ವಿಕಿಪೀಡಿಯಾ ವಿರುದ್ಧ ಗರಂ ಆದ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ

By
1 Min Read

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೈಜ ಘಟನೆಯನ್ನು ಆಧರಿಸಿದ ಚಿತ್ರವಾದರೂ, ವಿಕಿಪೀಡಿಯಾ ಬೇರೆ ರೀತಿಯಲ್ಲೇ ಸಿನಿಮಾವನ್ನು ಬಿಂಬಿಸಲಾಗಿದೆ. ಅದೊಂದು ಕಾಲ್ಪನಿಕ ಕಥೆ ಎಂದು ಬರೆಯಲಾಗಿದೆ. ಹಾಗಾಗಿ ಜ್ಯಾತ್ಯಾತೀತ ನಿಲುವಿನ ಉಲ್ಲಂಘನೆಯಾಗಿದೆ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ವಿದೇಶಿ ಪತ್ರಕರ್ತರು ಕೂಡ ಸಿನಿಮಾದ ಬಗ್ಗೆ ಸಲ್ಲದ ಪ್ರಚಾರ ಮಾಡುತ್ತಿರುವುದಕ್ಕೂ ಅವರು ಆಕ್ಷೇಪನೆ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ : ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

‘ವಿಕಿಪೀಡಿಯಾವನ್ನು ಜಗತ್ತಿನ ವಿಶ್ವಕೋಶ ಎಂದು ಕರೆಯಲಾಗುತ್ತಿದೆ. ಆದರೆ, ಅದು ತಪ್ಪು ಸಂದೇಶಗಳನ್ನು ರವಾನಿಸಲಾಗುತ್ತಿದೆ. ದಿ ಕಾಶ್ಮೀರ್ ಫೈಲ್ಸ್ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಅದಕ್ಕೆ ಪೂರಕ ಸಾಕ್ಷ್ಯವನ್ನು ಒದಗಿಸಿದ್ದೇನೆ. ಆದರೂ, ವಿಕಿಪೀಡಿಯಾದಲ್ಲಿ ಅದು ಕಾಲ್ಪನಿಕ ಕಥೆ ಎಂದು ಉಲ್ಲೇಖಿಸಲಾಗಿದೆ. ಇದು ಉದ್ದೇಶ ಪೂರ್ವಕವಾಗಿ ಆಗಿರುವ ಪ್ರಮಾದ’ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

ಇಡೀ ದೇಶವೇ ಸಿನಿಮಾದ ಬಗ್ಗೆ ಕೊಂಡಾಡಿದೆ. ಬಾಕ್ಸ್ ಆಫೀಸಿನಲ್ಲಿ ದಾಖಲೆಯ ರೀತಿಯಲ್ಲಿ ಹಣ ಮಾಡಿದೆ. ದೇಶದ ಜನರು ಸಿನಿಮಾ ಬೆನ್ನಿಗೆ ನಿಂತು, ಆಗಿರುವ ಘಟನೆಯನ್ನು ಖಂಡಿಸಿದ್ದಾರೆ. ಇಷ್ಟಾದರೂ ವಿಕಿಪೀಡಿಯಾ ಈ ಸಿನಿಮಾದ ಬಗ್ಗೆ ಬೇರೆಯ ರೀತಿಯಲ್ಲೇ ಬಿಂಬಿಸಲು ಪ್ರಯತ್ನ ಮಾಡುತ್ತಿದೆ. ಯಾಕೆ ಹೀಗೆ? ಜ್ಯಾತ್ಯಾತೀಯ ನಿಲುವು ಅಂದರೆ ಇದೇನಾ ಎಂದು ಅಗ್ನಿಹೋತ್ರಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

ವಿದೇಶಿ ಪತ್ರಕರ್ತರೊಂದಿಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದೆ. ವಿದೇಶಿ ಪತ್ರಕರ್ತರ ಸಂಘಕ್ಕೂ ಈ ವಿಷಯ ತಿಳಿಸಿದ್ದೆ. ಏಕಾಏಕಿ ಗೋಷ್ಠಿಯನ್ನು ಅವರು ರದ್ದು ಮಾಡಿದ್ದಾರೆ. ಇದರ ಹಿಂದಿರುವ ಉದ್ದೇಶವನ್ನೂ ಅವರು ಹೇಳಲಿಲ್ಲ. ಏನೇ ಆದರೂ, ಮೆ. 5ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಈ ವಿಷಯದ ಕುರಿತು ನಾನು ಹಿಂದೇಟು ಹಾಕಲಾರೆ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

Share This Article
Leave a Comment

Leave a Reply

Your email address will not be published. Required fields are marked *