ಅಸಲಿಗೆ ‘ಕಾಟೇರ’ ಟೈಟಲ್‌ ಕೊಟ್ಟಿದ್ದು ಯಾರು? ನಿರ್ದೇಶಕ ಮಹೇಶ್‌ ಸ್ಪಷ್ಟನೆ

By
2 Min Read

ಸ್ಯಾಂಡಲ್‌ವುಡ್‌ನಲ್ಲಿ ‘ಕಾಟೇರ’ ಟೈಟಲ್ ಬಗ್ಗೆ ಕದನ ಶುರುವಾಗಿದೆ. ‘ಕಾಟೇರ’ ಟೈಟಲ್ ಕೊಟ್ಟಿದ್ದು ನಾನೇ ಎಂದ ಉಮಾಪತಿಗೆ ದರ್ಶನ್ ಕೌಂಟರ್ ಕೊಟ್ಟಿದ್ದಾರೆ. ನಾವು ಗುಮ್ಮಿಸಿಕೊಳ್ಳುವವರಲ್ಲ ಎಂದು ದರ್ಶನ್‌ಗೆ ಉಮಾಪತಿ ಟಕ್ಕರ್ ಕೊಟ್ಟರು. ಅಸಲಿಗೆ ಕಾಟೇರ ಟೈಟಲ್ ಕೊಟ್ಟಿದ್ದು ಯಾರು? ಆಗಿದ್ದೇನು ಎಂದು ನಿರ್ದೇಶಕ ಮಹೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

‘ಮದಗಜ’ ಟೈಟಲ್ ಇದ್ದಿದ್ದು ನಿರ್ಮಾಪಕ ರಾಮ್‌ಮೂರ್ತಿ ಸರ್ ಹತ್ತಿರ. ಅದರಂತೆ ‘ಕಾಟೇರ’ ಟೈಟಲ್ ಇದ್ದಿದ್ದು ಉಮಾಪತಿ ಸರ್ ಹತ್ತಿರ. ಆದರೆ ಇದನ್ನು ಹೇಳಿ ಮಾಡಿಸಿದ್ದು ದರ್ಶನ್ ಅವರು ಎಂದು ಮಹೇಶ್ ಮಾತನಾಡಿದ್ದಾರೆ. ಎರಡು ಕಡೆ ಮಾತಾಡಿ ಸಿನಿಮಾ ಟೈಟಲ್ ಅನ್ನು ದರ್ಶನ್ ಎಕ್ಸ್‌ಚೇಂಜ್ ಮಾಡಿಸಿದ್ದರು.

ದರ್ಶನ್ ಮನೆಯಲ್ಲಿ ಕಾಟೇರ ಎಂಬ ಕುದುರೆ ಇತ್ತು. ಅದು ಸತ್ತ ಮೇಲೆ ನೆನಪಿಗೋಸ್ಕರ ಆ ಟೈಟಲ್‌ನ ತುರುಣ್ ಸುಧೀರ್ ಅವರ ಬ್ಯಾನರ್‌ನಲ್ಲಿ ರಿಜಿಸ್ಟರ್ ಮಾಡಿಸುವ ಪ್ಲ್ಯಾನ್ ಇತ್ತು. ಆದರೆ ಒಂದೇ ಬ್ಯಾನರ್‌ನಲ್ಲಿ 3 ಹೆಸರನ್ನು ರಿಜಿಸ್ಟರ್ ಮಾಡೋಕೆ ಆಗಲ್ಲ ಅಂತ ಹೇಳಿ. ಉಮಾಪತಿ ಅವರ ಬ್ಯಾನರ್‌ನಲ್ಲಿ ದರ್ಶನ್ ರಿಜಿಸ್ಟರ್ ಮಾಡಿಸಿದ್ದರು. ಈಗ ಈ ವಿಚಾರ ದೊಡ್ಡದಾಗಿ ಇಲ್ಲಿತನಕ ಬಂದಿದೆ ಎಂದರು ಮಹೇಶ್.

ದರ್ಶನ್ ಅವರು ಯಾವತ್ತು ಯಾವುದರ ಬಗ್ಗೆಯೂ ಮಾತನಾಡಲ್ಲ. ಈಗ ಮಾತನಾಡಿದ್ದಾರೆ ಅಂದರೆ ಅವರಿಗೆ ನೋವಾಗಿದೆ ಎಂದರ್ಥ. ಈಗ ಇದರ ಬಗ್ಗೆ ಸ್ಪಷ್ಟನೆ ನೀಡೋಣ ಅಂತ ನಿರ್ಧರಿಸಿದ್ದರು. ಯಾಕೆಂದ್ರೆ ಇದಾದ ಮೇಲೆ ಅವರು ‘ಡೆವಿಲ್’ ಶೂಟಿಂಗ್‌ನಲ್ಲಿ ಬ್ಯುಸಿಯಾಗ್ತಾರೆ ಅಂತ. ಈ ವಿಚಾರಕ್ಕೆ ಸ್ಪಷ್ಟನೆ ಇರಲಿ ಅಂತಲೇ ಕಾಟೇರ ಸಕ್ಸಸ್‌ ಕಾರ್ಯಕ್ರಮದಲ್ಲಿ ವೇದಿಕೆಗೆ ಕರೆದು ಡಿಬಾಸ್, ನನ್ನ ಮತ್ತು ತರುಣ್ ಬಳಿ ಕ್ಲ್ಯಾರಿಟಿ ಕೊಡಿಸಿದ್ದರು. ಇದನ್ನೂ ಓದಿ:ಟಾಪ್‌ಲೆಸ್ ಅವತಾರದಲ್ಲಿ ಸೋನಾಲಿ- ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ನಟಿ

ಉಮಾಪತಿ ಅವರು ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದು ಹಲವು ಕಡೆ ಹೇಳಿದ್ದಾರೆ. ಹಾಗಾಗಿ ದರ್ಶನ್ ಅವರು ಇಂದು ಸ್ಪಷ್ಟನೆ ಕೊಟ್ಟರು. ಅಂದು ಸಾಕಷ್ಟು ಬಾರಿ ದರ್ಶನ್ ಅವರೇ ನನಗೆ ಕಾಟೇರ ಟೈಟಲ್ ಹೇಳಿದ್ದು ಎಂದು ನನ್ನ ಬಳಿ ಉಮಾಪತಿ ಸರ್ ಹೇಳಿಕೊಂಡಿದ್ದರು. ಈಗ ಸಮಯ ಬದಲಾಗಿದೆ ಅಷ್ಟೇ ಎಂದು ಮಹೇಶ್ ಮಾತನಾಡಿದ್ದರು.

ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಅವತ್ತಿನ ಅವರ ಹೇಳಿಕೆಯಿಂದಲೇ ಇದೆಲ್ಲಾ ಇಂದು ಶುರುವಾಗಿದ್ದು, ಆದರೆ ದರ್ಶನ್ ಮತ್ತು ಉಮಾಪತಿ ಒಂದಾಗಲಿ, ಅವರ ಸಂಬಂಧ ಸರಿ ಹೋಗಲಿ ಎಂದು ನಾನು ಅಶಿಸುತ್ತೇನೆ ಎಂದು ಮಹೇಶ್ ಮಾತನಾಡಿದ್ದರು.

Share This Article