ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ: ನಿರ್ದೇಶಕ ಸಾಯಿ ಪ್ರಕಾಶ್

Public TV
2 Min Read

ಸ್ಯಾಂಡಲ್‌ವುಡ್ ನಿರ್ದೇಶಕ ಕಮ್ ನಿರ್ಮಾಪಕ ಸಾಯಿ ಪ್ರಕಾಶ್ (Sai Prakash) ಅವರು ದರ್ಶನ್ (Darshan) ಪ್ರಕರಣದ ಕುರಿತು ಮಾತನಾಡಿದ್ದಾರೆ. ದರ್ಶನ್ ಕೋಪ ಬಿಡಬೇಕು. ದರ್ಶನ್ ಕೆಟ್ಟವನಲ್ಲ, ತಪ್ಪು ತಿದ್ದಿಕೊಳ್ಳುತ್ತಿದ್ದಾರೆ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸಾಯಿ ಪ್ರಕಾಶ್ ಮಾತನಾಡಿದ್ದಾರೆ.‌ ಇದನ್ನೂ ಓದಿ:ಮರು ಮದುವೆಯಾದ ಬಾಲಿವುಡ್ ನಟಿ ಸನ್ನಿ ಲಿಯೋನ್

ಬೇಕಂತ ಅವರು ತಪ್ಪು ಮಾಡಿಲ್ಲ. ಕೋಪ ಇರುವಾಗ ಏನು ಮಾಡ್ತೀವಿ ಅಂತ ಗೊತ್ತಾಗಲ್ಲ. ಮಾಡಿದ ಮೇಲೆ ಗೊತ್ತಾಗುತ್ತದೆ ತಪ್ಪು ಅಂತ. ದರ್ಶನ್‌ಗೆ ಕೋಪ, ಎಮೋಷನ್ ಜಾಸ್ತಿ. ಅದೊಂದು ಕಂಟ್ರೋಲ್ ಮಾಡಿಕೊಂಡರೆ ಸಾಕು ತುಂಬಾ ಒಳ್ಳೆಯ ನಟ. ತುಂಬಾ ಸಮಾಜ ಸೇವೆ ಮಾಡಿದ್ದಾರೆ. ಜನಸೇವೆ ಮಾಡೋದ್ದಕ್ಕೆ ಇನ್ನೂ ಅವಕಾಶವಿದೆ. ಭಗವಂತ ಅವನಿಗೆ ನಿರೀಕ್ಷೆ ಮಾಡಿದಷ್ಟು ಕೊಟ್ಟಿದ್ದಾನೆ. ದರ್ಶನ್‌ಗೆ ತುಂಬಾ ಒಳ್ಳೆತನವಿದೆ. ಇದು ಗೊತ್ತಿಲ್ಲದೇ ಮಾಡಿದ ತಪ್ಪು ಅಂದುಕೊಂಡಿದ್ದೇನೆ ಎಂದಿದ್ದಾರೆ.

ಆ ತಪ್ಪಿಗೆ ಎಷ್ಟು ನೋವು ಅನುಭವಿಸುತ್ತಿದ್ದಾರೆ. ಆ ಬೆನ್ನು ನೋವು ಬಂತು, ಜೀವನದಲ್ಲಿ ಸಂತೋಷ ಇಲ್ಲ. ಒಬ್ಬರೇ ಒಂದು ಕಡೆ ಕೂರಬೇಕು. ಅವರಿಗೂ ಈಗೆಲ್ಲಾ ಅರ್ಥವಾಗಿರುತ್ತದೆ. ದರ್ಶನ್ ನೋಡಿ ನಾವೆಲ್ಲಾ ಕಲಿಯಬೇಕು ಎನಿಸುತ್ತಿದೆ. ಅವರು ಮಾಡಿದ ಸಣ್ಣ ತಪ್ಪಿನಿಂದ ಏನು ಅನುಭವಿಸುತ್ತಿದ್ದಾರೋ, ಅದನ್ನು ಯಾರು ಮಾಡಬಾರದು ಅನ್ನೋದು ತೋರಿಸಿ ಕೊಟ್ಟಿದೆ. ಅವರಿಗೆ ಒಳ್ಳೆಯದಾಗಲಿ ಅಂತ ಬಾಬಾಗೆ ಪ್ರಾರ್ಥನೆ ಮಾಡುತ್ತೇನೆ. ಇನ್ಮುಂದೆ ದೇವರು ಅವರಿಗೆ ಯಾವುದೇ ಕಷ್ಟ ಕೊಡದೇ ಇರಲಿ. ಈಗ ಅವರಿಗೆ ಮಧ್ಯಂತರ ಬೇಲ್ ಸಿಕ್ಕಿದೆ. ಅವರ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲಿ. ಅವರ ಸಿನಿಮಾ ಮೇಲೆ ಕೆಲ ನಿರ್ಮಾಪಕರು ಹಣ ಹೂಡಿದ್ದಾರೆ. ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ ಅವರಿಗೆ ಒಳ್ಳೆಯದಾಗಬೇಕು ಎಂದಿದ್ದಾರೆ.

ದರ್ಶನ್ ಕೆಟ್ಟವನಲ್ಲ, ಒಳ್ಳೆಯವರೇ ತಪ್ಪು ಮಾಡಿದ್ದಾರೆ. ಈಗ ಅವರು ತಿದ್ದಿಕೊಳ್ಳುತ್ತಿದ್ದಾರೆ. ಅವರಿಗೆ ಮಧ್ಯಂತರ ಬೇಲ್ ಸಿಕ್ಕಿದೆ, ಮುಂದೆ ರೆಗ್ಯೂಲರ್ ಬೇಲ್ ಆಗುತ್ತದೆ ಅಂದುಕೊಂಡಿದ್ದೇನೆ. ಬೇಕಂತ ತಪ್ಪು ಮಾಡಿದ್ರೆ ಕ್ರೈಮ್ ಆಗುತ್ತದೆ. ಬೈ ಮಿಸ್ಟೇಕ್ ಆಗಿ ಮಾಡಿದ್ದು, ಅದಕ್ಕೆ ಕ್ಷಮೆ ಇದೆ ಅಂದುಕೊಂಡಿದ್ದೇನೆ. ದರ್ಶನ್ ಮೇಲೆ ತೂಗುದೀಪ ಅವರ ಹಾರೈಕೆಯಿದೆ. ತೂಗುದೀಪ ಅವರು ರಾಜ್‌ಕುಮಾರ್ ಜೊತೆ ಅದೆಷ್ಟೋ ಸಿನಿಮಾಗಳನ್ನು ಮಾಡಿದ್ದಾರೆ. ಅವರು ತುಂಬಾ ಒಳ್ಳೆಯವರು ದರ್ಶನ್‌ಗೂ ಒಳ್ಳೆಯದಾಗುತ್ತದೆ ಎಂದಿದ್ದಾರೆ.

Share This Article