ಸರಳತೆ ಮೆರೆದ ನಿರ್ದೇಶಕ ಪ್ರೇಮ್- ಅಭಿಮಾನಿಗಳಿಂದ ಮೆಚ್ಚುಗೆ

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ದೇಶಕ ಪ್ರೇಮ್ ಅವರು ದನಗಳ ಮೈತೊಳೆದು ಶೃಂಗಾರ ಮಾಡುತ್ತಿರುವ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪ್ರೇಮ್ ಕುಟುಂಬಸ್ಥರ ಸರಳತೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರೇಮ್ ಅವರು ತಮ್ಮ ತಾಯಿಯವರ ತೋಟಕ್ಕೆ ಕುಟುಂಬದವರು ಹಾಗೂ ಏಕಲವ್ಯ ಚಿತ್ರ ತಂಡದ ಜೊತೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲಿ ಅವರು ತಮ್ಮ ಜಮೀನಿನಲ್ಲಿರುವ ದನಗಳ ಮೈತೊಳೆಸಿ ಅವುಗಳಿಗೆ ತಿನ್ನಲು ಹುಲ್ಲನ್ನು ಹಾಕಿ, ಹೂವಿನ ಹಾರಗಳನ್ನು ಹಾಕಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗನಿಗೆ ಪೇಟವನ್ನು ಕಟ್ಟುತ್ತಿರುವ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಪ್ರೇಮ್ ಜೊತೆಗೆ ರಕ್ಷಿತಾ ಪ್ರೇಮ್ ಹಾಗೂ ಏಕಲವ್ಯ ಟೀಂ ಸಾಥ್ ಕೊಟ್ಟಿದ್ದಾರೆ.

ಸಂಕ್ರಾಂತಿಯಂದು ಹಸುಗಳಿಗೆ ಕಿಚ್ಚು ಹಾಯಿಸುವ ವೀಡಿಯೋವನ್ನು ಹಾಕಿಕೊಂಡು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಈ ಫೋಟೋ ಹಾಗೂ ವೀಡಿಯೋಕ್ಕೆ ಹಲವಾರು ಜನರು ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರ ನಡೆ, ನುಡಿ ಹಾಗೂ ಸಂಪ್ರದಾಯವನ್ನು ನೋಡಿದರೆ ಖುಷಿಯಾಗುತ್ತದೆ ಎಂದು ಒಬ್ಬರು ಕಾಮೆಂಟ್ ಹಾಕಿದ್ದಾರೆ. ನಿಮ್ಮನ್ನು ನೋಡಿದರೇ ಸಂತೋಷವಾಗುತ್ತದೆ ಎಂದು ಇನ್ನೊಬ್ಬರು ಪ್ರೇಮ್ ಅವರ ಫೋಟೋ ಕುರಿತು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ನಟ ಮಮ್ಮುಟ್ಟಿಗೆ ಕೋವಿಡ್-19 ಪಾಸಿಟಿವ್

ಸದ್ಯ ಪ್ರೇಮ್ ನಿರ್ದೇಶನದ ಏಕಲವ್ಯ ಚಿತ್ರ ಬಿಡುಗಡೆಗೆ ಸಿದ್ಧತೆಗೊಂಡಿದೆ. ಅದರ ಪ್ರಚಾರದಲ್ಲಿ ಪ್ರೇಮ್ ಬ್ಯುಸಿಯಾಗಿದ್ದಾರೆ. ಕೊರೊನಾ ಕಾರಣದಿಂದಾಗಿ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. ಇದನ್ನೂ ಓದಿ: ಆತ್ಮಹತ್ಯೆ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ ಭಾಮ

Share This Article
Leave a Comment

Leave a Reply

Your email address will not be published. Required fields are marked *