ಅಮೇಜಾನ್ ಕಾಡಿಗೆ ನುಗ್ಗಲಿದ್ದಾರಂತೆ ನಿರ್ದೇಶಕ ರಾಜಮೌಳಿ

Public TV
1 Min Read

ನ್ನೂ ಕೂಸೆ ಹುಟ್ಟಿಲ್ಲ ಆಗಲೇ ಕುಲಾಯಿ ಹೊಲೆಸುವಂತಹ ಕೆಲಸಗಳು ರಾಜಮೌಳಿ ಟೀಮ್ ನಿಂದ ಬರುತ್ತಿವೆ. ಆರ್.ಆರ್.ಆರ್ ಸಿನಿಮಾದ ನಂತರ ರಾಜಮೌಳಿ (Rajamouli) ಯಾವ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ. ಆ ಕೆಲಸ ಇನ್ನೂ ಶುರುವೇ ಆಗಿಲ್ಲ. ಆಗಲೇ ಆ ಸಿನಿಮಾದ ಚಿತ್ರೀಕರಣ ಎಲ್ಲಿ ನಡೆಯಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕಾಂಬಿನೇಷನ್ ಸಿನಿಮಾ ಮಾಡಿದ್ದ ರಾಜಮೌಳಿ, ಮುಂದಿನ ಚಿತ್ರಕ್ಕಾಗಿ ಮಹೇಶ್ ಬಾಬು (Mahesh Babu) ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಾಮಯಣ ಕಥೆಯಿಂದ ಸ್ಫೂರ್ತಿ ಪಡೆದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ ನಿರ್ದೇಶಕರು. ಈ ಸಿನಿಮಾವನ್ನು ಅಮೇಜಾನ್ ಕಾಡಿನಲ್ಲಿ ಚಿತ್ರೀಕರಿಸುವ ಪ್ಲ್ಯಾನ್ ಮಾಡಿದ್ದಾರಂತೆ. ಇದನ್ನೂ ಓದಿ:ಕನ್ನಡದ ನಟಿ ವಿಶಾಖ ಸಿಂಗ್‌ಗೆ ಅನಾರೋಗ್ಯ- ಆಸ್ಪತ್ರೆಗೆ ದಾಖಲು

ಈ ಸಿನಿಮಾದ ಕಥೆಗಾಗಿಯೇ ಆರು ತಿಂಗಳು ಮೀಸಲಿಟ್ಟಿದ್ದಾರಂತೆ ರಾಜಮೌಳಿ. ತಂದೆಯೊಂದಿಗೆ ಸಾಕಷ್ಟು ಚರ್ಚೆ ಕೂಡ ಮಾಡಿದ್ದಾರಂತೆ. ಈ ಸಿನಿಮಾದ ಚಿತ್ರಕಥೆಯನ್ನು ರಾಜಮೌಳಿ ತಂದೆಯೇ ಬರಲಿದ್ದು, ಈ ಬಾರಿ ಚಿತ್ರವನ್ನು ವಿಶ್ವಮಟ್ಟಕ್ಕೆ ತಲುಪಿಸುವ ಪ್ಲ್ಯಾನ್ ಕೂಡ ಮಾಡಲಾಗಿದೆಯಂತೆ. ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ನಂಬಿಕೆಯೇ ಇಲ್ಲದ ಮಹೇಶ್ ಬಾಬು ಮೊದಲ ಬಾರಿಗೆ ಇಂಥದ್ದೊಂದು ಚಿತ್ರ ಮಾಡುತ್ತಿದ್ದಾರೆ.

ಅಮೇಜಾನ್ (Amazon jungle) ಕಾಡಿನ ಬಗ್ಗೆ ಹೇಳಲೇಬೇಕಿಲ್ಲ. ಅದೊಂದು ದಟ್ಟ ಅರಣ್ಯ. ಅಪಾಯದ ಕಾಡು ಕೂಡ. ಈ ಕಾಡಿಗೆ ಹೋಗಿ ರಾಜಮೌಳಿ ಏನು ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು. ರಾಜಮೌಳಿ ಅಂದರೆ, ದೊಡ್ಡ ಕನಸುಗಾರು. ಹೊಸ ರೀತಿಯಲ್ಲಿ ಏನಾದರೂ ಯೋಚನೆ ಮಾಡಿರುತ್ತಾರೆ. ಹಾಗಾಗಿ ಅವರ ಮುಂದಿನ ಸಿನಿಮಾ ಕಾಡಿನಲ್ಲಿ ಇರತ್ತಾ? ನಾಡಿನಲ್ಲಿ ಶೂಟ್ ಆಗತ್ತಾ ಕಾದು ನೋಡಬೇಕು.

Share This Article