ಸ್ಯಾಂಡಲ್‍ವುಡ್‍ಗೆ ಸಾಯಿ ಪಲ್ಲವಿ ಎಂಟ್ರಿ

Public TV
2 Min Read

ಬೆಂಗಳೂರು: ಬಹುಭಾಷಾ ನಟಿ ಸಾಯಿ ಪಲ್ಲವಿ ಟಾಲಿವುಡ್‍ನಲ್ಲಿ ಸಖತ್ ಬ್ಯುಸಿಯಾಗಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿದ್ದಾರೆ. ತಮ್ಮ ಸಹಜ ಸೌಂದರ್ಯದ ಮೂಲಕವೇ ಜನಮನ ಗೆದ್ದಿರುವ ಸಾಯಿ ಪಲ್ಲವಿ ಇದೀಗ ಸ್ಯಾಂಡಲ್‍ವುಡ್‍ಗೂ ಎಂಟ್ರಿ ಕೊಡುತ್ತಿದ್ದಾರೆ.

ಸಾಯಿ ಪಲ್ಲವಿ ಸದ್ಯ ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ರಿಲೀಸ್ ಡೇಟ್ ಸಹ ಅನೌನ್ಸ್ ಆಗಿದ್ದು, ಸೆಪ್ಟೆಂಬರ್ 10ಕ್ಕೆ ತೆರೆ ಕಾಣುತ್ತಿದೆ. ಇದೆಲ್ಲದರ ಮಧ್ಯೆ ಕನ್ನಡಿಗರಿಗೆ ಮತ್ತೊಂದು ಖುಷಿ ವಿಚಾರ ಸಿಕ್ಕಿದ್ದು, ಸಹಜ ಸುಂದರಿ ಸ್ಯಾಂಡಲ್‍ವುಡ್‍ಗೆ ಕಾಲಿಡುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಮಂಸೋರೆ 

ಸಿನಿಮಾ ಕುರಿತು ಮಂಸೋರೆ ಸಾಯಿ ಪಲ್ಲವಿ ಅವರೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದು, ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಂಸೋರೆ ಸ್ಟೋರಿ ಕೇಳಿ ಸಾಯಿ ಪಲ್ಲವಿ ಸಖತ್ ಖುಷಿಪಟ್ಟಿದ್ದಾರೆ. ಫೈನಲ್ ಸ್ಕ್ರಿಪ್ಟ್ ಕಳುಹಿಸಲು ಹೇಳಿದ್ದಾರೆ. ವಿವಾಹಕ್ಕೋಸ್ಕರ ಬ್ರೇಕ್ ತೆಗೆದುಕೊಂಡಿದ್ದೆ. ಆದಷ್ಟು ಬೇಗ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.

ಆ್ಯಕ್ಟ್ 1978 ಸಿನಿಮಾ ಮೂಲಕ ನಿರ್ದೇಶಕ ಮಂಸೂರೆ ಜನಪ್ರಿಯರಾಗಿದ್ದಾರೆ. ಕೊರೊನಾ ಮೊದಲ ಅಲೆಯ ಲಾಕ್‍ಡೌನ್ ಬಳಿಕ ಸಿನಿಮಾ ರಿಲೀಸ್ ಮಾಡಿ ಸಕ್ಸೆಸ್ ಆಗಿದ್ದಾರೆ. ಈ ಸಿನಿಮಾ ಒಳ್ಳೆಯ ಗಳಿಕೆ ಕಂಡಿತ್ತು. ಇದು ಟಾಲಿವುಡ್ ಅಂಗಳಕ್ಕೂ ತಲುಪಿ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದರು. ಹೀಗಾಗಿ ತೆಲುಗು ಹಾಗೂ ಹಿಂದಿಯಲ್ಲಿ ಈ ಸಿನಿಮಾ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿತ್ತು.

ಹರಿವು, ನಾತಿಚರಾಮಿ ಹಾಗೂ ಇತ್ತೀಚೆಗೆ ಆ್ಯಕ್ಟ್ 1978 ಸಿನಿಮಾ ಮಂಸೋರೆ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿವೆ. ಇದೆಲ್ಲದರ ಮಧ್ಯೆ ಬ್ರೇಕ್ ಪಡೆದಿದ್ದ ಮಂಸೋರೆ ಆಗಸ್ಟ್ 15ರಂದು ತಮ್ಮ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ. ಈ ಮೂಲಕ ಸಿಂಪಲ್ಲಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಮಾತ್ರ ಭಾಗವಹಿಸಿದ್ದರು. ಇದೀಗ ವಿವಾಹದ ಬಳಿಕ ಮತ್ತೆ ಕೆಲಸದಲ್ಲಿ ತೊಡಗಿದ್ದು, ಸಾಯಿ ಪಲ್ಲವಿ ಅವರಿಗೆ ಕರೆ ಮಾಡಿ ಕಥೆ ಹೇಳಿದ್ದಾರೆ. ಆದರೆ ಕಥೆ ಹೇಗಿದೆ, ಸಾಯಿ ಪಲ್ಲವಿ ಒಪ್ಪುತ್ತಾರಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *