ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಯಶ್ ಮುಂದೆ ಕ್ಷಮೆ ಕೇಳಿದ ಪ್ರಖ್ಯಾತ್ ಗೌಡ

Public TV
1 Min Read

ಬೆಂಗಳೂರು: ನನ್ನ ಹೆಸರು ಹೇಳಿಕೊಂಡು ಬಹಳಷ್ಟು ಜನರು ವ್ಯವಹಾರ ನಡೆಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಎಲ್ಲದ್ದಕ್ಕೂ ನನ್ನ ಹೆಸರನ್ನು ತರುವುದು ಸರಿಯಲ್ಲ ಎಂದು ಯಶ್ ಹೇಳಿದ್ದಾರೆ.

ನಿರ್ದೇಶಕ ಪ್ರಖ್ಯಾತ್ ಗೌಡ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಆಗಮಿಸಿ ಮಾತನಾಡಿದ ಅವರು, ಈ ಆರೋಪಕ್ಕೂ ನಮಗೂ ಸಂಬಂಧವೇ ಇಲ್ಲ. ಸುಮ್ಮನೆ ನನ್ನ ಹೆಸರನ್ನು ಕೆಡಿಸುವ ಉದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಚಿಲ್ಲರೆ ವಿಷಯಗಳಿಗೆ ನನ್ನನ್ನು ಎಳೆದು ತರಬೇಡಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಯಶ್ ಅವರದ್ದು ಏನು ತಪ್ಪಿಲ್ಲ ಎಂದು ಪ್ರಖ್ಯಾತ್ ಗೌಡ ಹೇಳಿ, ಅವರ ಹೆಸರನ್ನು ಬಳಸಿದ್ದಕ್ಕೆ ಕ್ಷಮೆಯನ್ನು ಕೇಳಿದರು. ಈ ವೇಳೆ ಸ್ಯಾಂಡಲ್‍ವುಡ್ ನಲ್ಲಿ ಇದ್ದುಕೊಂಡು ಯಾವುದೇ ಆಧಾರ ಇಲ್ಲದೇ ಈ ರೀತಿಯ ಆರೋಪಗಳನ್ನು ಮಾಡುವುದು ಶೋಭೆ ತರಲ್ಲ ಎಂದು ಪ್ರಖ್ಯಾತ್ ಗೌಡಗೆ ಯಶ್ ಸೂಚಿಸಿದರು.

ನಿರ್ದೇಶಕ ಮಂಜು ಅವರು ಫೋನ್ ಮೂಲಕ ಮಾತನಾಡಿ, ಪ್ರಖ್ಯಾತ ಗೌಡ ಮಾನಸಿಕ ಅಸ್ವಸ್ಥನಾಗಿದ್ದು, ನನಗೆ ಅವನು ಯಾರು ಎನ್ನುವುದೇ ಗೊತ್ತಿಲ್ಲ. ಆಗಾಗ ಆತ ಹೆಸರು ಬದಲಾಯಿಸುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮ ಪ್ರಸಾರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಯ್, ನಟಿ ರಾಗಿಣಿ ದ್ವಿವೇದಿ ಮಾತನಾಡಿ ಯಶ್ ಅವರಿಗೆ ಬೆಂಬಲ ನೀಡಿದರು.

ಕೊನೆಗೆ ಮಾತನಾಡಿದ ಯಶ್ ಅವರು, ನನ್ನ ಹೆಸರನ್ನು ಹೇಳಿಕೊಂಡು ಯಾರೇ ಹಣಕಾಸಿನ ವ್ಯವಹಾರ ನಡೆಸಿದರೆ ಅದಕ್ಕೂ ನನಗೂ ಯಾವುದೇ ಸಂಬಂಧ ಇರುವುದಿಲ್ಲ. ನನ್ನ ಸುತ್ತಮುತ್ತಲೂ ಇರುವ ವ್ಯಕ್ತಿಗಳು ಹೇಳಿದ್ರೂ ನಂಬಲು ಹೋಗಬೇಡಿ ಎಂದು ಅವರು ಜನತೆಯಲ್ಲಿ ಮನವಿ ಮಾಡಿದರು.

ನಿರ್ದೇಶಕ ಪ್ರಖ್ಯಾತ್ ಗೌಡ ಬುಧವಾರ ಸುದ್ದಿಗೋಷ್ಠಿ ನಡೆಸಿ, ಚಿತ್ರನಟ ಯಶ್ ಅವರ ಹೆಸರನ್ನು ಹೇಳಿಕೊಂಡು ಜಗದೀಶ್, ಪುರುಷೋತ್ತಮ್ ಇತರರು 40 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

https://youtu.be/WvdrLJdRm8k

 

https://youtu.be/RHU1mga3NTo

https://youtu.be/KNdGaSwhoDA

https://youtu.be/LUMn41uF-3M

Share This Article
Leave a Comment

Leave a Reply

Your email address will not be published. Required fields are marked *