ಕಿರುತೆರೆಯ ಜನಪ್ರಿಯ Weekend With Ramesh 5 ಶೋ ನೋಡುವ ಕಾತರಕ್ಕೆ ಇದೀಗ ತೆರೆ ಬಿದ್ದಿದೆ. ಮೊದಲ ಸಂಚಿಕೆಯಲ್ಲಿಯೇ ರಮ್ಯಾ (Ramya) ಜೊತೆಗಿನ ಮಾತುಕತೆಯೊಂದಿಗೆ ಭರ್ಜರಿ ಓಪನಿಂಗ್ಸ್ ಪಡೆದುಕೊಂಡಿದೆ. ಸಾಧಕರ ಸಾಲಿನ ಮೊದಲ ಅತಿಥಿಯಾಗಿ ರಮ್ಯಾ ಅಲಂಕರಿಸಿದ್ದಾರೆ. ಬಾಲ್ಯ, ಶಾಲೆ, ಸಿನಿಮಾ ರಂಗ ಹೀಗೆ ಸಾಕಷ್ಟು ವಿಚಾರಗಳನ್ನ ನಟಿ ಬಿಚ್ಚಿದ್ದಾರೆ. ಅದರಲ್ಲೂ Sanju Weds Geetha ಚಿತ್ರದ ತೆರೆ ಹಿಂದಿನ ಅಸಲಿ ಕಥೆಯನ್ನ ಹೇಳಲಾಗಿದೆ.
ಪುನೀತ್‌ಗೆ (Puneeth Rajkumar) ನಾಯಕಿಯಾಗಿ ಅಭಿ ಚಿತ್ರದ ಮೂಲಕ ರಮ್ಯಾ ಎಂಟ್ರಿ ಕೊಟ್ಟರು. ಎರಡನೇ ಹಿಟ್ ಸಿನಿಮಾ `ಎಕ್ಸ್ಕ್ಯೂಸ್‌ಮಿ’ ಬಳಿಕ `ಸಂಜು ವೆಡ್ಸ್ ಗೀತಾ’ ಸಿನಿಮಾದ ಸಕ್ಸಸ್ ಸೀಕ್ರೆಟ್ ಹೇಳಲಾಯಿತು. ಚಿತ್ರದ ನಿರ್ದೇಶಕ ನಾಗಶೇಖರ್ ಅವರ ವಿಡಿಯೋ ಪ್ರಸಾರ ಮಾಡಲಾಯಿತು. ಅದು ಮುಗಿದಂತೆಯೇ ನಾಗಶೇಖರ್ (Director Nagashekar) ಹಾಗೂ ನಾಯಕ ಶ್ರೀನಗರ ಕಿಟ್ಟಿ (Srinagar Kitty) ವೀಕೆಂಡ್ ವೇದಿಕೆಗೆ ಆಗಮಿಸಿ ರಮ್ಯಾಗೆ ಅಚ್ಚರಿ ಮೂಡಿಸಿದರು.
ಹಣ ಖಾಲಿಯಾಗಿ `ಸಂಜು ವೆಡ್ಸ್ ಗೀತಾ’ ಸಿನಿಮಾ ನಿಂತು ಹೋಗಿತ್ತು. ಆಗ ರಮ್ಯಾ ತಮ್ಮ ಹಣ ಹಾಕಿ ಸಿನಿಮಾದ ಚಿತ್ರೀಕರಣ ಮುಗಿಯುವಂತೆ ಮಾಡಿದರು. ಆ ಸಿನಿಮಾ ಸೂಪರ್ ಹಿಟ್ ಆಗಿ ನನಗೆ ಒಂದು ನೆಲೆ ಕೊಟ್ಟಿತು. ನನ್ನ ಮನೆಯಲ್ಲಿ ನಾನು ದೇವರ ಜೊತೆಗೆ ವಸ್ತುವೊಂದನ್ನಿಟ್ಟು ಪೂಜಿಸುತ್ತೇನೆ ಅದನ್ನು ರಮ್ಯಾಗೆ ಉಡುಗೊರೆಯಾಗಿ ತಂದಿದ್ದೇನೆ ಎಂದು ರಮ್ಯಾಗೆ ನಾಗಶೇಖರ್ ಉಡುಗೊರೆ ಕೊಟ್ಟರು. ಉಡುಗೊರೆಯನ್ನು ಬಿಚ್ಚಿ ನೋಡಿದ ರಮ್ಯಾಗೆ ಶಾಕ್. ಅದು `ಸಂಜು ವೆಡ್ಸ್ ಗೀತಾ’ ಚಿತ್ರದ ಕ್ಲಾಪ್ ಬೋರ್ಡ್ ಆಗಿತ್ತು. ನಾಗಶೇಖರ್‌ಗೆ ಅದನ್ನು ತಾನೇ ಇಟ್ಟುಕೊಳ್ಳುವುದಾಗಿ ರಮ್ಯಾ ಹೇಳಿದರು. ಇದನ್ನೂ ಓದಿ: ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್
ಈ ಸಿನಿಮಾದ ಶೂಟಿಂಗ್‌ಗಾಗಿ ಊಟಿಯಲ್ಲಿ ಬೀಡು ಬಿಟ್ಟಿದ್ದರು. ಯಾರ ಬಳಿಯೂ ಜಾಕೆಟ್, ಬೂಟ್ ಇಲ್ಲದ್ದನ್ನು ಕಂಡು ರಮ್ಯಾ ಹೋಗಿ ಎಲ್ಲರಿಗೂ ಜಾಕೆಟ್, ಬೂಟ್‌ಗಳನ್ನು ತಂದಿದ್ದನ್ನು ಸಹ ಇದೇ ಸಮಯದಲ್ಲಿ ನೆನಪಿಸಿಕೊಂಡರು. `ಸಂಜು ವೆಡ್ಸ್ ಗೀತಾ’ ಸಿನಿಮಾದ ಕತೆಯನ್ನು ರಮ್ಯಾರ ತಂದೆ ಮೊದಲು ಕೇಳಿ ಶುಭ ಹಾರೈಸಿದ್ದಲ್ಲದೆ, ಸಿನಿಮಾವನ್ನು ಮೊದಲು ನೋಡಿದ್ದು ಸಹ ಅವರೇ ಎಂಬುದನ್ನು ವೇದಿಕೆಯ ಮೇಲೆ ನಾಗಶೇಖರ್ ಬಿಚ್ಚಿಟ್ಟರು. ನಟ ಕಿಟ್ಟಿ ಸಹ ರಮ್ಯಾರ ಸ್ನೇಹವನ್ನು ನೆನಪಿಸಿಕೊಂಡರು. ರಮ್ಯಾ ಹಾಗೂ ಕಿಟ್ಟಿ ಸೇರಿ ಈ ಸಿನಿಮಾದ ದೃಶ್ಯವೊಂದನ್ನು ವೇದಿಕೆ ಮೇಲೆ ನಟಿಸಿದರು. ನಟಿ ರಮ್ಯಾ ಸಹ `ಸಂಜು ವೆಡ್ಸ್ ಗೀತಾ’ ಸಿನಿಮಾ ಚಿತ್ರೀಕರಣದ ನೆನಪುಗಳಿಗೆ ಜಾರಿದರು.

 
			

 
		 
		
 
                                
                              
		