಪ ಉಂಟಾದ ಕಾರಣ ಡಿವೋರ್ಸ್ ಪಡೆದರು.

Share This Article